ಎಸ್ ಆರ್ ಕೆ ಲ್ಯಾಡರ್ಸ್ ರಜತ ಸಂಭ್ರಮಕ್ಕೆ ಚಾಲನೆ

0

ಪುತ್ತೂರು:ಎಸ್ ಆರ್ ಕೆ ಲ್ಯಾಡರ್ಸ್ ರಜತ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಎಸ್ ಆರ್ ಕೆ ಲ್ಯಾಡರ್ಸ್ ಮಾಲಕ ಕೇಶವ ಅಮೈ ಅವರ ತಾಯಿ ರಾಮಕ್ಕ ದೀಪ ಪ್ರಜ್ವಲಿಸಿದರು.
ಈ ಸಂದರ್ಭ ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ, ಪತ್ನಿ ಮಾಲತಿ, ಪುತ್ರ ಗಗನ್ ಮತ್ತು ಕುಟುಂಬಸ್ಥರು ಹಾಗು ಸಂಯೋಜನಾ ಸಮಿತಿ ಸಂಯೋಜಕರು ಹಾಗು ಎಸ್ ಆರ್ ಕೆ ಲ್ಯಾಡರ್ಸ್ ನ ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರಂಭದಲ್ಲಿ ಸಿಬ್ಬಂದಿಗಳಿಗೆ ದ್ವಾರದಲ್ಲಿ ಸ್ವಾಗತ:
ಕಾರ್ಯಕ್ರಮದ ಆರಂಭದಲ್ಲಿ ಎಸ್ ಆರ್ ಕೆ ಲ್ಯಾಡರ್ಸ್ ನ ಸಿಬ್ಬಂದಿಗಳನ್ನು ಸಭಾಂಗಣದ ದ್ವಾರದಲ್ಲಿ ಸ್ವಾಗತಿಸಲಾಯಿತು. ಎಸ್ ಆರ್ ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರು ಸಿಬ್ಬಂಧಿಗಳಿಗೆ ಹೂ ಗುಚ್ಚ ನೀಡಿ ಕಾರ್ಯಕ್ರಮದ ಸಭಾಂಗಣಕ್ಕೆ ಬರಮಾಡಿಕೊಂಡರು. ಚೆಂಡೆ ಸದ್ದಿನೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ತೆರಳಿ ರಜತ ಸಂಭ್ರಮದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಬಳಿಕ ವಿವಿಧ ತಂಡಗಳಿಂದ ಭಜನೆ ಮತ್ತು ಕುಣಿತ ಭಜನೆ ಆರಂಭಗೊಂಡಿತು.

LEAVE A REPLY

Please enter your comment!
Please enter your name here