ಆರ್.ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

0

ಪುತ್ತೂರು: ವಿದ್ಯಾರ್ಥಿಗಳಿಗೆ ಆಸರೆಯಾಗೋಣ, ಮುಗ್ದ ಮನಸ್ಸುಗಳಿಗೆ ನೆರವಾಗೋಣ.ಎಂಬ ಧ್ಯೇಯದೊಂದಿಗೆ ನಾಝಿಮ್ ಆರ್.ಕೆ ಸಾರಥ್ಯದ ಆರ್.ಕೆ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ವತಿಯಿಂದ ಬಡ 30 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ರಫೀಕ್ ಸಖಾಫಿ ಬಳ್ಳಾರಿ ಅವರು ಮಾತನಾಡಿ ವಿದ್ಯಾರ್ಥಿಗಳ ಗುರಿಗಳನ್ನು ಪೋಷಕರು ಅರಿತಿರಬೇಕು ಮಕ್ಕಳು ಯಾವ ಕಲಿಕೆಗೆ ಹೆಚ್ಚು ಆಸಕ್ತಿ ತೋರುತ್ತಾರೊ ಅದಕ್ಕನುಗುಣವಾಗಿ ಅವರಿಗೆ ಪ್ರೋತ್ಸಾಹಗಳನ್ನು ನೀಡಬೇಕು ಎಂದು ತಿಳಿಸಿದರು. ಪ್ರಸ್ತಾವಿಕ ಭಾಷಣ ಮಾಡಿದ ಹಾಶಿರ್ ಕುಂತೂರು ಅವರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಒತ್ತು ನೀಡಬೇಕು, ಭವಿಷ್ಯದ ನಾಯಕರುಗಳಾಗಿ ಮೂಡಿಬರಬೇಕು ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ನವಾಝ್ ಕೆಮ್ಮಾಯಿ, ಸುಹೈಲ್ ಕೆಮ್ಮಾಯಿ ಹನೀಫ್ ಬಡಾವು, ಖಿಲ್ರ್ ಕೆಮ್ಮಾಯಿ ಉಪಸ್ಥಿತರಿದ್ದರು. ರಫೀಕ್ ಕೆಮ್ಮಾಯಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here