ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೊತ್ಸವದ ಪ್ರಯುಕ್ತ ಭಕ್ತಾದಿಗಳ ಅನುಕೂಲಕ್ಕಾಗಿ ಶ್ರೀ ದೇವಳದ ಎದುರು ಗದ್ದೆಯಲ್ಲಿ ಹೊರೆಕಾಣಿಕೆ ಸಂಗ್ರಹಣಾ ಕಛೇರಿ ಉದ್ಘಾಟಿಸಲಾಯಿತು.
ದೇವಳದ ಪ್ರಧಾನ ಅರ್ಚಕರ ವೇ ಮೂ ವಿ ಎಸ್ ಭಟ್ ದೀಪ ಪ್ರಜ್ವಲನೆ ಮಾಡಿ ಹೊರೆಕಾಣಿಕೆ ಕಚೇರಿಯನ್ನು ಉದ್ಘಾಟಿಸಿದರು. ದೇಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ಸಂದೇಶ್ ಶೆಟ್ಟಿ ಶಾಂತಿನಗರ, ಪಂಜಿಗುಡ್ಡೆ ಈಶ್ವರ ಭಟ್, ದಿನೇಶ್ ಪಿ ವಿ, ಸುಭಾಸ್ ರೈ ಬೆಳ್ಳಿಪ್ಪಾಡಿ, ಉಮೇಶ್ ಆಚಾರ್ಯ ಕರ್ಮಲ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ನಯನಾ ರೈ ನೆಲ್ಲಿಕಟ್ಟೆ, ನಳಿನಿ ಪಿ ಶೆಟ್ಟಿ ಡ್ಯಾಶ್ ಮಾರ್ಕೆಟಿಂಗ್, ನವೀನ್ ನ್ಯಾಕ್ ಬೆದ್ರಳ, ಅರವಿಂದ್ ಪೆರಿಗೇರಿ ಉಸ್ಥಿತರಿದ್ದರು.
ಸುವಸ್ತುಗಳು ಹೀಗೆ ಬಂದರೆ ಉತ್ತಮ:
ಕಛೇರಿಯಲ್ಲಿ ತಂದೊಪ್ಪಿಸಿದ ಕಾಣಿಕೆಗಳಿಗೆ ರಶೀದಿ ನೀಡಲಾಗುವುದು. ಬೆಳಗ್ಗಿನಿಂದ ಸಂಜೆಯವರೆಗೆ ಕಛೇರಿ ಕಾರ್ಯನಿರ್ವಹಿಸಲಿದೆ. ಹೊರೆಕಾಣಿಕೆ ಸಂಗ್ರಹ ಕಛೇರಿ ಕಾರ್ಯ ನಡೆಯಲಿದೆ. ಹೊರೆಕಾಣಿಕೆಯಲ್ಲಿ ಅಕ್ಕಿ ಸೋನಮಸೂರಿ ಟೈಗರ್ ಅಥವಾ ಬಾಲಾಜಿ, ಬೆಲ್ಲ, ಸಕ್ಕರೆ, ಅವಲಕ್ಕಿ, ಹೆಸರು ಬೇಳೆ, ಹೆಸರು, ಬಿಳಿಕಡಲೆ, ಉದ್ದಿನಬೇಳೆ, ತೊಗರಿಬೇಳೆ, ಸಜ್ಜಿಗೆ, ಬೊಂಬೆರವೆ, ಗೋಧಿಕಡಿ, ತೆಂಗಿನಕಾಯಿ, ತೆಂಗಿನೆಣ್ಣೆ, ತುಪ್ಪ, ಚಾಹುಡಿ, ಕಾಫಿಹುಡಿ, ಕಡ್ಲೆಬೇಳೆ, ಮೆಣಸು, ಕರಿಮೆಣಸು, ಜೀರಿಗೆ, ಸಾಸಿವೆ, ಕೊತ್ತಂಬರಿ, ಹಿಂಗಾರ, ಬಾಳೆಗೊನೆ, ಬಾಳೆ ಎಲೆ ಮತ್ತು ಇನ್ನಿತರ ತರಕಾರಿ ವಸ್ತುಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ದೇವಳದ ಕಚೇರಿ ವ್ಯವಸ್ಥಾಪಕರು ತಿಳಿಸಿದ್ದಾರೆ.