ತಾ|ಸರಕಾರಿ ನೌಕರರ ಸಂಘದಿಂದ ಪುರಭವನದಲ್ಲಿ ತುಳು ನಾಟಕ “ಮೈತಿದಿ”-ಯಶಸ್ವಿ ಪ್ರದರ್ಶನ

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಶಾಖೆಯ ವತಿಯಿಂದ  ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿದ ಹೊಸ ನಾಟಕ, 46ನೇ ಪ್ರಯೋಗ “ಮೈತಿದಿ” ಮೇ.9ರಂದು ಸಂಜೆ ಪುರಭವನದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. 

ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯರವರು ಸ್ವಾಗತಿಸಿ ಮಾತನಾಡಿ, ಈ ನಾಟಕದ ಪ್ರದರ್ಶನವು ಏಪ್ರಿಲ್ 24 ರಂದು ಆಗಬೇಕಿತ್ತು. ಲೋಕಸಭಾ ಚುನಾವಣಾ ನಿಮಿತ್ತ ನಮ್ಮ ಸರಕಾರಿ ನೌಕರರು ಚುನಾವಣಾ ಸೇವೆಯಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ನಾನ್-ವೆಜ್ ಡಯಲಾಗ್ ಗಳನ್ನು ಹೊಂದದೆ ಸಂಪೂರ್ಣ ಸಸ್ಯಹಾರಿ ನಾಟಕ ಇದಾಗಿದ್ದು ಮಹತ್ವದ ಸಂದೇಶ ಈ ನಾಟಕ ಹೊಂದಿದೆ. ಸಂಘದ ಆರ್ಥಿಕ ಪ್ರಗತಿ ಹಾಗೂ ಸರಕಾರಿ ನೌಕರರ ಮನಸ್ಸಿನ ರಿಲ್ಯಾಕ್ಸಿಗೋಸ್ಕರ ಈ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಪ್ರಸ್ತುತ ಮೈತಿದಿ ನಾಟಕವು 46ನೇ ಪ್ರಯೋಗ ಕಾಣ್ತಾ ಇದೆ. ತುಳು ನಾಟಕ ರಂಗ ನಿಂತ ನೀರಾಗಿತ್ತು. ಒರಿಯರ್ದೊರಿ ಅಸಲ್ ನಂತರ ನಾಟಕ ರಂಗಕ್ಕೆ ಹೆಚ್ಚಿನ ಕಳೆ ಬಂದಿದೆ. ಶಿವದೂತೆ ಗುಳಿಗೆ ಬಳಿಕ ವಿಭಿನ್ನ ಶೈಲಿಯ ನಾಟಕ ಮೈತಿದಿ ಇದಾಗಿದ್ದು ನಾಟಕಾಭಿಮಾನಿಗಳ ಪ್ರೋತ್ಸಾಹ ಬೇಕಾಗಿದೆ ಎಂದರು.

ವೇದಿಕೆಯಲ್ಲಿ ತಾಲೂಕು ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮಾಜಿ ಅಧ್ಯಕ್ಷ ಕೃಷ್ಣಪ್ಪ ಕೆ, ಗೌರವಾಧ್ಯಕ್ಷ ರಾಮಚಂದ್ರ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ, ಪ್ರಧಾನ ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಮಾಜಿ ಉಪಾಧ್ಯಕ್ಷ ರಾಮಚಂದ್ರ ಭಟ್, ಉಪಾಧ್ಯಕ್ಷರಾದ ಹೊನ್ನಪ್ಪ ಬಿ.ಗೌಡ, ಪದ್ಮಾವತಿ, ವಿಜಯಕುಮಾರ್, ಹಿರಿಯ ಉಪಾಧ್ಯಕ್ಷ ಹರಿಕೃಷ್ಣ ಬೈಲಾಡಿ ಸಹಿತ ಹಲವರು ಉಪಸ್ಥಿತರಿದ್ದರು.

ಸನ್ಮಾನ
ಕಲಾ ಸಂಗಮದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ರವರ ನಾಟಕರಂಗದ ಸೇವೆಗಾಗಿ ತಾಲೂಕು ಸರಕಾರಿ ನೌಕರರ ಸಂಘದಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಯಶಸ್ವಿ ಪ್ರದರ್ಶನ
ಕಲಾ ಸಂಗಮದ ಶಿವದೂತ ಗುಳಿಗೆ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನ, ಸ್ವರಾಜ್ ಶೆಟ್ಟಿ ಅಭಿನಯದ ತುಳು ವಿಭಿನ್ನ ಶೈಲಿಯ ಈ ನಾಟಕವು ಯಶಸ್ವಿ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here