ಉಪ್ಪಿನಂಗಡಿಯಲ್ಲಿ ಎಸ್.ಪಿ ಗ್ಯಾಸ್ ಸೇಲ್ಸ್ & ಸರ್ವೀಸಸ್ ಸ್ಥಳಾಂತರಗೊಂಡು ಶುಭಾರಂಭ

0

ಉಪ್ಪಿನಂಗಡಿ: ಉಪ್ಪಿನಂಗಡಿ ಪೇಟೆಯಲ್ಲಿ ಮಹಾಲಸ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಎಸ್.ಪಿ ಗ್ಯಾಸ್ ಮತ್ತು ಸರ್ವೀಸಸ್ ಸಂಸ್ಥೆಯು ಸಹನ ಫ್ಯಾನ್ಸಿ ಹತ್ತಿರದ ಡಿಲಕ್ಸ್ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಎ.17 ರಂದು ಶುಭಾರಂಭಗೊಂಡಿತು.

ಎಸ್.ಪಿ ಗ್ಯಾಸ್ ಸೇಲ್ಸ್ & ಸರ್ವೀಸ್ ನ ಮಾಲಕ ನಿತೇಶ್ ಎಲ್ಲರನ್ನು ಸ್ವಾಗತಿಸಿದರು. ಬೆಳಿಗ್ಗೆ ಗೋಪಾಲಕೃಷ್ಣ ಭಟ್ ರವರು ಪೂಜಾ ವಿಧಿ ವಿಧಾನ ನೇರವೇರಿಸಿದರು. ಸವಿ ಎಲೆಕ್ಟ್ರಾನಿಕ್ಸ್ ಉಪ್ಪಿನಂಗಡಿಯ ಮಾಲಕ ನವೀನ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭಾಹಾರೈಸಿದರು.

ಮುಖ್ಯ ಅತಿಥಿಗಳಾಗಿ ಡಿಲಕ್ಸ್ ಬೇಕರಿಯ ಮಾಲಕ ಅಲಿ, ಗೋಳಿತ್ತಡಿ ಸನ್ನಿಧಿ ಮೆಡಿಕಲ್ಸ್ ಮಾಲಕ ಶರತ್ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಎಸ್.ಪಿ ಗ್ಯಾಸ್ ಸೇಲ್ಸ್ ಮತ್ತು ಸರ್ವೀಸಸ್ ನ ಮಾಲಕ ನಿತೇಶ್ ರವರ ಪತ್ನಿ ರಮ್ಯಾ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here