ಸರ್ವೆ ಇಲಾಖೆ ಬಗ್ಗೆ ದೂರು ನೀಡಲು ಅಸ್ತಿತ್ವದಲ್ಲಿಲ್ಲದ ದೂರವಾಣಿ-ಕಾಟಾಚಾರಕ್ಕಾಗಿ ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಸಹಾಯವಾಣಿ-ಡಿಸಿ,ಡಿಡಿಎಲ್‌ಆರ್‌ಗೆ ದೂರು

0

ಪುತ್ತೂರು: ಸರ್ವೆ ಇಲಾಖೆಯಲ್ಲಿನ ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬದ ಬಗ್ಗೆ ದೂರು ನೀಡಲು ಪುತ್ತೂರು ಸರ್ವೆ ಇಲಾಖೆಯಲ್ಲಿ ಅಸ್ತಿತ್ವದಲ್ಲಿಲ್ಲದ ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ ಎಂದು ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಭೂ ದಾಖಲೆಗಳ ಜಿಲ್ಲಾ ಉಪನಿರ್ದೇಶಕರಿಗೆ ದೂರು ನೀಡಲಾಗಿದೆ.


ಇಲ್ಲಿನ ಕಛೇರಿಯಲ್ಲಿ ಸರಕಾರ ಪ್ರಕಟಿಸಿರುವ ದೂರವಾಣಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬರುತ್ತಾ ಇಲ್ಲ. ಈ ಕಛೇರಿಯಲ್ಲಿ ಅನಗತ್ಯ ವಿಳಂಬ ಪ್ರತಿನಿತ್ಯ ಸಾರ್ವಜನಿಕರು ಅನುಭವಿಸಬೇಕಾಗಿದೆ. ಪ್ರಾಮಾಣಿಕ ಅರ್ಜಿದಾರರು ಇಲ್ಲಿ ಸಂಕಷ್ಟ ಪಡಬೇಕಾಗಿದೆ. ಈ ಬಗ್ಗೆ ಸರಕಾರ ಈ ಕಛೇರಿಯಲ್ಲಿ ಪ್ರಕಟಿಸಿದ ದೂರವಾಣಿ ಕೂಡ ಜನರ ಉಪಯೋಗಕ್ಕೆ ಬರುತ್ತಾ ಇಲ್ಲ. ಕಾಟಾಚಾರಕ್ಕಾಗಿ ಇಲ್ಲಿ ಭ್ರಷ್ಟಾಚಾರದ ದೂರು ನೀಡಲು ಸಹಾಯವಾಣಿ ಇರುವ ಹಾಗಿದೆ. ಸರಿಯಾದ ದೂರವಾಣಿ ಸಂಖ್ಯೆಯನ್ನು ಈ ಕಛೇರಿಯಲ್ಲಿ ಪ್ರಕಟಿಸಿ ಜನರಿಗೆ ಉಪಯೋಗವಾಗುವಂತೆ ಕ್ರಮಕೈಗೊಳ್ಳಲು ಮನವಿಯಲ್ಲಿ ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here