ಪುತ್ತೂರು: ಬನ್ನೂರು ಶ್ರೀ ದೈಯ್ಯೆರೆಮಾಡ ನಡಿಮಾರಿನಲ್ಲಿ ಗುಳಿಗ ಸಾನಿಧ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಎ.3ರಂದು ಬೆಳಿಗ್ಗೆ ನಡೆಯಿತು.
ಬನ್ನೂರು ಗ್ರಾಮದ ದೈಯರ ಮಾಡ ನಡಿಮಾರು ಮತ್ತು ಆನೆಮಜಲು ನ್ಯಾಯಾಲಯದ ಸಂಕೀರ್ಣದ ಬಳಿಯ ಶ್ರೀ ಇಷ್ಟದೇವತೆ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ ಸಾನಿಧ್ಯದಲ್ಲಿ ಫೆ.೨೨ರಂದು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕ ಕ್ಷೇತ್ರದಲ್ಲಿ ಗುಳಿನ ಸಾನಿಧ್ಯಕ್ಕೆ ಶಿಲಾನ್ಯಾಸಕ್ಕೆ ನಿಶ್ಚಯಿಸಿದಂತೆ ನಡಿಮಾರಿನಲ್ಲಿ ಸಾನಿದ್ಯದ ಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಶ್ರೀಕೃಷ್ಣ ಭಟ್ ಕೆದುವಡ್ಕ ಅವರು ಶಿಲಾನ್ಯಾಸ ನೆವೇರಿಸಿದರು. ಈ ಸಂದರ್ಭ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ವಿ.ನಾರಾಯಣ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರತ್ನಾಕರ ರೈ ಕೆಳಗಿನಮನೆ, ಖಜಾಂಚಿ ರಮೇಶ್ ಗೌಡ ನೀರ್ಪಾಜೆ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೌನೀಶ್, ವಾಸಪ್ಪ ಗೌಡ, ಗುಡ್ಡಪ್ಪ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.