ಕಾಂಚನ-ನಡ್ಪ ದೇವಸ್ಥಾನದ ವರ್ಷಾವಧಿ ಜಾತ್ರೆ-ನೇಮೋತ್ಸವ

0

ಉಪ್ಪಿನಂಗಡಿ: ಗ್ರಾಮ ದೇವರಾದ ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವರ ವರ್ಷಾವಧಿ ಜಾತ್ರೆ, ದೈವಗಳ ನೇಮೋತ್ಸವ ಫೆ.14ರಂದು ರಾತ್ರಿ ನಡೆಯಿತು.


ವರ್ಣರ ಪಂಜುರ್ಲಿ, ಚಕ್ರವರ್ತಿ ಕೊಡಮಣಿತ್ತಾಯ, ಗ್ರಾಮ ದೈವ ಶಿರಾಡಿ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಫೆ.15ರಂದು ಅಪರಾಹ್ನ ದೊಂಪದ ಬಳಿಯ ಮಾರಿ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಕಾಂಚನ ರೋಹಿಣಿ ಸುಬ್ಬರತ್ನಂ, ಅರ್ಚಕರು, ಮೊಕ್ತೇಸರರೂ ಆದ ನಾರಾಯಣ ಬಡೆಕ್ಕಿಲ್ಲಾಯ, ದೇವಸ್ಥಾನದ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀಧರ ಗೌಡ ’ಶ್ರೀಹರಿ’ ನಡ್ಪ, ಉಪಾಧ್ಯಕ್ಷರಾದ ಶಿವರಾಮ ಕಾರಂತ ಉರಾಬೆ, ಕಾರ್ಯದರ್ಶಿ ಸುಧಾಕೃಷ್ಣ ಪಿ.ಎನ್., ಜೊತೆಕಾರ್ಯದರ್ಶಿ ಕುಶಾಲಪ್ಪ ಗೌಡ ಬಜತ್ತೂರುಗುತ್ತು, ಕೋಶಾಧಿಕಾರಿ ಜಗದೀಶ ರಾವ್ ಮಣಿಕ್ಕಳ, ಲೆಕ್ಕಪರಿಶೋಧಕರಾದ ಶಿವಣ್ಣ ಗೌಡ ಗುರುಮನೆ ಬಿದಿರಾಡಿ, ಟ್ರಸ್ಟಿಗಳಾದ ಕೆ.ವಿ.ಕಾರಂತ ಪ್ರಸನ್ನ ನಿಲಯ ಉರಾಬೆ, ಲೋಕೇಶ್ ಗೌಡ ಬಜತ್ತೂರು, ದುಗ್ಗಪ್ಪ ಗೌಡ ಅಗರ್ತಿಮಾರು, ಸುಮನ ಬಡೆಕ್ಕಿಲಾಯ, ಯುವ ಟ್ರಸ್ಟ್‌ನ ಸುರೇಶ್ ಬಿದಿರಾಡಿ, ಯಾದವ ನೆಕ್ಕರೆ, ದಿನೇಶ್ ನಡ್ಪ, ಪ್ರಸನ್ನ ಕಾರಂತ, ನೋಣಯ್ಯ ಪದಕ, ಶಿವರಾಮಪ್ರಸಾದ್ ಬಜತ್ತೂರು, ಎಲ್ಯಣ್ಣ ಗೌಡ ಶಿವಪುರ, ಕಿಶೋರ್ ಬಜತ್ತೂರು, ಶ್ರೀ ವಿಷ್ಣುಮೂರ್ತಿ ಭಜನಾ ಸಂಘದ ಅಧ್ಯಕ್ಷ ಉಮೇಶ್ ಗೌಡ ನೆಕ್ಕರೆ, ಕಾರ್ಯದರ್ಶಿ ಕೇಶವ ಗೌಡ ಅಗರ್ತ, ತಾ.ಪಂ.ಮಾಜಿ ಸದಸ್ಯ ಮುಕುಂದ ಬಜತ್ತೂರು ಸೇರಿದಂತೆ ದೇವಸ್ಥಾನದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here