ಏ.4: ಪಾಲ್ತಾಡಿ ಇಲ್ಲಾರೆಗುಡ್ಡೆ ಮಂಜಕೊಟ್ಯ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿ ಪ್ರವೇಶೋತ್ಸವ, ಪುನರ್ ಪ್ರತಿಷ್ಠಾ ಕಲಶಾಭಿಷೇಕ

0

ಪುತ್ತೂರು: ತುಳುನಾಡಿನ ಕಾರಣಿಕ ಶಕ್ತಿಗಳಾದ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಇಲ್ಲಾರೆಗುಡ್ಡೆ ಪಾಲ್ತಾಡಿ ಇಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮತ್ತು ಪರಿವಾರ ದೈವಗಳ ನೂತನ ಗರಡಿಯ ಪ್ರವೇಶೋತ್ಸವ, ಪುನರ್ ಪ್ರತಿಷ್ಠಾ ಕಲಶಾಭಿಷೇಕವು ಪುರೋಹಿತರಾದ ಗಣೇಶ್ ಭಟ್ ಮಾಡಾವುರವರ ನೇತೃತ್ವದಲ್ಲಿ ಏ.3 ಮತ್ತು 4ರಂದು ನಡೆಯಲಿದೆ.

ಏ.3ರಂದು ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ಪೂಜೆ, ವಾಸ್ತು ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ಮಂಗಳಾರತಿ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಏ.4ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಶ ಪ್ರತಿಷ್ಠೆ, ಬೆಳಿಗ್ಗೆ 10.30ಕ್ಕೆ ದೈವಗಳ ಪ್ರತಿಷ್ಠಾ ಕಾರ್ಯಗಳು, ಕಲಶಾಭಿಷೇಕ ನಡೆದು ದೈವಗಳಿಗೆ ತಂಬಿಲ ಸೇವೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗುವಂತೆ ಪಾಲ್ತಾಡಿ ಇಲ್ಲಾರೆಗುಡ್ಡೆ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಮಂಜಕೊಟ್ಯ ಗರಡಿಯ ಕಾಪಾಡ ಚೋಮ ಬೇರಿಕೆ, ಗೌರವಾಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಗೌರವಾಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಅಧ್ಯಕ್ಷ ಬಾಬು ಬಿ.ಕೆ ಪಾಲ್ತಾಡಿ, ಉಪಾಧ್ಯಕ್ಷರುಗಳಾದ ಚಂದ್ರಶೇಖರ ಉಪ್ಪಳಿಗೆ, ಗಿರೀಶ ಹಸಂತಡ್ಕ ಮತ್ತು ಮಾಧವ ಕಾಯರ್‌ಗುರಿ, ಪ್ರಧಾನ ಕಾರ್ಯದರ್ಶಿ ಆನಂದ ನಿಲಾವು, ಕೋಶಾಧಿಕಾರಿ ರಮೇಶ್ ನಿಲಾವು, ಜತೆ ಕಾರ್ಯದರ್ಶಿ ಸುಂದರ ಪಿ.ಎಂ, ಜತೆ ಕೋಶಾಧಿಕಾರಿ ದಿನೇಶ್ ಬೇರಿಕೆ ಹಾಗೂ ಸದಸ್ಯರುಗಳು ಹಾಗೂ ಆಡಳಿತ ಮಂಡಳಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನ ಚಾಕೊಟೆತ್ತಡಿ ಮಾಡ ಪಾಲ್ತಾಡಿ ಅಲ್ಲದೆ ಆರು ಮನೆಯವರು ಮತ್ತು ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ.3ರ ಸಂಜೆ ವೈದಿಕ ಕಾರ್ಯಗಳು:
ಏ.3ರಂದು ಸಂಜೆ ಸ್ವಸ್ತಿ ಪುಣ್ಯವಾಚನ, ವಾಸ್ತು ಪೂಜೆ, ವಾಸ್ತು ಬಲಿ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ರಾತ್ರಿ ಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here