ನಿಡ್ಪಳ್ಳಿ; ಕರ್ನಪ್ಪಾಡಿ ಪವಿತ್ರ ನೆಲದಲ್ಲಿ ಸುಮಾರು 5 ಶತಮಾನಗಳ ಹಿಂದೆ ಮೂಡಿಬಂದ ಮಾತೆ ದೇಯಿ ಬೈದೆತಿಯ ಅವಳಿ ಪುತ್ರರತ್ನರಾದ ಕೋಟಿ ಚೆನ್ನಯರು ನಡೆದಾಡಿದ ಕರ್ನಪ್ಪಾಡಿ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ಕರ್ನಪ್ಪಾಡಿ ನಿಡ್ಪಳ್ಳಿ ಇದರ ವತಿಯಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.22 ಮತ್ತು 23 ರಂದು ನಡೆಯಿತು.
ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಇವರ ಅಧ್ಯಕ್ಷತೆಯಲ್ಲಿ ಕರ್ನಪ್ಪಾಡಿ ಮನೆಯವರು ಹಾಗೂ ಗರಡಿ ಸೇವಾ ಸಮಿತಿ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆದು ಊರ ಪರವೂರ ಸಾವಿರಾರು ಭಕ್ತಾದಿಗಳು ಪಾಲ್ಗೊಂಡರು.
ಫೆ.22 ರಂದು ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ ನಡೆಯಿತು.ಸಂಜೆ ಭಜನಾ ಕಾರ್ಯಕ್ರಮ ನಂತರ ರಾತ್ರಿ ಭಂಡಾರ ತೆಗೆದು ಕೊಡಮಂತಾಯ ದೈವದ ನೇಮ ನಡೆಯಿತು.ಫೆ.23 ರಂದು ಸಂಜೆ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ.ರಾತ್ರಿ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬೈದರುಗಳ ಗರಡಿ ಇಳಿಯುವುದು, ಕಿನ್ನಿದಾರು ಗರಡಿ ಇಳಿಯುವುದು ನಡೆದು ಪ್ರಾತಃಕಾಲ ದರ್ಶನ ಪಾತ್ರಿಗಳ ಸೇಟ್, ಬೈದರುಗಳ ಸೇಟ್ ನಂತರ ಫೆ. 24 ರಂದು ಬೆಳಿಗ್ಗೆ ಪ್ರಸಾದ ವಿತರಣೆ ನಡೆಯಿತು.
ಸೇವಾ ಸಮಿತಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಮತ್ತು ಸಮಿತಿ ಸದಸ್ಯರು ಹಾಗೂ ಕರ್ನಪ್ಪಾಡಿ ಮನೆಯವರು ಹಾಗೂ ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.