ಚಿನ್ನಾಭರಣ ಮಾರಾಟ ಕ್ಷೇತ್ರದ ಸುಪ್ರಸಿದ್ದ ಮಳಿಗೆ – ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಪುತ್ತೂರಿನಲ್ಲಿ ಶುಭಾರಂಭ: ಬಹುಭಾಷಾ ನಟಿ ಪ್ರಿಯಾಮಣಿಯವರಿಂದ ನೂತನ ಮಳಿಗೆ ಉದ್ಘಾಟನೆ

0

ಪುತ್ತೂರು: ಚಿನ್ನಾಭರಣ ಕ್ಷೇತ್ರದ ಸುಪ್ರಸಿದ್ದ ಮಳಿಗೆ `ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್’ ಇದರ ಪುತ್ತೂರು ಮಳಿಗೆ ಫೆ.22ರಂದು ಪುತ್ತೂರು ಏಳ್ಮುಡಿ ಸೇತುವೆ ಬಳಿಯ ತಾಜ್ ಟವರ್‍ಸ್‌ನಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯನ್ನು ರಿಬ್ಬನ್ ತುಂಡರಿಸುವ ಮೂಲಕ ಉದ್ಘಾಟಿಸಿದ ಜನಪ್ರಿಯ ಬಹುಭಾಷಾ ಚಿತ್ರನಟಿ ಪ್ರಿಯಾಮಣಿ ಮಾತನಾಡಿ
ಸುಲ್ತಾನ್ ಮಳಿಗೆ ಆಭರಣಗಳ ಅಭೂತಪೂರ್ವ ಸಂಗ್ರಹದಲ್ಲಿ ಹೆಸರು ಪಡೆದಿದ್ದು ಮಳಿಗೆ ಕೂಡಾ ಆಕರ್ಷಕವಾಗಿದೆ. ಪುತ್ತೂರಿನಲ್ಲಿ ಸುಲ್ತಾನ್ ಮಳಿಗೆ ಶುಭಾರಂಭಗೊಂಡಿರುವುದು ಬಹಳ ಖುಷಿಯಾಗಿದೆ ಎಂದು ಹೇಳಿದರು.


ಸುಲ್ತಾನ್‌ನ 10ನೇ ಮಳಿಗೆ ಪುತ್ತೂರಿನಲ್ಲಿ ಶುಭಾರಂಭಗೊಂಡಿದ್ದು ಮುಂದಕ್ಕೆ ಎಲ್ಲೆಡೆ 100 ಮಳಿಗೆ ಉದ್ಘಾಟನೆ ಆಗಬೇಕು ಮತ್ತು ಆ ಎಲ್ಲಾ ನೂರು ಮಳಿಗೆಗಳ ಉದ್ಘಾಟನೆಯನ್ನೂ ನಾನೇ ಮಾಡಬೇಕು ಎಂದು ಪ್ರಿಯಾಮಣಿ ನಗೆ ಚಟಾಕಿ ಹಾರಿಸಿದರು.ಈ ಸಂಸ್ಥೆ ನನ್ನ ಹೃದಯಕ್ಕೆ ಹತ್ತಿರ ಆಗಿದ್ದು ಇದು ಭವಿಷ್ಯದಲ್ಲಿ ಅಭಿವೃದ್ಧಿಯ ಉತ್ತುಂಗಕ್ಕೆ ಏರಲಿ ಎಂದು ಅವರು ಹಾರೈಸಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಜೆಮ್ ಸ್ಟೋನ್ ಸಂಗ್ರಹವನ್ನು ಅನಾವರಣಗೊಳಿಸಿದರು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಅವರು ಮಕ್ಕಳ ಚಿನ್ನಾಭರಣ ಮತ್ತು ಬೆಳ್ಳಿಯ ಸಂಗ್ರಹವನ್ನು ಅನಾವರಣಗೊಳಿಸಿದರು. ಲಯನ್ಸ್ 317ಡಿ ಇದರ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿಯವರು CAIA ಲೈಫ್ ಸ್ಟೈಲ್ ಜ್ಯುವೆಲ್ಲರಿಯನ್ನು ಅನಾವರಣಗೊಳಿಸಿದರು.

