ಮೇ 30: ನೂರುಲ್ ಹುದಾ ವಿದ್ಯಾರ್ಥಿ ಸಂಘದಿಂದ ಡ್ರಗ್ಸ್ ವಿರುದ್ಧ ಅಖಿಲ‌ ಕರ್ನಾಟಕ ಮ್ಯಾರಥಾನ್-ಪ್ರಥಮ ರೂ.10 ಸಾವಿರ ನಗದು ಬಹುಮಾನ 

0

ಪುತ್ತೂರು: ಮಾಡನ್ನೂರು ನೂರುಲ್‌ಹುದಾ ಇಸ್ಲಾಮಿಕ್ ಅಕಾಡೆಮಿ ಇದರ ವಿದ್ಯಾರ್ಥಿ ಸಂಘಟನೆ ಎನ್ ಎಸ್ ಯು ವತಿಯಿಂದ ಮೇ.30ರಂದು ಮಾದಕ ವ್ಯಸನಗಳ ವಿರುದ್ಧ ಬೃಹತ್ ಮ್ಯಾರಥಾನ್ ನಡೆಯಲಿದೆ.

ಸಂಜೆ 3 ಗಂಟೆಗೆ ಈಶ್ವರಮಂಗಲ ಪೇಟೆಯಿಂದ ಕಾವು ಜಂಕ್ಷನ್‌ ವರೆಗೆ ನಡೆಯುವ ಈ ಮ್ಯಾರಥಾನ್ ನಲ್ಲಿ ವಿಜೇತರಾದವರಿಗೆ ಬಹುಮಾನ ಘೋಷಿಸಲಾಗಿದ್ದು, ಪ್ರಥಮ ಸ್ಥಾನ ಪಡೆದವರಿಗೆ 10 ಸಾವಿರ, ದ್ವಿತೀಯ ಸ್ಥಾನಕ್ಕೆ 7 ಸಾವಿರ, ತೃತೀಯ ಸ್ಥಾನಕ್ಕೆ 5 ಸಾವಿರ ರೂ. ಪಾರಿತೋಷಕ ನೀಡಲಾಗುವುದು. ಭಾಗವಹಿಸಲು ಇಚ್ಛಿಸುವವರು ಮುಂಗಡವಾಗಿ ನೋಂದಣೆ ಮಾಡಲು ಮೊ: 7717567972 ಸಂಪರ್ಕಿಸುವಂತೆ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here