46.1ಲಕ್ಷ ರೂ.ಪಾವತಿಸಿ 2ಲಕ್ಷ ರೂ.ವಾಪಸ್ ಪಡೆದ ಯುವಕ- ಫೇಸ್‌ಬುಕ್‌ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಜಾಹೀರಾತು ನೋಡಿ ಮೋಸ ಹೋದ ಯುವಕನಿಂದ ಸೆನ್ ಠಾಣೆಯಲ್ಲಿ ದೂರು ದಾಖಲು

0

ಪುತ್ತೂರು:ಫೇಸ್‌ಬುಕ್‌ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿ ಮುಂದುವರಿದ ವ್ಯಕ್ತಿಯೋರ್ವರು ಹಂತಹಂತವಾಗಿ 46.1 ಲಕ್ಷ ಹಣವನ್ನು ಪಾವತಿಸಿ, 2 ಲಕ್ಷ ರೂ.ವಾಪಸ್ ಪಡೆದು ಮೋಸ ಹೋಗಿರುವ ಘಟನೆಯೊಂದು ವರದಿಯಾಗಿದೆ.ಈ ಕುರಿತು ಸಾಲ್ಮರ ಆಶಿಯಾನ ಯು.ಅಬ್ದುಲ್ಲಾ ಹಾಜಿ ಎಂಬವರ ಮಗ ಮುಹಮ್ಮದ್ ಅನ್ಸಾಫ್ ಎಂ.(40ವ.)ಎಂಬವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

20-02-2024ರಂದು ಫೇಸ್ ಬುಕ್‌ನಲ್ಲಿ ಶೇರ್ ಮಾರ್ಕೆಟ್ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿದಾಗ ಅದರಲ್ಲಿ ಗುಡ್ ಇನ್‌ಕಂ ರಿಸಲ್ಟ್‌ ಎಂಬುದಾಗಿ ಇದ್ದು, ಅದರಲ್ಲಿದ್ದ ಲಿಂಕನ್ನು ಒತ್ತಿದಾಗ ವಾಟ್ಸಾಪ್ ಪೇಜ್‌ವೊಂದು ತೆರೆದುಕೊಂಡಿತ್ತು.ಸದ್ರಿ ಪೇಜ್‌ನಲ್ಲಿ ಅಪರಿಚಿತ ವ್ಯಕ್ತಿಯು ಕಂಪೆನಿಯಲ್ಲಿರುವ ಸ್ಟಾಕ್‌ನ ಬಗ್ಗೆ ಡಿಟೈಲ್ಸ್ ನೀಡಿ ಬೇರೊಂದು ವಾಟ್ಸಾಪ್ ಗ್ರೂಪ್‌ಗೆ ಜಾನ್ ಮಾಡಿಸಿರುತ್ತಾರೆ.ಅದರಲ್ಲಿ ಗ್ರೂಪ್ ಎಡ್ಮಿನ್ ದೀಪ್ತಿ ಶರ್ಮ ಎಂಬವರು ಇದ್ದು, ನಂತರ ಸದ್ರಿ ವಾಟ್ಸಾಪ್ ಗ್ರೂಪ್‌ನವರು ಹಣ ಹೂಡಿಕೆ ಮಾಡಲು ಬೇರೊಂದು ವಾಟ್ಸಪ್ ಗ್ರೂಪ್‌ಗೆ ಜಾನ್ ಆಗುವಂತೆ ತಿಳಿಸಿ, ನೀಡಿದ ಲಿಂಕ್ ಒತ್ತಿದಾಗ ವಿಕಿಂಗ್ ಗ್ಲೋಬಲ್ ಇನ್ವೆಸ್ಟರ‍್ಸ್‌ ಎಂಬ ವಾಟ್ಸಾಪ್ ಗ್ರೂಪ್ ತೆರೆದಿದ್ದು, ಅದರಲ್ಲಿ ವಿಕಿಂಗ್ ಎಂಬವರು ಅಲ್ಲದೇ ಸುಮಾರು 100ಕ್ಕಿಂತ ಹೆಚ್ಚಿನ ಸದಸ್ಯರು ಇರುತ್ತಾರೆ. ಸದ್ರಿ ವಾಟ್ಸಾಪ್ ಗ್ರೂಪಿನಲ್ಲಿ ಟ್ರೇಡಿಂಗ್ ಬಗ್ಗೆ ಮಾಹಿತಿಯನ್ನು ನೀಡಿ ಆಪ್ ಡೌನ್‌ಲೋಡ್ ಮಾಡಲು ತಿಳಿಸಿದರು.ಅದರಂತೆ ತಾನು ವಿಕಿಂಗ್ ಟ್ರೇಡಿಂಗ್‌ ಎಂಬ ಹೆಸರಿನ ಆಪ್ ಡೌನ್‌ಲೋಡ್ ಮಾಡಿ ಅದರಲ್ಲಿ ತನ್ನ ಹೆಸರಿನಲ್ಲಿ ಟ್ರೇಡಿಂಗ್ ಖಾತೆ ತೆರೆದು ಅದಕ್ಕೆ ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬ್ರ, ಬ್ಯಾಂಕ್ ವಿವರವನ್ನು ಹಾಕಿದ್ದೆ.ಸದ್ರಿ ಆಪ್‌ಗೆ ಹಣ ಹಾಕುವ ಬಗ್ಗೆ ಮಾಹಿತಿಯನ್ನು ವ್ಯಕ್ತಿಯೊಬ್ಬ ವಾಟ್ಸಾಪ್‌ನಲ್ಲಿ ಕೋಡ್ ಹಾಗೂ ವಿವಿಧ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿದಂತೆ ತಾನು ದಿನಾಂಕ: 21-02-2024ರಂದು ರೂ.10,000ಹಣವನ್ನು ಪಾವತಿಸಿದ್ದೆ.ನಂತರ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಲು ತಿಳಿಸಿದ್ದಕ್ಕೆ, ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು ರೂ.46,10,೦೦೦ ಹಣವನ್ನು ಪಾವತಿಸಿದ್ದು ಅದರಲ್ಲಿ ಹಂತಹಂತವಾಗಿ ಒಟ್ಟು ರೂ 2,೦೦,೦೦೦ ಹಣ ತನ್ನ ಎರಡು ಖಾತೆಗೆ ಮರು ಜಮೆಯಾಗಿದೆ ಎಂದು ಅವರು ದೂರಿನಲ್ಲಿ ವಿವರಣೆ ನೀಡಿದ್ದಾರೆ.ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸು (ಠಾಣಾ ಅ.ಕ್ರ 06/2024) ಕಲಂ 66(ಸಿ),66(ಡಿ)ಐಟಿ ಆಕ್ಟ್ ಆಂಡ್ 417,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here