ಪುತ್ತೂರು: ಮೋದಿ ನೇತೃತ್ವದ ಬಿಜೆಪಿ ಸರಕಾರದ ದುರಾಡಳಿತದಿಂದ ದೇಶದ ಬಡವರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದರು.
ಪುತ್ತೂರು ನಗರ ಕಾಂಗ್ರೆಸ್ ನೆಹರುನಗರ, ಅರ್ಯಾಪು ಸಿಂಹವನ, ಬಪ್ಪಳಿಗೆಯಲ್ಲಿ ಎ.13ರಂದು ಆಯೋಜಿಸಿದ ಲೋಕಸಭಾ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಬಡವರು ಮತ್ತು ಜನ ಸಾಮಾನ್ಯರು ದಿನ ನಿತ್ಯ ಉಪಯೋಗಿಸುತ್ತಿರುವ ಅವಶ್ಯಕ ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಮಾಡಿದ್ದಲ್ಲದೆ 340 ರೂಪಾಯಿಗೆ ಸಿಗುತ್ತಿದ್ದ ಅಡುಗೆ ಅನಿಲ 1,100 ರೂಪಾಯಿಗೆ ಏರಿಕೆ ಮಾಡಿ ವಿದ್ಯುತ್ ದರ, ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ, ಅಕ್ಕಿ, ಗೋದಿ, ಮೈದಾ, ಸಕ್ಕರೆ, ಮೆಣಸು, ಎಣ್ಣೆ ಪದಾರ್ಥಗಳಿಗೆ ದುಬಾರಿ ತೆರಿಗೆ ಹಾಕಿ ಮೋದಿ ಸರಕಾರ ಬಡವರ ಬದುಕನ್ನು ಸಂಕಷ್ಟಕ್ಕೆ ಈಡು ಮಾಡಿರುತ್ತಾರೆ ಎಂದು ಆರೋಪಿಸಿದರು. ಅಂಬಾನಿ ಮತ್ತು ಅದಾನಿಯಂತಹ ಬಂಡವಾಳ ಶಾಹಿಗಳನ್ನು ಜಗತ್ತಿನಲ್ಲಿ ಅತಿ ದೊಡ್ಡ ಶ್ರೀಮಂತರಾಗಬೇಕೆAದು ಕೆಲಸ ಮಾಡಿದ್ದಾರೆ ಹೊರತು ಬಡವರ ಬಗ್ಗೆ ಯಾವುದೇ ಕೆಲಸ ಮಾಡಿಲ್ಲ, ನಮ್ಮ ಜಿಲ್ಲೆಯಲ್ಲಿ ಕಳೆದ 32 ವರ್ಷಗಳಿಂದ ಈ ಭಾಗದಲ್ಲಿ ಬಿಜೆಪಿ ಲೋಕ ಸಭಾ ಸದಸ್ಯರು ಅಧಿಕಾರದಲ್ಲಿದ್ದರು ಯಾವುದೇ ಅಭಿವೃದ್ಧಿ ಮಾಡದೆ ತಮ್ಮ ಅಭಿವೃದ್ಧಿ ಮಾಡುವುದರಲ್ಲಿ ಸಮಯ ಕಳೆದಿದ್ದಾರೆ ಎಂದವರು ಹೇಳಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇನ್ನೂ ಹಲವು ಯೋಜನೆ:
ಬಿಜೆಪಿಯ ದುರಾಡಳಿತದಿಂದ ಸಂಕಷ್ಟದಲ್ಲಿದ್ದ ಜನ ಸಾಮಾನ್ಯರಿಗೆ ಬದುಕು ಕಟ್ಟಿ ಕೊಡಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಗ್ರಹಲಕ್ಷಿ÷್ಮ, ಗ್ರಹಜ್ಯೋತಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನ ಬಾಗ್ಯ ಯೋಜನೆಯಲ್ಲಿ ಅಕ್ಕಿ ಯ ಹಣ ನೀಡುವ ಗ್ಯಾರಂಟಿ ಯೋಜನೆಯನ್ನು ಜ್ಯಾರಿಗೆ ತಂದಿರುತ್ತಾರೆ, ಲೋಕ ಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ಒಂದು