ಪುತ್ತೂರು: ಭಾರತೀಯ ಸೇನೆಯಲ್ಲಿ ಎಸಿಪಿ ಹವಾಲ್ದಾರ್ ಆಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಚಂದ್ರಶೇಖರ ಗೌಡ ಕೋಟಿಪಾಲು ಇಚ್ಲಂಪಾಡಿ ಮಾ.31 ಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೋಟೆಪಾಲು ಮನೆ ನಿವಾಸಿ ಈಶ್ವರಪ್ಪ ಗೌಡ ಹಾಗೂ ಯಮುನಾ ದಂಪತಿಯ ದ್ವಿತೀಯ ಪುತ್ರರಾಗಿರುವ ಚಂದ್ರಶೇಖರ ಕೆ. ಅವರು 1981 ನೇ ಒಕ್ಟೋಬರ್ 14 ರಂದು ಜನಿಸಿ ಬಳಕ ತನ್ನ ಪ್ರಾಥಮಿಕ ಶಿಕ್ಷಣವನ್ನು ಚಾರ್ವಕ ಗ್ರಾಮದ ಕೊಪ್ಪ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಳಿಕ ಇಚ್ಲಂಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ನಂತರ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾಭ್ಯಾಸವನ್ನು ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜಿನಲ್ಲಿ ಪೂರೈಸಿರುತ್ತಾರೆ.
ವಿದ್ಯಾಭ್ಯಾಸದ ಬಳಿಕ 2002ನೇ ಮಾ.13 ರಂದು ಭಾರತೀಯ ಭೂಸೇನೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಹೈದರಬಾದ್ ಆರ್ಟಿ ಸೆಂಟರ್ನಲ್ಲಿ ತರಬೇತಿ ಮುಗಿಸಿ 2003 ನೇಜ.5 ರಂದು ಪಂಜಾಬ್ನಲ್ಲಿ ಕರ್ತವ್ಯಕ್ಕೆ ಹಾಜರಾಗಿ 2004 ರ ವರೆಗೆ ಕರ್ತವ್ಯ ನಿರ್ವಹಿಸಿ, 2004 ರಲ್ಲಿ ಅಸ್ಸಾಂನಲ್ಲಿ ಕರ್ತವ್ಯಕ್ಕೆ ಹಾಜರಾಗಿ 2006 ರ ವರೆಗೆ ಕರ್ತವ್ಯ ನಿರ್ವಹಿಸಿ, 2006 ರಿಂದ ಗುಜರಾತ್ನಲ್ಲಿ ಕರ್ತವ್ಯಕ್ಕೆ ಹಾಜರಾಗಿ 2013 ರ ವರೆಗೆ ಕರ್ತವ್ಯ ನಿರ್ವಹಿಸಿ 2013 ರಿಂದ ಜಮ್ಮು ಕಾಶ್ಮೀರದಲ್ಲಿ 2017 ರ ವರೆಗೆ ಕರ್ತವ್ಯ ನಿರ್ವಹಿಸಿ, 2017 ರಿಂದ 2021 ರ ವರೆಗೆ ಸಿಕಂದರ್ ಬಾದ್ನಲ್ಲಿ ಕರ್ತವ್ಯ ನಿರ್ವಹಿಸಿ 2021 ರಿಂದ 2024 ರ ಫೆಬ್ರವರಿ ವರೆಗೆ ಕರ್ತವ್ಯ ನಿರ್ವಹಿಸಿ, ಮಾ.1 ರಿಂದ ಮಾರ್ಚ್31 ರ ವರೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ದೇಶ ಸೇವೆಯನ್ನು ನಿರ್ವಹಿಸಿ ಮಾ.31 ರಂದು ಕರ್ತವ್ಯದಿಂದ ನಿವೃತ್ತಿಯಾಗಿರುತ್ತಾರೆ.
ಹೈದ್ರಾಬಾದ್ ಆರ್ಟಿ ಸೆಂಟರ್ನಲ್ಲಿ ತರಬೇತಿ ಮುಗಿಸಿದ ನಂತರ ಪಂಜಾಬ್ ತಿರಾಜ್ಪುರ್, ಅಸ್ಸಾಂ, ಗುಜರಾತ್, ಪುಣೆ, ಜಮ್ಮು ಕಾಶ್ಮೀರ ದೇವಲಲ್ಲಿ, ಸಿಕಂದರಬಾದ್ ನಲ್ಲಿ ಕರ್ತವ್ಯ ನಿರ್ವಹಿಸಿ 22 ವರ್ಷ ಸೇವೆ ಸಲ್ಲಿಸಿ ಇದೀಗ ಇಂದು ನಿವೃತ್ತಿ ಹೊಂದಿದ್ದಾರೆ.
2009ನೇ ಇಸವಿಯಲ್ಲಿ ದೇನಿಕಾ ಎಂಬವರನ್ನು ವಿವಾಹವಾಗಿ ಮಕ್ಕಳಾದ ಮಾ.ಚಿಂತನ್ ಎಂಟನೇ ತರಗತಿ, ಬೇಬಿ ಹಸ್ತಾ 4ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಇಬ್ಬರೂ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.