ಉಪ್ಪಿನಂಗಡಿ: ಅಶಕ್ತರ, ಅನಾಥರ, ಬಡವರ ಸಂಕಷ್ಟಕ್ಕೆ ಸಹಾಯ ಮಾಡಿದವರಿಗೆ ಅಲ್ಲಾಹುವಿನ ಕಡೆಯಿಂದ ಪ್ರೀತಿ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆ ರೀತಿ ಕೊಡುವವರಿಗೆ ಅಲ್ಲಾಹು ಯಾವತ್ತೂ ಕಡಿಮೆ ಮಾಡಲಾರ ಎಂದು ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಮುದರ್ರಿಸ್ ಸಲಾಂ ಫೈಝಿ ಎಡಪ್ಪಾಲ್ ತಿಳಿಸಿದರು.
ಇಲ್ಲಿನ ಉಬಾರ್ ಡೋನಾರ್ಸ್ ಹೆಲ್ಫ್ಲೈನ್ನ ವತಿಯಿಂದ ಮಾ.11ರಂದು ನಡೆದ ರಂಝಾನ್ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಲ್ಲಿನ ಯುವಕರ ತಂಡ ಉಬಾರ್ ಡೋನಾರ್ಸ್ ಸಂಸ್ಥೆಯ ಮುಖೇನ ಮುಸ್ಲಿಮ್ ಸಮಾಜದಲ್ಲಿನ ಬಡವರನ್ನು, ಅನಾರೋಗ್ಯ ಪೀಡಿತರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ಹೋಗಿ ಆಹಾರ ಕಿಟ್ ನೀಡುತ್ತಿದೆ. ಅನಾಥ ಹೆಣ್ಣು ಮಕ್ಕಳ ಮದುವೆಗೆ ಸಹಾಯ, ಮನೆ ನಿರ್ಮಿಸಿ ಕೊಡುವ ಕೆಲಸ, ಅನಾರೋಗ್ಯ ಪೀಡಿತರ ಚಿಕಿತ್ಸೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇದು ಯುವಕರಲ್ಲಿರುವ ಮಾನವೀಯತೆಯನ್ನು ಪತ್ರಿಬಿಂಬಿಸುತ್ತಿದೆ ಎಂದರು.
ಅನುಗ್ರಹ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಯ ನಿರ್ದೇಶಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ನಾನು ಹಲವು ವರ್ಷಗಳಿಂದ ಈ ಉಬಾರ್ ಡೋನರ್ಸ್ ತಂಡದ ಕಾರ್ಯ ವೈಖರಿಗಳನ್ನು ನೋಡುತ್ತಿದ್ದು, ಅವರು ಮಾಡುತ್ತಿರುವ ಈ ಮಾನವೀಯ ಸೇವೆಯು ಭಗವಂತನು ಮೆಚ್ಚುವಂತದ್ದು. ನಿಮ್ಮ ಈ ಸೇವೆ ಸದಾ ಬಡವರ ಪಾಲಿಗೆ ಆಶಾಕಿರಣವಾಗಿರಲಿ ಎಂದರು.
ಕುದ್ಲೂರು ನೂರಾನಿಯ್ಯ ಜುಮಾ ಮಸೀದಿಯ ಖತೀಬ್ ಅದ್ನಾನ್ ಅನ್ಸಾರಿ ಮಾತನಾಡಿ, ಕೆಲ ಯುವಕರು ದುಡಿದು ತನ್ನ ಸ್ವಂತ ಮನೆಗೇನೂ ಕೊಡದೇ, ಸುಮ್ಮನೇ ದುಂದು ವೆಚ್ಚ ಮಾಡುತ್ತಾ ತನ್ನ ಮನೆಯವರನ್ನು ಸಂಕಷ್ಟದಲ್ಲಿರಿಸುವ ಇಂದಿನ ಕಾಲಘಟ್ಟದಲ್ಲಿ ಇಲ್ಲಿನ ಯುವಕರ ಸಮಾಜಮುಖಿ ಕಾರ್ಯ ಅಂತವರಿಗೊಂದು ಪಾಠವಾಗಲಿ ಎಂದರು.
