ಅಧ್ಯಕ್ಷೆ:ವಿಲ್ಮಾ ಗೊನ್ಸಾಲ್ವಿಸ್,ಕಾರ್ಯದರ್ಶಿ:ಲೀನಾ ಮಚಾದೊ,ಕೋಶಾಧಿಕಾರಿ:ವಿಕ್ಟರ್ ಡಿ’ಸೋಜ
ಪುತ್ತೂರು: ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 6, ವಲಯ ಒಂದರ ಲಯನ್ಸ್ ಕ್ಲಬ್ ಮಾಣಿ ಪ್ರಾಯೋಜಿಸಲ್ಪಡುತ್ತಿರುವ ನೂತನ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಜೂ.14 ರಂದು ಅಸ್ತಿತ್ವಕ್ಕೆ ಬರಲಿದೆ.
ನೂತನ ಅಧ್ಯಕ್ಷರಾಗಿ ವಿಲ್ಮಾ ಗೊನ್ಸಾಲ್ವಿಸ್, ಕಾರ್ಯದರ್ಶಿಯಾಗಿ ಲೀನಾ ಮಚಾದೊ, ಕೋಶಾಧಿಕಾರಿಯಾಗಿ ವಿಕ್ಟರ್ ಶರೋನ್ ಡಿ’ಸೋಜ, ಪ್ರಥಮ ಉಪಾಧ್ಯಕ್ಷರಾಗಿ ವಿಶ್ವನಾಥ ಗೌಡ, ದ್ವಿತೀಯ ಉಪಾಧ್ಯಕ್ಷರಾಗಿ ಆಂಟನಿ ಒಲಿವೆರಾ, ಜೊತೆ ಕಾರ್ಯದರ್ಶಿಯಾಗಿ ನಿಶಾ ಮಿನೇಜಸ್, ಜೊತೆ ಕೋಶಾಧಿಕಾರಿಯಾಗಿ ಸನತ್ ಕುಮಾರ್, ಮೆಂಬರ್ಶಿಪ್ ಚೇರ್ಮ್ಯಾನ್ ಲ್ಯಾನ್ಸಿ ಮಸ್ಕರೇನ್ಹಸ್, ಸರ್ವಿಸ್ ಚೇರ್ಮ್ಯಾನ್ ಸಿಪ್ರಿಯನ್ ವೇಗಸ್, ಮಾರ್ಕೆಟಿಂಗ್ ಚೇರ್ಮ್ಯಾನ್ ