ಪುತ್ತೂರು: ಎಸ್.ಆರ್.ಕೆ. ಲ್ಯಾಡರ‍್ಸ್‌ನ ರಜತಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಹಮ್ಮಿಕೊಂಡು ಬಂದ ಕಾರ್ಯಕ್ರಮಕ್ಕೆ ಪೂರಕವಾಗಿ ಎ.6ರಂದು ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ, ಡಾ.ಪ್ರಶಾಂತ್ ಮತ್ತು ಡಾ.ಅರ್ಚನಾ ಕಾವೇರಿ ಅವರ ಮೂಲಕ ಸಾಂಕೇತಿಕವಾಗಿ ಹಣ್ಣುಹಂಪಲು ವಿತರಿಸಿ ಬಳಿಕ ಆಸ್ಪತ್ರೆಯ ವಾರ್ಡ್, ಕೊಠಡಿಯಲ್ಲಿದ್ದ ರೋಗಳಿಗೆ ತೆರಳಿ ಹಣ್ಣುಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭ ಎಸ್.ಆರ್.ಕೆ. ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಜಿಎಸ್‌ಟಿ ಕನ್ಸಲ್ಟೆಂಟ್ ರಾಮಕೃಷ್ಣ ಭಟ್ ಕೊರುಂಬುಡೇಲು, ಲೋಕೋಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗದ ಸುಬ್ರಹ್ಮಣ್ಯ ವ್ಯಾಪ್ತಿಯ ಸಹಾಯಕ ಇಂಜಿನಿಯರ್ ಪ್ರಮೋದ್, ಆರ್ವೀ ಇಂಟರ್‌ಗ್ರಾಫಿಕ್ಸ್‌ನ ಜ್ಞಾನೇಶ್ ವಿಶ್ವಕರ್ಮ, ಸಂಸ್ಥೆಯ ಶ್ರೀಲತಾ, ವಿವೆಟ ಟೆಲ್ಕಾಪಿಂಟೋ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಭರತ್ ಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು.
ಮೇ.25ಕ್ಕೆ ರಜತಮಹೋತ್ಸವದ ಸಮಾರೋಪ
ಎಸ್‌ಆರ್‌ಕೆ ಲ್ಯಾಡರ‍್ಸ್‌ನ ರಜತಮಹೋತ್ಸವದ ಸಲುವಾಗಿ ಪ್ರತಿ ತಿಂಗಳು ವಿವಿಧ ಸೇವಾಚಟುವಟಿಕೆ ಮತ್ತು ಸಾಮಾಜಿಕ ಚಟುವಟಿಕೆಯ ಕಾರ್ಯಕ್ರಮ ಆಯೋಜನೆ ಮಾಡಿಕೊಂಡಿದ್ದು, ಇದೀಗ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದ್ದೇವೆ. ಮೇ.25ಕ್ಕೆ ರಜತಮಹೋತ್ಸವದ ಸಮಾರೋಪ ಸಮಾರಂಭ ಕಡಬ ತಾಲೂಕಿನ ಕೊಯಿಲದ ಕಲಾಯಿಗುತ್ತುವಿನಲ್ಲಿ ನಡೆಯಲಿದೆ. ಒಂದು ದಿನ ಪೂರ್ತಿ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಎಲ್ಲರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ ವಿನಂತಿಸಿದರು.