ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ-ಕೃಷಿಯ ಕುರಿತು ಮಾಹಿತಿ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಐಕ್ಯೂಏಸಿ ಮತ್ತು ಇಕೋ ಕ್ಲಬ್ ವತಿಯಿಂದ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕೃಷಿಕರು ಹಾಗೂ ಕಡಮ್ಮಾಜೆ ಫಾರ್ಮ್ಸ್ ಇಲ್ಲಿನ ಮಾಲಕ ದೇವಿಪ್ರಸಾದ್ ಕಡಮ್ಮಾಜೆ, ಕೃಷಿಗೆ ಗಡಿ ಎಂಬುದಿಲ್ಲ, ಆದರೆ ಅದಕ್ಕೆ ಬೇಕಾದುದು ಆಸಕ್ತಿ. ಹಿಂದಿನ ಕೃಷಿ ಪದ್ಧತಿ ಮತ್ತು ಈಗಿನ ಕೃಷಿ ಪದ್ಧತಿಯನ್ನು ತುಲನಾತ್ಮಕವಾಗಿ ತಿಳಿಸಿದರು. ಈಗಿನ ಕೃಷಿ ಚಟುವಟಿಕೆಗಳೆಲ್ಲವೂ ತಂತ್ರಜ್ಞಾನದ ಮೂಲಕವೇ ನಡೆಯುತ್ತಿದೆ, ಎಲ್ಲವೂ ನೂತನ ಕ್ರಮವನ್ನು ಅನುಸರಿಸುತ್ತಾ ಇರುವಾಗ ನಾವು ಕೂಡಾ ಇದರೊಂದಿಗೆ ಈ ತಂತ್ರಜ್ಞಾನಕ್ಕೆ ಬದಲಾಗಬೇಕು ಎಂದರು. ಜೇಣು ಸಾಕಾಣಿಕೆ, ಮಳೆಕೊಯ್ಲಿನ ಮಹತ್ವ, ಸಿಟಿ ವೇಸ್ಟ್ ನಿಂದ ಗೊಬ್ಬರ ತಯಾರಿಕೆ, ಎರೆಹುಳು ಗೊಬ್ಬರದ ಕುರಿತಾಗಿ ಮಾಹಿತಿ ನೀಡಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ ವಕೀಲರು ಹಾಗೂ ಅತಿಥಿ ಉಪನ್ಯಾಸಕ ಮನೋಹರ್ ಎ., ಮಾತನಾಡಿ, ತಮ್ಮ ಬಾಲ್ಯದ ಕೃಷಿ ಚಟುವಟಿಕೆ ಮತ್ತು ಕೃಷಿಯ ಕುರಿತಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಅಕ್ಷತಾ ವಹಿಸಿದ್ದರು. ಕಾನೂನು ಪ್ರಾಧ್ಯಾಪಕರು ಹಾಗೂ ಇಕೋ ಕ್ಲಬ್ ನ ಸಂಯೋಜಕಿ ದಿಶಾ, ಮತ್ತು ಕಂಪ್ಯೂಟರ್ ಉಪನ್ಯಾಸಕ ತಿಲಕ್ ಟಿ. ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಚಿಂತನ್ ಮತ್ತು ಗಿರೀಶ್ ಪ್ರಾರ್ಥಿಸಿ, ಸ್ವರ್ಣಗೌರಿ ಕಾರ್ಯಕ್ರಮ ನಿರೂಪಿಸಿದರು. ವರದಶಂಕರ್, ಸ್ವಾಗತಿಸಿ, ಚಂದ್ರಿಕ ವಂದಿಸಿದರು.

LEAVE A REPLY

Please enter your comment!
Please enter your name here