ದೇವಳದ ಹೊರಗಿದ್ದ ನಂದಿಗೆ ಹಣ್ಣು ನೀಡಿದ ಶ್ರೀಗಳು
ಪುತ್ತೂರು: ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಮಾಡಿ ಶ್ರೀ ದೇವರಿಗೆ ಆರತಿ ಬೆಳಗಿಸಿದರು.
ಈ ಸಂದರ್ಭ ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ ವಿ ಶ್ರೀನಿವಾಸ, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಮಾಜಿ ಸದಸ್ಯರು, ಅರುಣ್ ಕುಮಾರ್ ಪುತ್ತಿಲ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ದಂಪತಿ, ಮಾದವ ಸ್ವಾಮಿ, ರತ್ನಾಕರ ನಾಯ್ಕ್, ರಂಜಿತ್ ಬಂಗೇರ, ಶಿವ ಬ್ರಾಹ್ಮಾಣ ಸಂಘದ ಪದಾಧಿಕಾರಿಗಳು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ದೇವಳದ ಪ್ರಧಾನ ಅರ್ಚಕರಾದ ವಸಂತ ಕೆದಿಲಾಯ, ಜಯರಾಮ ಜೋಯಿಷ ಸಹಿತ ಅರ್ಚಕರು ಶ್ರೀ ಗಳಿಗೆ ಪೂರ್ಣಕುಂಭ ಸ್ವಾಗತಿಸಿದರು. ಡಾ.ಪಿ ಕೆ ಗಣೇಶ್ ಅವರು ವಾದ್ಯದ ಮೂಲಕ ಶ್ರೀಗಳಿಗೆ ಗೌರವ ನೀಡಿದರು.
ದೇವಳದ ಹೊರಗಿದ್ದ ನಂದಿಗೆ ಹಣ್ಣು ನೀಡಿದ ಶ್ರೀಗಳು:
ಶ್ರೀ ಗಳು ದೇವಳದಿಂದ ಹೊರಗೆ ಬಂದಾಗ ಹೊರಾಂಗಣದ ರಾಜಗೋಪುರ ದ್ವಾರದ ಎದುರು ಮಲಗಿದ್ದ ನಂದಿಗೆ ತನ್ನ ಹರಿವಾಣದಲ್ಲಿದ್ದ ಎಲ್ಲಾ ಬಾಳೆಹಣ್ಣನ್ನು ಒಂದೊಂದಾಗಿ ನಂದಿಗೆ ತಿನ್ನಿಸಿದರು. ದೇವಳಕ್ಕೆ ಹೊರಗಿನಿಂದ ಬಂದ ಸಾಧು ಸ್ವಭಾವದ ನಂದಿಯನ್ನು ಕೊಂಡಾಡಿದರು.