ಪುತ್ತೂರು: ವಿಶ್ವವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ನೇಮಕವು ಏ.24ರಂದು ನಡೆಯಿತು.
ಕಾಲೇಜಿನ ಸಂಯೋಜಕರಾದ ಡಾ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಕ ರಕ್ಷಕ ಸಂಘದ ಪಾತ್ರದ ಮಹತ್ವವನ್ನು ಉಲ್ಲೇಖಿಸುವುದರೊಂದಿಗೆ ಕಾಲೇಜಿನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಶೈಕ್ಷಣಿಕ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. ಕಾರ್ಯಕ್ರಮವು ದಿವ್ಯಶ್ರೀ ಜಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶಿಕ್ಷಕರ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ಡಾ. ಸೀತಾರಾಮ ಪಿ. ಇವರು ನೆರೆದ ಸಭೆಯನ್ನು ಸ್ವಾಗತಿಸಿದರು.
ಶಿಕ್ಷಕ- ರಕ್ಷಕ ಸಂಘ ಖಜಾಂಚಿ ವೆರೋನಿಕಾ ಪ್ರಭಾ ವಿ. ಪಿ ಇವರು 2023-2024ರ ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಈ ಆಯವ್ಯಯ ಪಟ್ಟಿಯನ್ನು ಸಭೆಯು ಅನುಮೋದಿಸಿತು. ಮುಂದೆ ಪೋಷಕರ ನೂತನ ಪದಾಧಿಕಾರಿಗಳ ನೇಮಕವಾಯಿತು. ಈ ಸಾಲಿನ ಪೋಷಕರ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದಯ ಅವರು ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಪ್ರೇಮ, ಸಹ ಕಾರ್ಯದರ್ಶಿಯಾಗಿ ಸೇಸಮ್ಮ ಇವರು ಆಯ್ಕೆಗೊಂಡರು. ಸದಸ್ಯರುಗಳಾದ ಶಿವಣ್ಣ, ಪಾರ್ವತಿ ಹಾಗೂ ನಾಗೇಶ ಇವರುಗಳು ಪ್ರಸ್ತುತ ಶೈಕ್ಷಣಿಕ ವರ್ಷಕ್ಕೂ ಮುಂದುವರಿದರು. ಪೋಷಕರ ಕಾರ್ಯಕಾರಿ ಸಮಿತಿಯ ಪೂರ್ವ ಕಾರ್ಯಾಧ್ಯಕ್ಷ ಅಬ್ದುಲ್ ಖಾದರ್ ಎಂ, ಉಪಾಧ್ಯಕ್ಷೆ ಮಧುರಾ ಕೆ, ಸಹ ಕಾರ್ಯದರ್ಶಿಗಳಾದ ರವಿ ಎಸ್ ಇವರುಗಳು ತಮ್ಮ ಸ್ಥಾನದಿಂದ ನಿರ್ಗಮಿಸಿದರು. ಹೊಸ ಪದಾಧಿಕಾರಿಗಳ ಆಯ್ಕೆಯು ಅವಿರೋಧವಾಗಿ ನಡೆಯಿತು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ. ನೂರಂದಪ್ಪ ನಡೆಸಿಕೊಟ್ಟರು. ನೂತನ ಹಾಗೂ ಪೂರ್ವ ಪದಾಧಿಕಾರಿಗಳು ಮತ್ತು ಹೆತ್ತವರು ಹಾಗೂ ಪೋಷಕರು ಸಲಹೆ ಸೂಚನೆಗಳನ್ನು, ಉತ್ತಮ ಅಭಿಪ್ರಾಯಗಳನ್ನು ನೀಡಿದರು. ಶಿಕ್ಷಕ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಚಂದ್ರಕಲಾ ಇವರು ಧನ್ಯವಾದಗಳನ್ನು ಸಮರ್ಪಿಸಿದರು. ಕಾರ್ಯಕ್ರಮವನ್ನು ಪಾವನ ರೈ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.