ಹಿರಿಯ ಸಮಿತಿ: ಅಧ್ಯಕ್ಷ-ಶಿವಣ್ಣ ಗೌಡ, ಪ್ರ.ಕಾರ್ಯದರ್ಶಿ-ಆನಂದ ಗೌಡ
ಯುವ ಸಮಿತಿ: ಅಧ್ಯಕ್ಷ-ಪ್ರದೀಪ್ ಬಾಕಿಲ, ಪ್ರ.ಕಾರ್ಯದರ್ಶಿ-ಜಗದೀಶ್
ಮಹಿಳಾ ಸಮಿತಿ: ಅಧ್ಯಕ್ಷೆ-ಗೀತಾ, ಪ್ರ.ಕಾರ್ಯದರ್ಶಿ-ಕವಿತಾ
ಕಡಬ: ಆಲಂಕಾರು, ಪೆರಾಬೆ, ಕುಂತೂರು, ಹಳೆನೇರೆಂಕಿ, ರಾಮಕುಂಜ ಹಾಗೂ ಕೊಯಿಲ ಗ್ರಾಮಗಳನ್ನು ಒಳಗೊಂಡ ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆ.10ರಂದು ಆಲಂಕಾರು ದುರ್ಗಾಂಬಾ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು. ಆಲಂಕಾರು ವಲಯ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಿರಿಯ ಸಮಿತಿ, ಯುವ ಸಮಿತಿ ಹಾಗೂ ಮಹಿಳಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಹಿರಿಯ ಸಮಿತಿ:
ಆಲಂಕಾರು ವಲಯ ಹಿರಿಯ ಸಮಿತಿ ಅಧ್ಯಕ್ಷರಾಗಿ ಶಿವಣ್ಣ ಗೌಡ ಕಕ್ವೆ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಗೌಡ ಪಜ್ಜಡ್ಕ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಭವಾನಿಶಂಕರ ಪರಂಗಾಜೆ, ಕೋಶಾಧಿಕಾರಿಯಾಗಿ ಪದ್ಮಪ್ಪ ಗೌಡ ರಾಮಕುಂಜ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಗೌಡ ಎರ್ಮಾಳ, ಮಾಧ್ಯಮ ಸಂಯೋಜಕರಾಗಿ ಹರೀಶ್ ಬಾರಿಂಜ, ಗೌರವಾಧ್ಯಕ್ಷರಾಗಿ ರಾಮಣ್ಣ ಗೌಡ ಸುರುಳಿ ಆಯ್ಕೆಗೊಂಡರು.
ಯುವ ಸಮಿತಿ:
ಯುವ ಸಮಿತಿ ಅಧ್ಯಕ್ಷರಾಗಿ ಪ್ರದೀಪ್ ಬಾಕಿಲ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಕೊಯಿಲ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸದಾನಂದ ಕುಂಟ್ಯಾನ, ಕೋಶಾಧಿಕಾರಿಯಾಗಿ ಚಂದ್ರಹಾಸ ಪಟ್ಟೆ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ ಮಾಪಳ ಕುಂತೂರು, ಸಾಂಸ್ಕೃತಿಕ ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಆಯ್ಕೆಗೊಂಡರು.
ಮಹಿಳಾ ಸಮಿತಿ:
ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೀತಾ ಹಳೆನೇರೆಂಕಿ, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ರಾಮಕುಂಜ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಮತಾ ಆನೆಗುಂಡಿ, ಕೋಶಾಧಿಕಾರಿಯಾಗಿ ಪದ್ಮಾವತಿ ಕೇವಳ ಕುಂತೂರು, ಕ್ರೀಡಾ ಸಂಘಟನಾ ಕಾರ್ಯದರ್ಶಿಯಾಗಿ ಜಾಹ್ನವಿ ಹಳೆನೇರೆಂಕಿ, ಸಾಂಸ್ಕೃತಿಕ ಸಂಘಟನಾ ಜೊತೆ ಕಾರ್ಯದರ್ಶಿಯಾಗಿ ರಮ್ಯಾಕೇಶವ ಕಂಡತಡ್ಕ ಆಯ್ಕೆಯಾಗಿದ್ದಾರೆ.
ಹಿರಿಯ ಸಮಿತಿ, ಯುವ ಸಮಿತಿ, ಮಹಿಳಾ ಸಮಿತಿಗೆ ಸದಸ್ಯರ ಆಯ್ಕೆ ನಡೆಯಿತು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಅವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಉಪಾಧ್ಯಕ್ಷ ದಯಾನಂದ ಗೌಡ ಆಲಡ್ಕ, ಕಡಬ ತಾಲೂಕು ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪೂರ್ಣೇಶ್ ಬಾಬ್ಲುಬೆಟ್ಟು, ಪ್ರಧಾನ ಕಾರ್ಯದರ್ಶಿ ಸುಧೀಶ್ ಪಟ್ಟೆ, ಉಪಾಧ್ಯಕ್ಷ ಅಶೋಕ ಶೇಡಿ, ಕಡಬ ತಾಲೂಕು ಮಹಿಳಾ ಸಮಿತಿ ಅಧ್ಯಕ್ಷೆ ವೀಣಾರಮೇಶ್ ಕೊಲ್ಲೆಸಾಗು, ಕಾರ್ಯದರ್ಶಿ ಲಾವಣ್ಯಹೇಮಂತ್ ಮಂಡೆಕರ ಕಡಬ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸೇವಾ ಸಂಘದ ನಿರ್ಗಮನ ಅಧ್ಯಕ್ಷ ರಾಮಣ್ಣ ಗೌಡ ದೋಳ ಸ್ವಾಗತಿಸಿ, ನಿರೂಪಿಸಿದರು. ಯುವ ಸಮಿತಿ ಗೌರವಾಧ್ಯಕ್ಷ ಚಕ್ರಪಾಣಿ ವಂದಿಸಿದರು. ಯುವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಾಕಿಲ ನಿರೂಪಿಸಿದರು.