ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪುರುಷರ ಕಬಡ್ಡಿ ತಂಡವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಂಗಳೂರು ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಂಗಳೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮ್ಯಾಟ್ ಅಂಕಣದಲ್ಲಿ ನಡೆದ ಈ ಕ್ರೀಡಾ ಕೂಟದಲ್ಲಿ ಮಂಗಳೂರು ವಿಭಾಗದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ನೀಡಿದ ವಿವೇಕಾನಂದ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಈ ಸಾಧನೆಯೊಂದಿಗೆ ತಂಡವು ತುಮಕೂರಿನಲ್ಲಿ ಫೆಬ್ರವರಿ 28 ಹಾಗೂ 29ರಂದು ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆದುಕೊಂಡಿದೆ.
ಕಾಲೇಜು ತಂಡದ ತೃತೀಯ ವರ್ಷದ ಎಐಎಂಎಲ್ ವಿಭಾಗದ ಪ್ರಫುಲ್ ಕ್ರೀಡಾಕೂಟದ ಉತ್ತಮ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ತೃತೀಯ ಮೆಕ್ಯಾನಿಕಲ್ ವಿಭಾಗದ ದೀಕ್ಷಿತ್.ಬಿ, ತೃತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಶ್ರವಣ್ ಕುಮಾರ್ ರೈ, ಗುರುಚರಣ್, ವಿಘ್ನೇಶ್ ಭಂಡಾರಿ, ತೃತೀಯ ಎಐಎಂಎಲ್ ವಿಭಾಗದ ಪುಷ್ಪಕ್.ಕೆ.ಎ, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಹಿತೇಶ್.ಒ, ಅಂತಿಮ ಮೆಕ್ಯಾನಿಕಲ್ ವಿಭಾಗದ ಸ್ವಸ್ತಿಕ್.ಬಿ.ಎಸ್, ದ್ವಿತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಗಣೇಶ್ ಕುಮಾರ್.ಸಿ.ಎಲ್, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಮನೀಶ್.ಎನ್.ಆರ್, ದ್ವಿತೀಯ ಎಂಬಿಎ ವಿಭಾಗದ ಚರಣ್.ಕೆ, ಪ್ರಥಮ ಎಂಬಿಎ ವಿಭಾಗದ ಬಬಿತ್‌ರಾಜ್.ಎ.ಪೂಜಾರಿ ತಂಡದ ಆಟಗಾರರಾಗಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ದೈಹಿಕ ಶಿಕ್ಷಣ ನಿರ್ದೇಶಕ ದೀಕ್ಷಿತ್ ತಂಡಕ್ಕೆ ತರಬೇತಿಯನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ತಿಳಿಸಿದ್ದಾರೆ