*ವಿಶೇಷ ಕಾರ್ಡ್ ಯೋಜನೆಯ ಮೂಲಕ ಮನೆ ಮನೆಯಲ್ಲೂ ವಜ್ರ
*ಎರಡು ತಿಂಗಳೊಳಗೆ ವಜ್ರವನ್ನು ಚಿನ್ನಕ್ಕೆ ಬದಲಾವಣೆ ಅವಕಾಶ
**ಶೇ. 90 ಕ್ಯಾಶ್ ಬ್ಯಾಕ್ ಆಫರ್, ಶೇ.95 ಎಕ್ಸೇಂಜ್ ಆಫರ್
ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್ ಫೆಸ್ಟ್‌ಗೆ ಮಾ.20ರಂದು ಚಾಲನೆ ನೀಡಲಾಯಿತು. ಎಲ್ಲರ ಮನೆಯಲ್ಲೂ ವಜ್ರಾಭರಣ ಇರಬೇಕೆಂಬ ಪರಿಕಲ್ಪಣೆಯೊಂದಿಗೆ ಮುಳಿಯ ಸಂಸ್ಥೆ ” ನನ್ನ ಪ್ರಥಮ ವಜ್ರಾಭರಣ” ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.
ಪ್ರತಿಯೊಬ್ಬರಿಗೂ ವಜ್ರಾಭರಣ ನೀಡುವ ಮುಳಿಯದ ಕನಸು ನನಸಾಗಲಿ
ದ್ವಾರಕ ಕನ್ ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್ ಡೈಮಂಡ್ ಫೆಸ್ಟ್‌ಗೆ ಚಾಲನೆ ನೀಡಿ ಮಾತನಾಡಿ ಸುಮಾರು ದಶಕಗಳ ಆರಂಭದಲ್ಲಿ ಪುತ್ತೂರಿನಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯೊಂದಿಗಿರುವ ಮುಳಿಯ ಜ್ಯುವೆಲ್ಸ್ ಎಲ್ಲರ ಮನೆಮಾತಾಗಿದೆ. ಸಂಸ್ಥೆಯ ಉದ್ಯಮ ಯಶಸ್ಸು ಇನ್ನು ಮುಂದಕ್ಕೂ ಇನ್ನೂ ಹೆಚ್ಚಾಗಲಿ. ಅವರ ಪ್ರತಿ ಮನೆಯಲ್ಲೂ ವಜ್ರಾಭ ರಣ ಇರಬೇಕೆಂಬ ಉದ್ದೇಶ ಏನಿದೆಯೋ ಅದು ಈಡೇರಿಸುವಂತೆ ಮಹಾಲಿಂಗೇಶ್ವರ ದೇವರ ಅಶೀರ್ವಾದ ಇರಲಿ. ಅದೇ ರೀತಿ ಪುತ್ತೂರಿನ ಪ್ರತಿಯೊಬ್ಬರಿಗೂ ವಜ್ರಾಭರಣ ನೀಡುವ ಅವರ ಕನಸು ನಸಾಗಲಿ ಎಂದರು.
ವಜ್ರಕ್ಕೆ ಹೂಡಿಕೆ ಲಾಭದಾಯಕ:
ಮುಳಿಯ ಜ್ಯುವೆಲ್ಸ್‌ನ ಮುಖ್ಯ ಆಡಳಿತಾಧಿಕಾರಿ ಕೇಶವಪ್ರಸಾದ್ ಮುಳಿಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಜ್ರ ಕೈ ಗೆಟಕದು ಎಂಬ ಭಾವನೆ ಗ್ರಾಹಕರಲ್ಲಿದೆ. ಆದರೆ ಪ್ರಸ್ತುತ ಕಾಲದಲ್ಲಿ ಬೆಲೆಬಾಳುವ ಆಂಡ್ರಾಯ್ಡ್ ಮೊಬೈಲ್ ಖರೀದಿಸುವ ಸಂದರ್ಭದ ದರ ಮತ್ತೆ ಮತ್ತೆ ಕಡಿಮೆ ಆಗುತ್ತಾ ಹೋಗುತ್ತದೆ. ಆದರೆ ವಜ್ರವನ್ನು ಇವತ್ತು ಕೊಂಡರೆ ನಾಳೆ ಅದರ ದರ ಜಾಸ್ತಿಯಾಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಇವತ್ತು ವಜ್ರಕ್ಕೆ ಹೂಡಿಕೆ ಮಾಡುವುದು ಲಾಭದಾಯಕ. ಈ ನಿಟ್ಟಿನಲ್ಲಿ ಎಲ್ಲರ ಮನೆಯಲ್ಲೂ ವಜ್ರಾಭರಣ ಇರಬೇಕೆಂಬ ಪರಿಕಲ್ಪನೆಯ ಜೊತೆಗೆ ’ನನ್ನ ಪ್ರಥಮ ವಜ್ರಾಭರಣ’ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ಮ್ಯಾನೇಜರ್ ಸಂಜೀವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಂಕರ್, ರಾಜೇಶ್ ಅತಿಥಿಗಳನ್ನು ಗೌರವಿಸಿದರು. ಪೂಜಿತ ಪ್ರಾರ್ಥಿಸಿದರು. ಪ್ಲೋರ್ ಮೇನೆಜರ್ ಯತೀಶ್ ಸ್ವಾಗತಿಸಿ, ಪ್ಲೋರ್ ಮೇನೆಜರ್ ಆನಂದ್ ವಂದಿಸಿದರು. ಉಪಶಾಖಾ ಪ್ರಬಂಧಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ರಮೇಶ್ ಭಟ್, ಇಂಜಿನಿಯರ್ ಸತ್ಯನಾರಾಯಣ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಸಹಿತ ನಮ್ಮ ಸಂಸ್ಥೆಯ ಶಾಖೆಗಳಲ್ಲಿ ಆ ಭಾಗದ ಪ್ರತಿಯೊಬ್ಬ ಗ್ರಾಹಕರು ವಜ್ರಾಭರಣ ಹೊಂದಿರಬೇಕೆಂಬ ಯೋಚನೆಯಲ್ಲಿ ಮತ್ತು ನನಗೊಂದು ವಜ್ರದ ಆಭರಣ ಮಾಡಬೇಕೆಂಬ ಎಲ್ಲರ ಮನಸಿನ ಇಚ್ಚೆ ಈಡೇರಬೇಕೆಂಬ ನಿಟ್ಟಿನಲ್ಲಿ ಈ ಡೈಮಂಡ್ ಫೆಸ್ಟ್ ಆಯೋಜಿಸಿದ್ದೇವೆ. ಒಂದು ಕಾಲದಲ್ಲಿ ವಜ್ರವನ್ನು ಖರೀದಿಸುವುದು ಕಷ್ಟ ಎಂಬ ಭಾವನೆ ಇತ್ತು. ಇವತ್ತು ನಮ್ಮ ಆದಾಯದ ಮಿತಿ, ಜನರ ಜೀವನ ಶೈಲಿ ಉತ್ತಮವಾದಂತೆ ಇವತ್ತು ವಜ್ರ ಎಲ್ಲರಿಗೂ ಕೈಗೆಟಕುವ ಸೊತ್ತು ಆಗಿದೆ. ಮೈ ಡೈಮಂಡ್ ಫೆಸ್ಟ್‌ನಲ್ಲಿ ಸಂಸ್ಥೆಯಿಂದ ಮನೆಗಳಿಗೆ ವಿಶೇಷ ಕಾರ್ಡ್ ಅನ್ನು ಕೊಡುತ್ತೇವೆ. ಅದರಲ್ಲಿ ವಜ್ರವನ್ನು ಹೊಂದಿರದ ಅಥವಾ ಹೊಂದಿರುವ ಕುರಿತು ಗುರುತು ಮಾಡಿಕೊಂಡಾಗ ಇಲ್ಲದವರು ವಜ್ರವನ್ನು ಖರೀದಿ ಮಾಡುವ ವ್ಯವಸ್ಥೆ ಇದೆ. ಈ ಯೋಜನೆಯಲ್ಲಿ ಶೇ.90 ಕ್ಯಾಶ್ ಬ್ಯಾಕ್ ಮತ್ತು ಶೇ. 95 ಎಕ್ಸೇಂಜ್ ಆಫರ್ ನೀಡಲಾಗಿದೆ. ’ಮೈ ಫೆಸ್ಟ್ ಡೈಮಂಡ್’ ಯೋಜನೆಯಲ್ಲಿ ಯಾರು ಪ್ರಥಮವಾಗಿ ವಜ್ರ ಖರೀದಿ ಮಾಡುತ್ತಾರೋ ಅವರಿಗೆ ವಜ್ರ ಹಿಡಿಯುವುದಿಲ್ಲ ಎಂದಾದರೆ ಎರಡು ತಿಂಗಳೊಳಗೆ ಅವರು ಚಿನ್ನದೊಂದಿಗೆ ಅದನ್ನು ಯಾಥಾ ಸ್ಥಿತಿಯಲ್ಲಿ ಬದಲಾವಣೆಗೆ ಅವಕಾಶ ನೀಡಲಾಗಿದೆ.
–ಕೇಶವಪ್ರಸಾದ್ ಮುಳಿಯ
ಮುಖ್ಯ ಆಡಳಿತಾಧಿಕಾರಿ ಮುಳಿಯ ಜ್ಯುವೆಲ್ಸ್