ಉಪ್ಪಿನಂಗಡಿ: ಸೇವಾ ನಿವೃತ್ತರಿಗೆ ಬೀಳ್ಕೊಡುಗೆ ಕಾರ್ಯಕ್ರಮ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಓರ್ವ ಉಪ ಪ್ರಾಂಶುಪಾಲೆ, ಓರ್ವ ಶಿಕ್ಷಕಿ ಹಾಗೂ ಮತ್ತೋರ್ವ ಕಚೇರಿ ಸಹಾಯಕಿಯವರು ಕಳೆದ ಮೇ 31 ಸೇವಾ ನಿವೃತ್ತಿ ಹೊಂದಿದ್ದು, ಶಾಲೆಯ ವತಿಯಿಂದ ಅವರಿಗೆ ಜೂ.5ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.


ಅಭಿನಂದನಾ ಮಾತುಗಳನ್ನಾಡಿದ ನಿವೃತ ಮುಖ್ಯ ಶಿಕ್ಷಕ ಹಾಗೂ ರಾಷ್ಟ್ರಪ್ರಶಸ್ತಿ ಪುರಸ್ಕೃತ ದಿವಾಕರ ಆಚಾರ್ಯ ಗೇರುಕಟ್ಟೆ, ಮೂವರು ಕೂಡಾ ಉತ್ತಮ ಕೆಲಸದ ಮೂಲಕ ತಮ್ಮ ಸರಕಾರಿ ಕೆಲಸಗಳಿಗೆ ಮೌಲ್ಯವನ್ನು ತಂದು ಕೊಟ್ಟಿದ್ದಾರೆ. ಈ ಮೂಲಕ ಶಾಲೆ ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇವರ ನಿವೃತ್ತ ಜೀವನವು ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.ಶಿಕ್ಷಕ ವೃಂದದ ಪರವಾಗಿ ಲಕ್ಷ್ಮೀಶ ನಾಯ್ಕ್ ಶುಭ ಹಾರೈಸಿದರು.


ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಗುಣವತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ., ಪದವಿ ಪೂರ್ವ ಕಾಲೇಜಿನ ಎಸ್.ಬಿ.ಸಿ. ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್, ಹಿರೇಬಂಡಾಡಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಶ್ರೀಧರ ಭಟ್ ಕೆ., ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಗುಡ್ಡಪ್ಪ ಬಲ್ಯ, ನಿವೃತ್ತ ಕೃಷಿ ಅಧಿಕಾರಿ ಮನಮೋಹನ್, ಆನಂದ ಉರುವಾಲು, ಶಾಲಾ ಎಸ್‌ಡಿಎಂಸಿ ಸದಸ್ಯರಾದ ನಿವೃತ್ತ ಯೋಧ ಜೆ.ಕೆ. ಪೂಜಾರಿ ಇಳಂತಿಲ, ಆನಂದ ಪೂಜಾರಿ, ಹರೀಶ ನಾಯ್ಕ, ಸುಂದರಿ ಉಪಸ್ಥಿತರಿದ್ದರು.


ಶಲಾ ಉಪ ಪ್ರಾಂಶುಪಾಲೆ ಪೂರ್ಣಿಮಾ ನಾಯಕ್ ಸ್ವಾಗತಿಸಿದರು. ಶಿಕ್ಷಕರಾದ ಪ್ರಾರ್ಥನಾ, ಪ್ರೀತಾ, ಶ್ರೀಮತಿ ದೇವಕಿ ಸನ್ಮಾನ ಪತ್ರ ವಾಚಿಸಿದರು. ಸುಮಾ ಆರ್. ವಂದಿಸಿದರು. ವಿಜಯಕುಮಾರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here