ವರ್ಣಕುಟೀರ ಕಲಾ ಶಿಕ್ಷಣದಲ್ಲಿ 7 ದಿನದ ಮಕ್ಕಳ ಬೇಸಿಗೆ ಶಿಬಿರ ಆರಂಭ

0

ಪುತ್ತೂರು: ಮಕ್ಕಳಲ್ಲಿರುವ ಪ್ರತಿಭೆಗಳಿಗೆ ತಕ್ಕಂತೆ ಹಲವು ರೀತಿಯ ಕಲಾ ಶಿಕ್ಷಣವನ್ನು ನಡೆಸುತ್ತಿರುವ ಪುತ್ತೂರು ಕಲ್ಲಾರೆ ಕಾವೇರಿ ಕಾಂಪ್ಲೆಕ್ಸ್‌ನಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣದಲ್ಲಿ ಎ.13ರಿಂದ ಒಂದು ವಾರದ ಮಕ್ಕಳ ಬೇಸಿಗೆ ಶಿಬಿರವು ಆರಂಭಗೊಂಡಿದೆ.


ಐಆರ್‌ಸಿಎಮ್‌ಡಿ ಎಜ್ಯುಕೇಶನ್ ಸೆಂಟರ್ ಪುತ್ತೂರು ಇದರ ಮುಖ್ಯಸ್ಥ ಗಣೇಶ್ ಅವರು ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭ ನಿನಾಸಂ ಕಲಾವಿದೆ ಅರ್ಚನಾ ಸಹಿತ ಅನೇಕರು ಉಪಸ್ಥಿತರಿದ್ದರು. ವರ್ಣಕುಟೀರದ ಮುಖ್ಯಸ್ಥ ಪ್ರವೀಣ್ ವರ್ಣಕುಟೀರ ಮತ್ತು ಪ್ರಾಂಶುಪಾಲೆ ಸುನಿತಾ ವರ್ಣಕುಟೀರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

7 ದಿನಗಳು ನಡೆಯುವ ಶಿಬಿರದಲ್ಲಿ ಮಕ್ಕಳ ಮನೋವಿಕಾಸನ ಆಟಗಳು, ನವ್ಯಕಲೆಯ ಒಂದು ಅಧ್ಯಯನ, ಕ್ರಾಫ್ಟ್ಸ್, ಮೂರಲ್ ಆರ್ಟ್, ವಿನೂತನ ಗೋಡೆ ಗಡಿಯಾರ ತಯಾರಿ, ಕೂದಲಿನ ಸೌಂದರ್ಯ ಹೆಚ್ಚಿಸಲು ಹೇರ್‌ಕ್ಲಿಪ್ ತಯಾರಿ, 3ಡಿ ಆರ್ಟ್, ಹೊಸ ವಿನ್ಯಾಸದ ಮುಖವಾಡ ತಯಾರಿ, ವಿಶೇಷವಾಗಿ ನೀನಾಸಂ ಕಲಾವಿದರಿಂದ ರಂಗ ತರಬೇತಿ, ರಂಗಸಂಗೀತ ಕಲೆಗಳನ್ನು ಶಿಬಿರದಲ್ಲಿ ಹೇಳಿ ಕೊಡಲಾಗುವುದು. ಪ್ರತಿ ದಿನ ಬೆಳಿಗ್ಗೆ ಗಂಟೆ 9.30 ರಿಂದ ಸಂಜೆ ಗಂಟೆ 4.30ರ ತನಕ ಶಿಬಿರ ನಡೆಯಲಿದ್ದು, ಮಧ್ಯಾಹ್ನದ ಊಟ, ಉಪಹಾರ ಶಿಬಿರದಲ್ಲೇ ನೀಡಲಾಗುವುದು. ಶಿಬಿರಕ್ಕೆ ಸೇರಲಿಚ್ಚಿಸುವವರು ಮೊಬೈಲ್ ಸಂಖ್ಯೆ 9741502869 ಗೆ ಕರೆ ಮಾಡುವಂತೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರವೀಣ್ ವರ್ಣಕುಟೀರ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here