ಪುತ್ತೂರು: ಹತ್ತೂರೊಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಏ.10 ರಿಂದ ಮೊದಲ್ಗೊoಡು ಏ.20 ರ ತನಕ 11 ದಿನಗಳ ಕಾಲ ನಡೆಯಲಿದೆ.
ವಿವಿಧ ಧಾರ್ಮಿಕ ವಿಧಿ ವಿಧಾನಗಳಿಂದ ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಅತ್ಯಂತ ವೈಭವಪೂರಿತವಾಗಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಏ.11 ರಂದು ರಾತ್ರಿ ಡಾ.ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಸಂಸ್ಥೆಯ ಸಾಹಿತ್ಯ ಗಾನ ನೃತ್ಯ ವೈಭವವು ಬಹಳ ನಯನ ಮನೋಹರವಾಗಿ ನಡೆಯಿತು. ಈ ಸುಂದರ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಲಾವಿದರಾದ ಗುರುರಾಜ್ ಕಾಸರಗೋಡು, ಅವನಿ ಎಂ ಎಸ್ ಸುಳ್ಯ, ಜ್ಞಾನ ರೈ ಪುತ್ತೂರು, ಪ್ರಥಮ್ಯ ಯು ವೈ ನೆಲ್ಯಾಡಿ, ಆಜ್ಞಾ ರೈ ಪುತ್ತೂರು, ಶ್ವೇತಾ ಯು ವೈ ನೆಲ್ಯಾಡಿ, ರಕ್ಷಿತಾ ಮುಂತಾದ ಅಪ್ರತಿಮ ಕಲಾವಿದರು ಭಾಗವಹಿಸಿ ಕಲಾ ಪ್ರದರ್ಶನ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಡಾ. ವಾಣಿಶ್ರೀ ಕಾಸರಗೋಡು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಹಾಗೂ ಸಾಹಿತ್ಯ ಪ್ರಸ್ತುತಿ ಮಾಡಿದರು. ದೇವಸ್ಥಾನದ ಆಡಳಿತ ವರ್ಗದ ವತಿಯಿಂದ ಡಾ. ವಾಣಿಶ್ರೀ ಕಾಸರಗೋಡು ಅವರಿಗೆ ಶಾಲು ಹೊದೆಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಗೌರವ ಸ್ಮರಣಿಕೆ ನೀಡಿ ಪುರಸ್ಕರಿಸಲಾಯಿತು.