ಇಂಟರ್ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ ಶಿಪ್ ಗೆ ಉಸ್ಮಾನ್ ಬಿ ಆಯ್ಕೆ

0

ಪುತ್ತೂರು: ಪಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್ ವತಿಯಿಂದ ಮೇ 22 ಮತ್ತು 23ರಂದು ಹೈದರಾಬಾದ್ ನಲ್ಲಿ ಜರುಗಿದ 1ST ಫೆಡೆರೇಷನ್ ಕಪ್ ನ್ಯಾಷನಲ್ ಮಾಸ್ಟರ್ಸ್ ಗೇಮ್ಸ್ -2024 ರಲ್ಲಿ ಪೆರಾಬೆ ಗ್ರಾಮ ಪಂಚಾಯತಿಯ ಗ್ರೇಡ್-2 ಕಾರ್ಯದರ್ಶಿ, ದ.ಕ.ಜಿಲ್ಲಾ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಸ್ಮಾನ್ ಬಿ ಇವರು 50 ವಯೋಮಾನದವರ 60ಮೀಟರ್ ಓಟದಲ್ಲಿ ಕಂಚಿನ ಪದಕ ಪಡೆದು 2024ರ ನವಂಬರ್‌ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಇಂಟರ್ನ್ಯಾಷನಲ್ ಮಾಸ್ಟರ್ಸ್ ಚಾಂಪಿಯನ್ ಶಿಪ್-2024ಗೆ ಆಯ್ಕೆಯಾಗಿರುತ್ತಾರೆ.

ಮೂಲತ: 34ನೆಕ್ಕಿಲಾಡಿ ಗ್ರಾಮದ ಆದರ್ಶನಗರ ನಿವಾಸಿಯಾಗಿರುವ ಇವರು ಪ್ರಸ್ತುತ ಪೆರ್ನೆಯಲ್ಲಿ ವಾಸ್ತವ್ಯ ವಿರುತ್ತಾರೆ. ಉಸ್ಮಾನ್ ಅವರು ಸಿತಾರ ಆದರ್ಶನಗರ ಮತ್ತು ಪ್ರಿಯಾ ಉಬಾರ್ ಕ್ರಿಕೆಟ್ ತಂಡದ ಸ್ಥಾಪಕ ಸದಸ್ಯರಾಗಿರುತ್ತಾರೆ.

LEAVE A REPLY

Please enter your comment!
Please enter your name here