ಪ್ರೇಕ್ಷಕರಿಂದ ಮತ್ತಷ್ಟು ಪ್ರಶಂಸೆಗೆ ಪಾತ್ರವಾಗುತ್ತಿರುವ ಅಪೋಲೋ ಸರ್ಕಸ್

0

ಏ.16 – ಏ.18 ಜಾತ್ರೋತ್ಸವದ ಪ್ರಯುಕ್ತ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಸ್ಪೆಷಲ್ ಶೋ

ಪುತ್ತೂರು: ಕಳೆದ 20 ವರುಷಗಳಿಂದ ವಿವಿಧ ರಾಜ್ಯಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಪ್ರಸಿದ್ಧಿ ಪಡೆದಿರುವ ಅಪೊಲೊ ಸರ್ಕಸ್ ದರ್ಬೆ ಬಳಿಯ ಮುಕ್ರಂಪಾಡಿಯ ಹನುಮ ವಿಹಾರ ಮೈದಾನದಲ್ಲಿ ಅದ್ಧೂರಿ ಪ್ರದರ್ಶನ ನೀಡುತ್ತಿದ್ದು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಏ.16ರಿಂದ ಏ.18ರ ವರೆಗೆ ರಾತ್ರಿ ಹತ್ತು ಗಂಟೆಯಿಂದ ಸ್ಪೆಷಲ್ ಶೋ ನಡೆಯಲಿದೆ.

ಮಣಿಪುರಿ, ನೇಪಾಳ, ಅಸ್ಸಾಂ, ಡಾರ್ಜಿಲಿಂಗ್, ಕೇರಳ ಸೇರಿದಂತೆ ಇನ್ನಿತರ ಕಡೆಗಳ ನೂರಕ್ಕಿಂತ ಅಧಿಕ ಮಹಿಳೆಯರು ಹಾಗೂ ಪುರುಷ ಕಲಾವಿದರು ಈ ತಂಡದಲ್ಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲಾವಿದರು ಕಲರ್ ಲೈಟ್ಸ್ ನಲ್ಲಿ ವಿವಿಧ ಪ್ರದರ್ಶನಗಳನ್ನು ಸುಮಾರು ಎರಡು ಗಂಟೆಗಳ ಕಾಲ ನೀಡಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಎ.16ರಿಂದ ಎ.18ರ ವರೆಗೆ ರಾತ್ರಿ ಹತ್ತುಗಂಟೆಯಿಂದ ಸ್ಪೆಷಲ್ ಶೋ ನಡೆಯಲಿದೆ.

ಇದೀಗ ಪ್ರತೀದಿನ ಮಧ್ಯಾಹ್ನ 1ಕ್ಕೆ, ಸಾಯಂಕಾಲ 4 ಹಾಗೂ 7 ಗಂಟೆಗೆ ಶೋ ‌ನಡೆಯುತ್ತಿದ್ದು, ಜಾತ್ರೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ರಾತ್ರಿ ಹತ್ತರಿಂದ ನಾಲ್ಕನೇ ಪ್ರದರ್ಶನ ಪ್ರಾರಂಭಗೊಳ್ಳಲಿದೆ. ಇದೀಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದ್ದು, ಹೆಚ್ಚಿನ ಶೋಗಳು ಪ್ರೇಕ್ಷಕರಿಂದ ತುಂಬಿಕೊಂಡಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯೂ‌ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9677662229ಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here