ರಾಮಕುಂಜ: ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ಮತ್ತು ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇದರ ಸಹಯೋಗದೊಂದಿಗೆ ಶಿಕ್ಷಕರಿಗೆ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಮೇ.24ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಶ್ರೀನಿವಾಸ ಭಟ್ ಯು ಅವರು ಉದ್ಘಾಟಿಸಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ಅತೀ ಮುಖ್ಯ. ಶಿಕ್ಷಕರು ಮಕ್ಕಳ ಕಲಿಕಾ ಸಮಯದಲ್ಲಿ ನ್ಯೂನ್ಯತೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿದಾಗ ಪರಿಪೂರ್ಣರಾಗಲು ಸಾಧ್ಯ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಮಾತನಾಡಿ, ಶಿಕ್ಷಕರೆಲ್ಲರೂ ಈ ಕಾರ್ಯಾಗಾರದ ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಲು ಕಾರ್ಯೊನ್ಮುಖರಾಗಬೇಕೆಂದು ಕರೆನೀಡಿದರು. ನಂತರ ಹದಿಹರೆಯದ ಸಮಸ್ಯೆಗಳು-ಪ್ರೊ. ಡಾ. ಶ್ರೀನಿವಾಸ ಭಟ್ ಯು (ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರು), ಕೌನ್ಸಿಲಿಂಗ್ ಕೌಶಲ್ಯಗಳ ಮೂಲಭೂತ ಅಂಶಗಳು- ಡಾ. ಶ್ರೀವಿದ್ಯಾ (ಕೌನ್ಸಲರ್ & ರಿಸರ್ಚ್ ಅಸೋಸಿಯೇಟ್), ಜೀವನ ಕೌಶಲ್ಯ ತರಬೇತಿ-ಶ್ರೀಮತಿ ಆಗ್ನೈಟ ಅರುಣ್(ಉಪನ್ಯಾಸಕರು ಮತ್ತು ಪಿ.ಎಸ್.ಡಬ್ಲ್ಯು ಕ್ಷೇಮ ಮನಶಾಸ್ತ್ರ ವಿಭಾಗ ಮತ್ತು ಸಿಂಧು(ಕ್ಲಿನಿಕಲ್ ಸೈಕಾಲಾಜಿಸ್ಟ್, ಕ್ಷೇಮ ಮನಶಾಸ್ತ್ರ ವಿಭಾಗ) ಇವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು.
ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಆನಂದ ಎಸ್ ಟಿ, ಸಿ.ಬಿ.ಎಸ್.ಇ ಪ್ರಾಂಶುಪಾಲ ಪ್ರವಿದ್ ಪಿ. ಉಪಸ್ಥಿತರಿದ್ದರು. ಸಹಶಿಕ್ಷಕಿಯರಾದ ನಿಶಿತಾ ಪಿ., ಗೀತಾ ಕೆ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಅನುಶ್ರೀ ಪಿ ಎಸ್ ಸ್ವಾಗತಿಸಿ, ಅಪೇಕ್ಷಾ ಪಿ ಬಿ ವಂದಿಸಿದರು. ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಆಡಳಿತಕ್ಕೆ ಒಳಪಟ್ಟ ಎಲ್ಲಾ ವಿದ್ಯಾಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.