ಪುತ್ತೂರು: ಕಬಕ ಕೂವೆತ್ತಿಲ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಮತ್ತು 108 ತೆಂಗಿನಕಾಯಿ ಹವನ ಹಾಗೂ ರಂಗಪೂಜೆ ವರ್ಕಾಡಿ ಬ್ರಹ್ಮಶ್ರೀ ವೇ.ಮೂ.ದಿನೇಶಕೃಷ್ಣ ತಂತ್ರಿ ಮತ್ತು ವೇ.ಮೂ.ಉಂಡೆಮನೆ ಶ್ರೀಕೃಷ್ಣ ಭಟ್‌ರವರ ನೇತೃತ್ವದಲ್ಲಿ ಎ.30 ಮತ್ತು ಮೇ.1ರಂದು ಶ್ರೀಕ್ಷೇತ್ರದಲ್ಲಿ ನಡೆಯಲಿದೆ.
ಎ.30ರಂದು ಬೆಳಿಗ್ಗೆ 9ರಿಂದ ಸಾಮೂಹಿಕ ಪ್ರಾರ್ಥನೆ, ಮಹಾಗಣಪತಿ ದೇವರಿಗೆ 108 ತೆಂಗಿನಕಾಯಿ ಗಣಪತಿ ಹವನ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7ರಿಂದ ಮಹಾಗಣಪತಿ ದೇವರಿಗೆ ರಂಗಪೂಜೆ, ಅತ್ತಾಳ ಪೂಜೆ ನಡೆಯಲಿದೆ. ಮೇ.1ರಂದು ಬೆಳಿಗ್ಗೆ ಗಣಪತಿ ಹವನ, ನವಕ ಕಲಶಾಭಿಷೇಕ, ನಾಗತಂಬಿಲ, ಶಿವಪೂಜೆ, ಮಧ್ಯಾಹ್ನ ಮಹಾಪೂಜೆ, ಉತ್ಸವ ಬಲಿ, ದರ್ಶನ ಬಲಿ, ಬಟ್ಟಲುಕಾಣಿಕೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ರಾತ್ರಿ ಶ್ರೀರಂಗಪೂಜೋತ್ಸವ, ಉತ್ಸವ ಬಲಿ, ಕಟ್ಟೆಪೂಜೆ, ದೇವರ ಸವಾರಿ, ವಸಂತೋತ್ಸವ, ಮಂತ್ರಾಕ್ಷತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.