ರಸ್ತೆ ಬದಿ ನಿಂತಿದ್ದ ಕಾರಿನಲ್ಲಿ ತಲ್ವಾರ್ ಪತ್ತೆ ಪ್ರಕರಣ-ನಾಲ್ವರು ಆರೋಪಿಗಳಿಗೂ ಜಾಮೀನು ಮಂಜೂರು

0

ಪುತ್ತೂರು:ಕೆಲ ದಿನಗಳ ಹಿಂದೆ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಸಮೀಪ ರಸ್ತೆ ಬದಿ ನಿಂತಿದ್ದ ಕಾರೊಂದರಲ್ಲಿ ತಲ್ವಾರ್ ಪತ್ತೆಯಾದ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಾಲ್ವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪುತ್ತೂರು ನಗರ ಪೊಲೀಸ್ ಠಾಣಾ ನಿರೀಕ್ಷಕ ಸತೀಶ್ ಜಿ.ಜೆ.ಅವರು ಸಿಬ್ಬಂದಿಗಳೊಂದಿಗೆ ಕಾಯಾಚರಣೆ ನಡೆಸಿದ ವೇಳೆ, ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರೊಂದನ್ನು ಪರಿಶೀಲಿಸಿದಾಗ, ಕಾರಿನಲ್ಲಿ ಒಂದು ತಲ್ವಾರ್ ಪತ್ತೆಯಾಗಿತ್ತು.ಈ ಬಗ್ಗೆ ಹೆಚ್ಚಿನ ವಿಚಾರಣೆಗಾಗಿ ಹಾಗೂ ಕಾನೂನು ಕ್ರಮಕ್ಕಾಗಿ ಕಾರಿನಲ್ಲಿದ್ದ ಬಂಟ್ವಾಳ ಗೋಳ್ತಮಜಲು ನಿವಾಸಿ ಕಿಶೋರ್ ಕಲ್ಲಡ್ಕ (36ವ.),ಕಬಕ ನಿವಾಸಿ ಮನೋಜ್(23ವ.),ಪುತ್ತೂರು ನಿವಾಸಿ ಆಶಿಕ್(28ವ)ಮತ್ತು ಪಡ್ನೂರು ನಿವಾಸಿ ಸನತ್ ಕುಮಾರ್(24ವ.)ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.ಆರೋಪಿಗಳನ್ನು ಫೆ.೨೦ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ವಾದಿಸಿದ್ದರು.ಬಂಧಿತ ಆರೋಪಿ ಕಿಶೋರ್ ಕಲ್ಲಡ್ಕ, ಕೆಲ ಸಮಯದ ಹಿಂದೆ ಪೆರ್ಲಂಪಾಡಿಯಲ್ಲಿ ನಡೆದಿದ್ದ ಚರಣ್‌ರಾಜ್ ರೈ(ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಆರೋಪಿ) ಕೊಲೆ ಪ್ರಕರಣದ ಆರೋಪಿಯೂ ಆಗಿದ್ದು ಈ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.ನೆಹರುನಗರದಲ್ಲಿ ನಡೆದಿದ್ದ ಅಕ್ಷಯ್ ಕೊಲೆ ಪ್ರಕರಣದ ಆರೋಪಿ ಮನೀಷ್ ಅವರ ಸಹೋದರ ಮನೋಜ್ ಅವರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪದಲ್ಲಿ ಕಿಶೋರ್ ಕಲ್ಲಡ್ಕ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು.

LEAVE A REPLY

Please enter your comment!
Please enter your name here