ಪುತ್ತೂರು: ಶಟಲ್ ಬ್ಯಾಡ್ಮಿಂಟನ್ ಆಸಕ್ತರಿಗಾಗಿ ಉತ್ತಮ ತರಬೇತಿ ನೀಡುವ ನಿಟ್ಟಿನಲ್ಲಿ ನೆಹರುನಗರದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಸಮೀಪ ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣಗೊಂಡಿರುವ ವರುಣ್ಸ್ ಶಟಲ್ ಬ್ಯಾಡ್ಮಿಂಟನ್ ಅಕಾಡೆಮಿ ಒಳಾಂಗಣ ಕ್ರೀಡಾಂಗಣವು ಎ.29ರಂದು ಉದ್ಘಾಟನೆಗೊಳ್ಳಲಿದೆ.
ನೂತನ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಆಯುಷ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ನಗರ ಸಭೆ ನಿಕಟಪೂರ್ವ ಅಧ್ಯಕ್ಷರು, ಪಡ್ಡಾಯೂರು ರುದ್ರಾಂಡಿ, ನೇತ್ರಾಂಡಿ ದೈವಸ್ಥಾನದ ಅಧ್ಯಕ್ಷ ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ ಶೆಟ್ಟಿ, ಸುದಾನ ವಸತಿಯುತ ಶಾಲಾ ಸಂಚಾಲಕ ವಿಜಯ ಹಾರ್ವಿನ್, ನ್ಯಾಯವಾದಿ ಬೆಟ್ಟ ಈಶ್ವರ ಭಟ್, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕ್ರೀಡಾಂಗಣದ ವಿಶೇಷತೆಗಳು:
ಪುತ್ತೂರು ಆಸುಪಾಸಿನ ಕ್ರೀಡಾಸಕ್ತರಿಗಾಗಿ ಪಡ್ಡಾಯೂರಿನಲ್ಲಿರುವ ವಿಶಾಲವಾದ ಪ್ರದೇಶಲ್ಲಿ ಸುಮಾರು ಎರಡು ಅಂತಾರಾಷ್ಟ್ರೀಯ ಮಾದರಿ ಮರದ ಕೋರ್ಟ್ಗಳನ್ನು ಹೊಂದಿರುವ ಒಳಾಂಗಣ ಕ್ರೀಡಾಂಗಣವು ಆಧುನಿಕತೆ ಪೂರಕವಾಗಿ ನಿರ್ಮಾಣಗೊಂಡಿದೆ. ಇದಕ್ಕೆ ಪೂರಕವಾದ ಸುಸಜ್ಜಿತ ಜಿಮ್ ಸೆಂಟರ್, ಒಳಾಂಗಣದಲ್ಲಿ ವಿಶೇಷವಾಗಿ 20 ಅಡಿ ಎತ್ತರದ ಗೋಡೆ ನಿರ್ಮಿಸಿ ಕೂಲಿಂಗ್ ಶೀಟ್ಗಳನ್ನು ಅಳವಡಿಸಲಾಗಿದೆ. ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ವಿಶ್ರಾಂತಿ ಕೊಠಡಿಗಳು, ಶೌಚಾಲಯ, ನೀರಿನ ಸೌಲಭ್ಯ ಸೇರಿದಂತೆ ಸಕಲ ಮೂಲಭೂತ ಸೌಲಭ್ಯಗಳೊಂದಿಗೆ ರೂ.70ಲಕ್ಷ ವೆಚ್ಚದಲ್ಲಿ ಈ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಂಡಿದೆ. ನುರಿತ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕ ಸಮಯದಲ್ಲಿ ತರಬೇತಿಗಳನ್ನು ನೀಡಲಾಗುವುದು ಸಂಸ್ಥೆಯ ಮುಖ್ಯಸ್ಥ ಹರೀಶ್ಚಂದ್ರ, ವರುಣ್ ಹಾಗೂ ವತನ್ ತಿಳಿಸಿದ್ದಾರೆ.