ಪುತ್ತೂರು ಚಿನ್ನದ ಮಾರುಕಟ್ಟೆಯಾಗಿದೆ-ಮಠಂದೂರು
ವೈವಿಧ್ಯಮಯ ವಜ್ರಗಳ ಸಂಗ್ರಹವನ್ನು ಅನಾವರಣಗೊಳಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ಪುತ್ತೂರು ಭಾಗದ ಜನರು ಚಿನ್ನಾಭರಣ ಪ್ರಿಯರಾಗಿದ್ದು ಪುತ್ತೂರಿನಲ್ಲಿ ಸಾಕಷ್ಟು ಚಿನ್ನದ ಮಳಿಗೆ ಇದೆ, ಪುತ್ತೂರಿನ ಚಿನ್ನದ ಮಳಿಗೆಯನ್ನು ಬೆಳೆಸುವ ಕಾರ್ಯವನ್ನು ಪುತ್ತೂರು ಆಸುಪಾಸಿನ ಜನತೆ ಮಾಡಿದ್ದಾರೆ. ಪುತ್ತೂರು ಚಿನ್ನದ ಮಾರುಕಟ್ಟೆ ಕೇಂದ್ರವಾಗಿ ಮಾರ್ಪಾಡಾಗುತ್ತಿದ್ದು ಇದೀಗ ಸುಲ್ತಾನ್ ಗೋಲ್ಡ್ ಅದಕ್ಕೆ ಇನ್ನಷು ಪುಷ್ಠಿ ನೀಡಿದೆ ಎಂದು ಹೇಳಿದರು. ಕಾಸರಗೋಡು, ಕೇರಳ ಭಾಗದಲ್ಲಿ ಮನೆ ಮಾತಾಗಿರುವ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಪುತ್ತೂರಿನಲ್ಲೂ ತನ್ನ ಶಾಖೆ ಪ್ರಾರಂಭ ಮಾಡುವ ಮುಖಾಂತರ ಇಲ್ಲಿಯೂ ಆಧುನಿಕ ಶೈಲಿಯ ಆಭರಣಗಳನ್ನು ನೀಡಲು ತಯಾರಾಗಿದೆ. ಈ ಮಳಿಗೆ ಇನ್ನಷ್ಟು ಹೆಸರುವಾಸಿಯಾಗಿ ಯಶಸ್ಸು ಗಳಿಸಲಿ ಎಂದು ಅವರು ಆಶಿಸಿದರು.

ಸುಲ್ತಾನ್ ಪುತ್ತೂರಿಗೆ ಬಂದಿರುವುದು ಖುಷಿಯಾಗಿದೆ-ಹೇಮನಾಥ ಶೆಟ್ಟಿ
ಕೊಂಬೆಟ್ಟು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸುಲ್ತಾನ್ ಚಿನ್ನದ ಮಳಿಗೆ ಪುತ್ತೂರಿಗೆ ಬಂದಿರುವುದು ಖುಷಿ ನೀಡಿದ್ದು ಮಳಿಗೆಯನ್ನು ನೋಡುವಾಗಲೇ ಇಲ್ಲಿಂದ ಚಿನ್ನ ಖರೀದಿ ಮಾಡಬೇಕು ಎನ್ನುವಂತಾಗಿದೆ ಎಂದು ಹೇಳಿ ನೂತನ ಮಳಿಗೆಗೆ ಶುಭ ಹಾರೈಸಿದರು.

ನಾವು ಪ್ರೋತ್ಸಾಹಿಸಬೇಕು-ಇಬ್ರಾಹಿಂ ಸಾಗರ್
ಆಂಟಿಕ್ ಸಂಗ್ರಹವನ್ನು ಅನಾವರಣಗೊಳಿಸಿದ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ಪುತ್ತೂರಿನಲ್ಲಿ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆ ಶುಭಾರಂಭಗೊಂಡಿರುವುದು ಖುಷಿ ನೀಡಿದ್ದು ಈ ಮಳಿಗೆಯ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡುವ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.

ಯಶಸ್ಸಿನ ಪಥದಲ್ಲಿ ಸಾಗಲಿ-ಆಕರ್ಷಣ್ ಹಾಜಿ
ಚಿನ್ನಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ ಮೌಂಟೆನ್ ವ್ಯೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಪಿ ಅಹ್ಮದ್ ಹಾಜಿ ಆಕರ್ಷಣ್ ಮಾತನಾಡಿ ಪುತ್ತೂರಿನಲ್ಲಿ ಶುಭಾರಂಭಗೊಂಡ ಸುಲ್ತಾನ್ ಚಿನ್ನಾಭರಣಗಳ ಮಳಿಗೆಯು ಉತ್ತಮ ವ್ಯವಹಾರದ ಮೂಲಕ ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕಲ್ಲೇಗ ಜುಮಾ ಮಸೀದಿಯ ಗೌರವಾಧ್ಯಕ್ಷ ಬಿ.ಎ ಶಕೂರ್ ಹಾಜಿ ಕಲ್ಲೇಗ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ರಶೀದ್ ವಿಟ್ಲ, ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಮುಕ್ವೆ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಮುಲಾರ್ ಜೆಡಿಎಸ್ ಮುಖಂಡರಾದ ಅಶ್ರಫ್ ಕಲ್ಲೇಗ, ಇಬ್ರಾಹಿಂ ಗೋಳಿಕಟ್ಟೆ, ನ್ಯಾಯವಾದಿಗಳಾದ ನೂರುದ್ದೀನ್ ಸಾಲ್ಮರ, ಶಾಕಿರ್ ಹಾಜಿ ಮಿತ್ತೂರು, ಕಾಂಗ್ರೆಸ್ ಮುಖಂಡರಾದ ಟಿ.ಎಂ ಶಹೀದ್, ನಝೀರ್ ಮಠ, ಉದ್ಯಮಿಗಳಾದ ಚಂದ್ರಹಾಸ ಶೆಟ್ಟಿ, ಉಮ್ಮರ್ ಪಟ್ಟೆ, ಖಾಸಿಂ ಹಾಜಿ ಮಿತ್ತೂರು, ಅಬ್ದುಲ್ ರಹಿಮಾನ್ ಆಝಾದ್ ಮತ್ತಿತರು ಹಲವರು ಉಪಸ್ಥಿತರಿದ್ದರು.


ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಅಬ್ದುಲ್ ರವೂಫ್ ಮತ್ತು ಅಬ್ದುಲ್ ರಹೀಂ ಅತಿಥಿಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಉನ್ನಿತನ್, ಪುತ್ತೂರು ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಹಾಗೂ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.

ಎಂಗೇಜ್‌ಮೆಂಟ್ ರಿಂಗ್ ನೆನಪಿಸಿಕೊಂಡ ನಟಿ..!
ನಾನು ಮತ್ತು ನನ್ನ ಗಂಡ ಮದುವೆ ಆಗುವ ಮಂಚಿತವಾಗಿ ಎಂಗೇಜ್‌ಮೆಂಟ್ ರಿಂಗ್ ಖರೀದಿಸಲು ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆಗೆ ಹೋಗಿ ಚಿನ್ನ ಖರೀದಿಸಿದ್ದೇವೆ. ಆ ನೆನಪು ನನಗೆ ಈಗಲೂ ತುಂಬಾ ಖುಷಿ ಕೊಡುತ್ತಿದೆ. ಸುಲ್ತಾನ್‌ನಲ್ಲಿ ಒಳ್ಳೆಯ ಕಲೆಕ್ಷನ್ ಇದೆ.
-ಪ್ರಿಯಾಮಣಿ, ಚಿತ್ರ ನಟಿ

ಬೃಹತ್ ಜನಸ್ತೋಮ..!
ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ಮಳಿಗೆ ಉದ್ಘಾಟನಾ ಸಮಾರಂಭಕ್ಕೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಆಗಮಿಸಿ ಮಳಿಗೆಯನ್ನು ವೀಕ್ಷಿಸಿದರು. ಮಳಿಗೆಯ ಒಳಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಜನೋಸ್ತೋಮವೇ ಕಂಡು ಬಂದಿತ್ತು. ಆಗಮಿಸಿದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಬೆಲೆ ಏರಿಕೆಯಿಂದ ರಕ್ಷಣೆ ಪಡೆಯಿರಿ:
ಸುಲ್ತಾನ್‌ನಲ್ಲಿ ಕನಿಷ್ಠ ತಯಾರಿಕಾ ವೆಚ್ಚ ಇದೆ ಮತ್ತು ವೇಸ್ಟೇಜ್ ವೆಚ್ಚ ಇರುವುದಿಲ್ಲ, ಹಾಗೆಯೇ 11 ತಿಂಗಳ ಮಾಸಿಕ ಕಂತುಗಳ ಯೋಜನೆ ಇದೆ. ಪಾವತಿಗಾಗಿ ಮೊಬೈಲ್ ಆಪ್ ಕೂಡ ಇರುತ್ತದೆ. ಮದುವೆ ಮತ್ತು ಇನ್ನಿತರ ಸಮಾರಂಭಗಳಿಗಾಗಿ ಮುಂಗಡ ಪಾವತಿ ಮಾಡಿ ಚಿನ್ನದ ಬೆಲೆ ಏರಿಕೆಯಿಂದ ರಕ್ಷಣೆ ಪಡೆಯಬಹುದಾಗಿದೆ. ಮದುವೆ ಖರೀದಿಗೆ ವಿಶೇಷ ರಿಯಾಯಿತಿ ಇರುತ್ತದೆ. ಸುಲ್ತಾನ್ ಹಬ್ಬ ಹರಿದಿನಗಳಿಗೆ, ಹಾಗೆಯೇ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೆ ವಧು-ವರರಿಗೆ… ಹೀಗೆ ಎಲ್ಲಾ ವರ್ಗದ ಜನರಿಗೆ ಜನಪ್ರಿಯ ಆಕರ್ಷಕ ಆಭರಣಗಳ ಮಳಿಗೆಯಾಗಿದೆ.

LEAVE A REPLY

Please enter your comment!
Please enter your name here