ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ಅತ್ರಬೈಲಿನ ನಿವಾಸಿಗಳಾಗಿರುವ ಅವಿವಾಹಿತ, ವೃದ್ಧ ಹಾಗೂ ಅಸಹಾಯಕ ಪರಿಸ್ಥಿತಿಯಲ್ಲಿರುವ ಸಹೋದರ-ಸಹೋದರಿ ತಿಮ್ಮ ನಾಯ್ಕ ಮತ್ತು ಕಮಲರವರಿಗೆ ಶ್ರೀ ಕ್ಷೇತ್ರದಿಂದ ಮಾಸಿಕ ರೂ.750/-ರಂತೆ ಮಾಸಾಶನ ಸೌಲಭ್ಯವು ಮಂಜೂರಾಗಿದ್ದು ಇದರ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷರಾದ ಯಶೋಧಾರವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗಣ್ಯರಾದ ನರಸಿಂಹ ನಾಯಕ್, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ವಿಜಯಲಕ್ಷ್ಮೀ, ವಲಯ ಮೇಲ್ವಿಚಾರಕಿ ಶಾರದಾ ಎ, ಸೇವಾಪ್ರತಿನಿಧಿ ಶಶಿಕಲಾ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷರಾದ ಸುರೇಶ್, ಸದಸ್ಯರಾದ ರಮೇಶ್ ತೋಟ, ಗೋಪಾಲ ಸಪಲ್ಯ, ಕೇಶವ ಹಾಗೂ ಜನಾರ್ಧನರವರು ಉಪಸ್ಥಿತರಿದ್ದರು.