ವರ್ಷದಲ್ಲಿ ಒಂದು ಲಕ್ಷ ರೂಪಾಯಿ ಕೊಡುವ ಗ್ಯಾರಂಟಿ ಯೋಜನೆ, ಒಂದು ವರ್ಷದಲ್ಲಿ 30 ಲಕ್ಷ ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡುವ ಗ್ಯಾರಂಟಿ, ರೈತರಿಗೆ ಬೆಂಬಲ ಬೆಲೆ, ರೈತರ ಸಾಲ ಸಂಪೂರ್ಣ ಮನ್ನಾ ಗ್ಯಾರಂಟಿ, ಪ್ರತಿ ಕಾರ್ಮಿಕನಿಗೆ ರೂಪಾಯಿ 400 ರಷ್ಟು ಕನಿಷ್ಠ ವೇತನ ದೊರಕಿಸುವ ಗ್ಯಾರಂಟಿ ಯೋಜನೆಯನ್ನು ನೀಡುವ ಕಾಂಗ್ರೆಸ್ ಭರವಸೆ ನೀಡಿದೆ ಆದುದರಿಂದ ಅಭಿವೃದ್ಧಿ ಪರ, ಜನಪರ ಚಿಂತನೆ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮ ರಾಜ್ ರಾಮಯ್ಯ ಪೂಜಾರಿ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸಿ ಕೊಡಬೇಕೆಂದು ಕರೆ ನೀಡಿದರು.
ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ, ಬ್ಲಾಕ್ ಅಧ್ಯಕ್ಷರುಗಳಾದ ಎಂ ಬಿ ವಿಶ್ವನಾಥ ರೈ, ಡಾ| ರಾಜರಾಮ್, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಕೆಪಿಸಿಸಿ ಸಂಯೋಜಕ ಎನ್ ಚಂದ್ರ ಹಾಸ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ನಝಿರ್ ಮಠ, ಮುರಲೀಧರ ರೈ ಮಠ0ದ ಬೆಟ್ಟು. ನಗರ ಕಾಂಗ್ರೆಸ್ ಉಸ್ತುವಾರಿ ರೋಷನ್ ರೈ ಬನ್ನೂರು, ರಂಜಿತ್ ಬಂಗೇರ, ರಿಯಾಜ್ ಪರ್ಲಡ್ಕ, ನಗರ ಸಭಾ ಸದಸ್ಯರಾದ ದಿನೇಶ್ ಗೌಡ ಸೇವಿರೆ ಜಿಲ್ಲಾ ಸೋಶಿಯಲ್ ಮೀಡಿಯಾದ ಅಧ್ಯಕ್ಷ ಪೂರ್ಣೇಶ್ ಭಂಡಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕಿರಣ್ ರೈ ಬೂತ್ ಅಧ್ಯಕ್ಷರುಗಳಾದ ದೇವರಾಜ್ ಸಿಂಹವನ, ಮೋನು ಬಪ್ಪಳಿಗೆ, ಸೂಫಿ ಬಪ್ಪಳಿಗೆ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಸುಧಾ ಕುಂಜತ್ತಾಯ, ಪ್ರಚಾರ ಸಮಿತಿ ಸದಸ್ಯರಾದ ಶ್ರೀಮತಿ ಶೈಲಜಾ ಅಮರನಾಥ, ಹನೀಫ್ ಪುಣಚತ್ತಾರ್ ಸಾಮಾಜಿಕ ಜಾಲ ತಾಣ ಅಧ್ಯಕ್ಷ ಸಿದ್ದಿಕ್ ಸುಲ್ತಾನ್, ಶರೀಫ್ ಬಲ್ನಾಡ್ ಮೊದಲಾದವರು ಉಪಸ್ಥಿತರಿದ್ದರು , ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಸ್ವಾಗತಿಸಿ ಕಲಾವಿದ ಕೃಷ್ಣಪ್ಪ ವಂದಿಸಿದರು.