ಕಾವು ಪಂಚವಟಿನಗರದಲ್ಲಿ ಅಪಾಯಕಾರಿ ಮರ ತೆರವಿಗೆ ಸಾರ್ವಜನಿಕರ ಆಗ್ರಹ

0

ಬಡಗನ್ನೂರುಃ ಕಾವು ಮೇಲಿನಪೇಟೆಯ ಮಧ್ಯಭಾಗದಲ್ಲಿ ದೇವದಾರು ಜಾತಿಯ ಎರಡು ಮರಗಳಿದ್ದು ಬುಡಸಮೇತ ಬೀಳುವ ಹಂತದಲ್ಲಿದೆ.ಈ ಮರದ ಕೆಳಗೆ ಹಲವು ಅಂಗಡಿಗಳಿದ್ದು,ರಿಕ್ಷಾ ನಿಲ್ದಾಣವೂ, ಪಂಚಾಯತ್ ಕಟ್ಟಡಗಳು  ಇದೆ.ಇನ್ನೂ ಮತ್ತಷ್ಟು ಅಪಾಯ ಸಂಭವಿಸುವಂತಹ  ವಿದ್ಯುತ್ ಹೈ ವೋಲ್ಟೇಜ್ ತಂತಿಗಳು ಹಾದು ಹೋಗಿದ್ದು, ಈ ಭಾಗದಲ್ಲಿ ನೂರಾರು  ಸಾರ್ವಜನಿಕರು ಓಡಾಡುತ್ತಿರುವುದರಿಂದ ಅಪಾಯ ಸಂಭವಿಸುವುದು ಕಟ್ಟಿಟ್ಟಬುತ್ತಿ.

ಈ ನಿಟ್ಟಿನಲ್ಲಿ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ತುರ್ತುಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here