ಉಪ್ಪಿನಂಗಡಿ: ಮಕ್ಕಳನ್ನು ರಾಷ್ಟ್ರಕ್ಕೆ ಸಂಪತ್ತಾಗಿ ರೂಪಿಸುವಲ್ಲಿ ಹೆತ್ತವರು ಗಮನಹರಿಸಬೇಕಾಗಿದೆ. ಮಕ್ಕಳಲ್ಲಿ ರಾಷ್ಟ್ರ್ರಭಕ್ತಿ, ಧರ್ಮ ನಿಷ್ಠೆ, ಸಂಸ್ಕಾರದತ್ತ ಒಲವು ಮೂಡಿಸುವ ಶಿಶು ಮಂದಿರಗಳಂತಹ ಸಂಸ್ಥೆಗಳು ಎಲ್ಲೆಡೆ ಮೂಡಿಬರಲಿ ಎಂದು ಯುವ ಚಿಂತಕ, ಬರಹಗಾರ ಆದರ್ಶ ಶೆಟ್ಟಿ ಕಜೆಕ್ಕಾರ್ ತಿಳಿಸಿದರು. ಅವರು ಉಪ್ಪಿನಂಗಡಿ ವೇದಶಂಕರ ನಗದರಲ್ಲಿನ ಮಾಧವ ಶಿಶು ಮಂದಿರದಲ್ಲಿ ನಡೆದ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಆಧ್ಯಾತ್ಮಿಕ ಸಾಧಕ ಕೃಷ್ಣ ಶೆಣೈ ಪಣಕಜೆ ಮಾತನಾಡಿ ಎಲ್ಲಿ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ಲಭಿಸುತ್ತದೆಯೋ ಅಲ್ಲಿ ಸಮಾಜಕ್ಕೆ ಸಂಪತ್ತಾಗಿ ವ್ಯಕ್ತಿ ನಿರ್ಮಾಣವಾಗುತ್ತದೆ. ಉತ್ತರ ಭಾರತದಲ್ಲಿನ ದುರ್ಗಮ ಪ್ರದೇಶದಲ್ಲಿನ ವಿದ್ಯಾ ಸಂಸ್ಥೆಗಳು ಸಂಸ್ಕಾರಕ್ಕೆ ಒತ್ತು ನೀಡುತ್ತಿರುವ್ಯದರಿಂದಲ್ಲಿನ ವಿದ್ಯಾರ್ಥಿಗಳು ಮಹಾನ್ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಿದ್ಯಾಧರ ಜೈನ್ ಮಾತನಾಡಿ ಎಳೆಯ ಮನಸ್ಸ್ಸುಗಳನ್ನು ಸಂಸ್ಕಾರದ ಬೆಸುಗೆಯೊಂಗಿದೆ ವಿಕಸನಗೊಳಿಸಿದಾಗ ಹೆಚ್ಚು ಪ್ರಕಾಶಮಾನವಾಗಿ ಹೊರಹೊಮ್ಮುತ್ತದೆ ಎನ್ನುವುದಕ್ಕೆ ವಿದ್ಯಾಭಾರತಿ ಸಂಶೋಧಿಸಿ ನೀಡುತ್ತಿರುವ ಶಿಶು ಶಿಕ್ಷಣದ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು.
ಮಾತೃ ಮಂಡಳಿಯ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತೆ ಪುಷ್ಪಲತಾ ಜನಾರ್ಧನ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಶಿಶು ಮಂದಿರದ ಮಾತಾಜಿಗಳಿಗೆ ಪುಟಾಣಿ ಸದ್ವಿತಾಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶಿಶು ಮಂದಿರದ 62 ವಿದ್ಯಾರ್ಥಿಗಳಿಂದ ವಸ್ತ್ರ ಬಳಸಿ ಮುಖ ಮರೆ ಮಾಚಲ್ಪಟ್ಟ ತಮ್ಮ ತಮ್ಮ ತಾಯಿಯ ಪಾದಗಳನ್ನು ಗುರುತಿಸಿ ಪೂಜೆ ಸಲ್ಲಿಸುವ ಮಾತೃ ಪಾದಪೂಜನಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತ ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು. ಶಿಶು ಮಂದಿರದ ಉಪಾಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ ಪ್ರಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಶಿಶು ಮಂದಿರದ ಕಾರ್ಯದರ್ಶಿ ವರದಿ ಮಂಡಿಸಿದರು. ನವೀನ್ ರವರು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಹರಿಣಾಕ್ಷಿ ಕಕ್ಯಪದವು ನಿರೂಪಿಸಿದರು. ಜೊತೆ ಕಾರ್ಯದರ್ಶಿ ಹರಿರಾಮಚಂದ್ರ ವಂದಿಸಿದರು.
ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಜಯಂತ ಪುರೋಳಿ, ಜಯಶ್ರೀ ಜನಾರ್ಧನ್, ಕೈಲಾರ್ ರಾಜಗೋಪಾಲ್ ಭಟ್, ಯು.ಜಿ ರಾಧಾ, ಲೋಕೇಶ್ ಆಚಾರ್ಯ, ಮಹೇಶ್ ಎನ್, ರಮೇಶ್ ನಟ್ಟಿಬೈಲ್, ವೆಂಕಪ್ಪ ಗೌಡ, ಯು ರಾಜೇಶ್ ಪೈ, ಕೇಶವ, ಶ್ಯಾಮಲಾ ಶೆಣೈ, ಶೋಭಾ ದಯಾನಂದ್, ಸುಗಂಧಿ, ಮೋಹಿನಿ, ಕೃಷ್ಣಪ್ಪ ಪೂಜಾರಿ, ನಾಗರಾಜ್, ಸುಧಾಕರ ಶೆಟ್ಟಿ, ಸುನಿಲ್ ಸಂಗಮ್ , ಶಶಿಧರ್ ಶೆಟ್ಟಿ, ಹರೀಶ್ ಭಂಡಾರಿ, ಜಗದೀಶ್ ಶೆಟ್ಟಿ, ವಿನೋದ್ ಕುಮಾರ್, ವೀಣಾ ವೆಂಕಪ್ಪ ಗೌಡ, ನಾರಾಯಣ, ರಾಧಾಕೃಷ್ಣ ಬೊಳ್ಳಾವು, ದೇವರಾಜ್, ಹರೀಶ್ ನಾಯಕ್, ಮಂಜುಳಾ ಸೀತಾರಾಮ್ ಆಚಾರ್ಯ, ಜ್ಯೋತಿ ಹೇರಂಭ ಶಾಸ್ತ್ರಿ, ಉಷಾ ಮುಳಿಯ ಮೊದಲಾದವರು ಭಾಗವಹಿಸಿದ್ದರು.