ಕೃಷಿ ಚಟುವಟಿಕೆ ಮರುಹುಟ್ಟು ನೀಡಿದೆ – ದೀಪ್ತಿ ರಘುನಾಥ್
ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ವಿಶ್ವ ಪರಿಸರ ವರ್ಷದ ಧ್ಯೇಯ ನಮ್ಮ ಭೂಮಿ – ನಮ್ಮ ಭವಿಷ್ಯ- ನಾವು ಪರಿಸರದ ಪುನರುತ್ಥಾನದ ಪೀಳಿಗೆ ಆಧಾರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಅತಿಥಿ ದೀಪ್ತಿ ರಘುನಾಥ್ ಮಾತನಾಡಿ ನಮ್ಮ ಹಿರಿಯರು ಪರಿಸರದ ಅವಿಭಾಜ್ಯ ಅಂಗವಾಗಿದ್ದರು.ಇಂದು ಸ್ವಾರ್ಥದ ಬದುಕಿನಲ್ಲಿ ವೈಯುಕ್ತಿಕ ಸುಖಕ್ಕೆ ಮಹತ್ವ ನೀಡುತ್ತಾ ಪರಿಸರವನ್ನು ಮರೆಯುತ್ತಿದ್ದೇವೆ. ಪ್ರತಿದಿನವೂ ಪರಿಸರ ದಿನವಾದಾಗ ಸ್ವಚ್ಛ-ಸುಂದರ ಬಾಳಿನ ಸವಿಯನ್ನು ನಾವು ಸವಿಯುವಂತಾಗಬೇಕು. ಅನಾರೋಗ್ಯ ಪೀಡಿತೆಯಾಗಿದ್ದು, ಬದುಕುನಲ್ಲಿ ನಿರಾಶೆ ಕಂಡ ನನಗೆ ಇಂದೀಗ ನನ್ನ ಕೃಷಿ ಚಟುವಟಿಕೆ ಔಷಧ ರಹಿತ ಆರೋಗ್ಯ ಮತ್ತು ಖುಷಿಯಿಂದ ಕೂಡಿದ ಬದುಕನ್ನು ಕರುಣಿಸಿದೆ ಎಂದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಸದಸ್ಯ ಕೃಷಿಕ ತಿರುಮಲೇಶ್ವರ ಭಟ್ ಜಲಸಂರಕ್ಷಣೆಯ ವಿಧಿ-ವಿಧಾನಗಳ ಸರಳ ಮಾರ್ಗಗಳನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಕೃಷಿಕ ನಿವೃತ್ತ ತಹಶೀಲ್ದಾರ ಎಂ ರಘುನಾಥ್, ಪ್ರಾಥಮಿಕ ಮತ್ತು ಪ್ರೌಢವಿಭಾಗದ ಮುಖ್ಯಗುರು ನಳಿನಿ ವಾಗ್ಲೆ, ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಮಕ್ಕಳು, ಸ್ಕೌಟ್ಸ್- ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಘೋಷಣೆಯೊಂದಿಗೆ ಜಲ-ಸಂರಕ್ಷಣೆಯ ಮಹತ್ವ ತಿಳಿಸಿದರು. ಶಾಲಾ ಶಿಕ್ಷಕ-ಪೂರಕ ಶಿಕ್ಷಕ ವೃಂದದವರಿಗೆ ತಮ್ಮ ಮನೆಗಳ ನೀರಿನ ಮೂಲಗಳಲ್ಲಿ ಅಚಿಟಿಸಲು ಜಲಸಂರಕ್ಷಣೆಯ ಸಂದೇಶಿತ ಭಿತ್ತಿ ಪತ್ರಗಳನ್ನು ನೀಡಲಾಯಿತು. ಶಾಲಾ ವೃತಿಕಾ ವಿಜ್ಞಾನ ಸಂಘದ ಸಂಯೋಜಕ ಶಿಕ್ಷಕರು ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.