ಉಪ್ಪಿನಂಗಡಿ: ಅರಫಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ದಿನಾಚರಣೆ

0

ಉಪ್ಪಿನಂಗಡಿ: ಇಲ್ಲಿನ ಅರಫಾ ಆಂಗ್ಲಮಾಧ್ಯಮ ಶಾಲೆಯಲ್ಲಿ ಜೂ.5ರಂದು ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ‍್ಯಕ್ರಮಕ್ಕೆ ಶಾಲೆಯ ಸಂಚಾಲಕರಾದ ಹಾಜಿ ಕೆ.ಪಿ.ಸಿದ್ದೀಕ್‌ರವರು ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿದರು. ಶಾಲಾ ಮುಖೋಪಾಧ್ಯಾಯರಾದ ಕವಿತರವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ, ಚಿತ್ರಕಲೆ ಸ್ಪರ್ಧೆಗಳನ್ನು ಮತ್ತು ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡೆಸಲಾಯಿತು. 10ನೇ ತರಗತಿ ವಿದ್ಯಾರ್ಥಿನಿ ಸಿಮ್ರಾನ್ ನಿರೂಪಿಸಿದರು. 9ನೇ ತರಗತಿಯ ಆಯಿಷ ಸಮಾನ್ ಸ್ವಾಗತಿಸಿದರು. 8ನೇ ತರಗತಿಯ ಮರೀಹ ಸಜ್‌ಲ ವಂದಿಸಿದರು. ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here