ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಒತ್ತಡ ಹಾಕುವುದಕ್ಕೆ ಖಂಡನೆ-ಪುತ್ತಿಲ ಪರಿವಾರದಿಂದ ಕಾಂಗ್ರೆಸ್ ವಿರುದ್ದ ಹೋರಾಟದ ಎಚ್ಚರಿಕೆ

0

ಪುತ್ತೂರು: ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ 5 ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒತ್ತಡ ಹಾಕಿ ಬಳಸಿಕೊಳ್ಳುತ್ತಿರುವುದನ್ನು ಪುತ್ತಿಲ ಪರಿವಾರ ತೀವ್ರ ಖಂಡಿಸುತ್ತದೆ. ಕಾರ್ಯಕರ್ತೆಯರಿಗೆ ಒತ್ತಡ ಹಾಕುವುದನ್ನು ಕೈಬಿಡದಿದ್ದರೆ ಪುತ್ತಿಲ ಪರಿವಾರದಿಂದ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.


ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆಯ ಕೆಲಸ , ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಮನೆಗೆ ಆಹಾರ ಸಾಗಟ, ಪಲ್ಸ್ ಪೊಲೀಯೋ, ಪೋಷಣ್ ಟ್ರ್ಯಾಕರ್, ಮತದಾನ ಸೇರ್ಪಡೆ-ರದ್ದು ತಿದ್ದುಪಡಿ ಮೊದಲಾದ ಕೆಲಸಗಳಿದ್ದು ಅದರ ಒತ್ತಡದ ನಡುವೆ ಪುಟಾಣಿ ಮಕ್ಕಳಿಗೆ ಪಾಠದ ಸಮಯವೇ ಇಲ್ಲದಂತಾಗಿದೆ. ಇದರ ನಡುವೆ ಕಳೆದ ಎರಡು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳವನ್ನು ಕೊಟ್ಟಿಲ್ಲ ಎನ್ನುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕಾಂಗ್ರೆಸ್ ಪಕ್ಷ ತನ್ನ ಯೋಜನೆಯ ಸಮೀಕ್ಷೆಗೆ ಉಪಯೋಗಿಸುವುದನ್ನು ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರ ಸಂಘ ತೀವ್ರ ವಿರೋಧಿಸಿದೆ.‌


ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಪಕ್ಷದ ಕೆಲಸಕ್ಕೆ ಉಪಯೋಗಿಸುವುದನ್ನು ಸಿದ್ದರಾಮಯ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಕೈಬಿಡದಿದ್ದರೆ ಮುಂದೆ ಜರಗುವ ಹೋರಾಟವನ್ನು ಎದುರಿಸಬೇಕಾದಿತು ಎಂಬ ಎಚ್ಚರಿಕೆಯನ್ನು ನೀಡುತ್ತೇವೆ. ಕಾರ್ಯಕರ್ತೆಯರ ಹೋರಾಟಕ್ಕೆ ಪುತ್ತಿಲ ಪರಿವಾರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದೆ.

LEAVE A REPLY

Please enter your comment!
Please enter your name here