ಸಮಾರಂಭದಲ್ಲಿ ಮಾಲೀಕುದ್ದೀನಾರ್ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಎಚ್., ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕೂರ್ ಶುಕ್ರಿಯಾ, ಕೋಶಾಧಿಕಾರಿ ಮುಸ್ತಫಾ ಡಬಲ್ ಫೋರ್, ಜೊತೆ ಕಾರ್ಯದರ್ಶಿ ರವೂಫ್ ಯು.ಟಿ., ಸದಸ್ಯರಾದ ಸಿದ್ದೀಕ್ ಕೆಂಪಿ, ಫಾರೂಕ್ ಅಂಡೆತ್ತಡ್ಕ, ಮುನೀರ್ ಎನ್ಮಾಡಿ, ಉಸ್ತಾದರುಗಳಾದ ಹೈದರ್ ಸಅದಿ, ಅಶ್ರಫ್ ಹನೀಫೀ, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ತೌಸೀಫ್ ಯು.ಟಿ., ಉದ್ಯಮಿಗಳಾದ ಫೈಝಲ್ ಸ್ವರ್ಣಮಹಲ್, ಅಶ್ರಫ್ ಡಿಸೈನ್, ಇಸ್ಮಾಯಿಲ್ ತಂಙಳ್, ಉಬಾರ್ ಡೋನರ್ಸ್ ಹೆಲ್ಪ್ ಲೈನ್ನ ಸದಸ್ಯರುಗಳಾದ ಇಬ್ರಾಹೀಂ ಆಚೀ, ಶುಕೂರ್ ಮೇದರಬೆಟ್ಟು, ರಫೀಕ್ ಮಾಸ್ಟರ್, ಶಬೀರ್ ನಂದಾವರ, ಜಮಾಲ್ ಕೆಂಪಿ, ನಾಸೀರ್ ಗಾಂಧಿಪಾರ್ಕ್, ಇಬ್ರಾಹೀಂ ಸಿಟಿ, ದಾವೂದ್ ಗಾರ್ಮೆಂಟ್ಸ್, ಸಿಯಾಕ್ ಕೆಂಪಿ, ಶೌಕತ್ ಗಾಂಧಿ ಪಾರ್ಕ್, ಅಫ್ತಾಬ್ ಗಾಂಧಿ ಪಾರ್ಕ್, ಲತೀಫ್ ಕುದ್ಲೂರ್, ರಿಯಾಝ್ ಕರಾಯ, ಇರ್ಷಾದ್ ಎಲೈಟ್, ರಮೀಝ್ ಪ್ರೇಮ್, ಆಶಿಕ್ ಉಬಾರ್, ಶಿಹಾಬ್ ತಂಙಳ್, ಶುಕೂರ್ ಕೆಂಪಿ, ಮನ್ಸೂರು ಕುದ್ಲೂರು, ಖಲಂದರ್ ಕುದ್ಲೂರ್, ಮುಸ್ತಫಾ ಕುದ್ಲೂರ್, ಮುಝಾಫರ್, ರವೂಫ್ ಕುದ್ಲೂರು, ನವಾಝ್ ಎಲೈಟ್, ಜಮಾಲ್ ಕೆಂಪಿ, ಇಸಾಕ್ ಸಿಟಿ, ಇಮ್ರಾನ್ ಎ.ವೈ.ಎಂ., ಶುಕೂರ್ ಎಸ್ಟು, ನೌಸೀಫ್ ಎಲೈಟ್, ಅಫಾಖ್ ಬೋವು, ಅಶ್ರಫ್ ಸೋನು, ಖಾದರ್ ಆದರ್ಶನಗರ, ಶಾಹೀದ್ ಎಚ್.ಎಂ., ಅಫ್ನಾನ್ ಆತೂರು ಉಪಸ್ಥಿತರಿದ್ದರು.
ಬರಹಗಾರ ಜಲೀಲ್ ಮುಖ್ರಿ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಇರ್ಷಾದ್ ಯು.ಟಿ. ವಂದಿಸಿದರು.
ಉಬಾರ್ ಡೋನರ್ ಹೆಲ್ತ್ಲೈನ್ ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿ, 2015ರಲ್ಲಿ ಸಮಾಜಸೇವೆಯ ಧ್ಯೇಯವನ್ನಿಟ್ಟುಕೊಂಡು ಈ ಸಂಸ್ಥೆ ಆರಂಭವಾಗಿದ್ದು, ಮೊದಲಾಗಿ ಬಡವರಿಗೆ ಬಟ್ಟೆ ವಿತರಣೆ ನಡೆಸಿದ್ದೇವೆ. ಈಗ ಉಪ್ಪಿನಂಗಡಿ ಪರಿಸರದ ಉದ್ಯಮಿಗಳು, ದಾನಿಗಳು ಮತ್ತು ವಿದೇಶದಲ್ಲಿರುವವರ ಸಹಾಯ ಪಡೆದುಕೊಂಡು ಈ ಸಂಸ್ಥೆಯ ಮೂಲಕ ಅನಾರೋಗ್ಯ ಪೀಡಿತರಿಗೆ ನೆರವು, ಆಹಾರದ ಕಿಟ್ ವಿತರಣೆ, ಬಡ ಹೆಣ್ಮಕ್ಕಳ ಮದುವೆಗೆ ನೆರವು ಸೇರಿದಂತೆ ನಿರಂತರ ಸಮಾಜಸೇವೆಯನ್ನು ನಡೆಸುತ್ತಲೇ ಬಂದಿದ್ದೇವೆ. ನಮ್ಮ ಈ ಸೇವೆಯು ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. ಇತರ ಧರ್ಮದ ಅಶಕ್ತರಿಗೂ ನಮ್ಮ ಸಂಸ್ಥೆಯ ವತಿಯಿಂದ ಸಹಾಯ ನೀಡಿದ್ದೇವೆ. ಈ ಬಾರಿ ಉಪ್ಪಿನಂಗಡಿ, ಕರಾಯ, ಕುಪ್ಪಟ್ಟಿ, ನೆಕ್ಕಿಲಾಡಿ, ಶಾಂತಿನಗರ, ಕರ್ವೇಲ್, ಪೆರ್ನೆ, ಮಠ, ಬೆದ್ರೋಡಿ, ಕೊಕ್ಕಡ, ಪೆರಿಯಡ್ಕ, ಕೊಯಿಲ, ಆತೂರು ಮೊದಲಾದ ಕಡೆಯಲ್ಲಿನ 350 ಕುಟುಂಬವನ್ನು ಗುರುತಿಸಿ, ಒಂದು ಕುಟುಂಬಕ್ಕೆ 1 ತಿಂಗಳಿಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಅವರ ಮನೆಗೆ ಮುಟ್ಟಿಸುವ ಕಾರ್ಯ ಮಾಡುತ್ತಿದ್ದೇವೆ. ಕೋವಿಡ್ ಲಾಕ್ಡ್ನ್ ಸಂದರ್ಭದಲ್ಲಿ 3 ಹಂತದಲ್ಲಿ ಆಹಾರದ ಕಿಟ್ ವಿತರಿಸಿದ್ದೇವೆ ಎಂದರು.