ತುಳು ಪರ್ಬ “ಪತ್ತನಾಜೆ ಪೊಲಬು ” ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಅಭಿಪ್ರಾಯ-ಬೆನ್ನಿ ಬೇಲೆ ಮಲ್ತೊಂದೆ ದುಂಬು ಬತ್ತಿನಕುಲು ತುಳುವೆರ್

0

ಪುತ್ತೂರು : ಕೃಷಿ ಸಂಸ್ಕೃತಿ ಮೂಲವಾಗಿರುವ ತುಳುನಾಡಿನಲ್ಲಿ ಪತ್ತನಾಜೆ ಆಚರಣೆಯೂ ಅತ್ಯಂತ ಮಹತ್ವದ್ದಾಗಿದೆ ಜೊತೆಗೆ ಎಲ್ಲಾ ರೀತಿಯ ಉತ್ಸವ , ಶುಭ ಸಮಾರಂಭಗಳ ಆಚರಣೆಗೆ ಕೊನೆಯ ದಿನವೂ ಕೂಡ. ಅಂದಿನಿಂದ ಮಳೆಗಾಲ ಆರಂಭವಾಗಿ , ಕೊನೆಯಾಗುವ ತನಕ ಯಾವ ಉತ್ಸವ , ಶುಭಕಾರ್ಯಗಳು ನಡೆಯದು, ಮತ್ತೆ ಕೃಷಿ ಚಟುವಟಿಕೆಯಲ್ಲಿ ಜನರು ಪಾಲ್ಗೊಲುವಂತಾಗಲು ಈ ಪತ್ತನಾಜೆ ದಿನವನ್ನು ಹಬ್ಬಗಳ ಆಚರಣೆಯ ಕೊನೆ ದಿನವನ್ನಾಗಿ ಆಯ್ಕೆ ಮಾಡಲಾಗಿದೆಯೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯೆ ವಿದ್ಯಾಶ್ರೀ ಎಸ್ ಅಭಿಪ್ರಾಯಪಟ್ಟರು.

ಮೇ.24 ರಂದು ಬೊಳುವಾರು ನವನೀತ ಸಭಾಂಗಣದಲ್ಲಿ ತುಳು ಅಪ್ಪೆ ಕೂಟ ಪುತ್ತೂರು ಇದರ ನೇತೃತ್ವದಲ್ಲಿ , ಶ್ರೀ ಗುರುದೇವಾ ಸೇವಾ ಬಳಗ ಹಾಗೂ ,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ತುಳು ಪರ್ಬ ಪತ್ತನಾಜೆ ಪೊಲಬು ” ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ , ನೆರೆಯ ಜಿಲ್ಲೆ ಕಾಸರಗೋಡು ಮತ್ತು ಅವಿಭಜಿತ ದ.ಕ.ಜಿಲ್ಲೆ ಬೇರೆ ,ಬೇರೆಯಾದರೂ ಭೂತ , ದೈವ ,ನಾಗರಾಧನೆ , ದೇವತಾ ಕಾರ್ಯ ಇದಾವುದರಲ್ಲೂ ಬದಲಾವಣೆ ಇಲ್ಲ ಮತ್ತು ನಮೆಲ್ಲರ ಸಂಸ್ಕೃತಿ ಒಂದೇ ರೀತಿಯಾಗಿದ್ದು , ಎಲ್ಲಾ ರೀತಿಯ ಉತ್ಸವ ಕಾರ್ಯಗಳ ಕೊನೆ ಹಾಗೂ ಕೃಷಿ ಕಾರ್ಯ ಆರಂಭಿಸುವ ನಡುವಿನ ದಿನವೇ ಈ “ಪತ್ತನಾಜೆ ” ಎಂದು ಹೇಳಿದ ಅವರು , . ತುಳುವೆರ್ ಕೃಷಿ ಚಟುವಟಿಕೆ ಕಾರ್ಯ ಮೂಲಕವೇ ಮುಂದೆ ಬಂದವರೆಂದು ಹೇಳಿ , ಶುಭ ಕೋರಿದರು.ಶುಭ ಹೆಬ್ಬಾರಬೈಲು ಕೂಡ ಹಾರೈಸಿದರು.


ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ ,ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಇದರ ಅಧ್ಯಕ್ಷೆ ನಯನಾ ರೈ , ತುಳು ಅಪ್ಪೆಕೂಟ ಇದರ ಗೌರವಧ್ಯಕ್ಷೆ ಪ್ರೇಮಲತಾ ರಾವ್ ಹಾಗೂ ತುಳು ಅಪ್ಪೆಕೂಟ ಇದರ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಮತ್ತು ಪೂವರಿ ಪತ್ರಿಕೆ ಸಂಪಾದಕ ವಿಜಯ್ ವೇದಿಕೆಯಲ್ಲಿದ್ದರು.
ರೋಹಿಣಿ ರಾಘವ ಆಚಾರ್ಯ , ಪ್ರೇಮಲತಾ ರಾವ್ ,ಗಾಯತ್ರಿ ,ಉಷಾ ,ಪ್ರೇಮಾ ಕೆಮ್ಮಾಯಿ ,ಜಯಲಕ್ಷ್ಮೀ ಭಟ್ ಹಾಗೂ ಮಲ್ಲಿಕಾ ಜೆ ರೈ ತುಳುನಾಡ ಪ್ರಸಿದ್ಧ ಹಲವೂ ಕವನ , ಸಂಗೀತಗಳನ್ನು ಹಾಡಿದರು.
ಈ ವೇಳೆ ನಿವೃತ್ತ ಪ್ರೊಫಸರ್ ವತ್ಸಲಾ ರಾಜ್ಞೆ , ಗೌರಿ ಬನ್ನೂರು ಸಹಿತ ತುಳು ಅಪ್ಪೆ ಕೂಟ , ಗುರುದೇವಾ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಇದರ ಪದಾಧಿಕಾರಿಗಳು , ಸದಸ್ಯರು ಇದ್ದರು. ಪ್ರೇಮಲತಾ ರಾವ್ ಸ್ವಾಗತಿಸಿ ,ಕವಿತಾ ಅಡೂರು ನಿರೂಪಿಸಿ ,ಕೋಶಾಧಿಕಾರಿ ಭಾರತಿ ವಸಂತ್ ವಂದಿಸಿದರು.

LEAVE A REPLY

Please enter your comment!
Please enter your name here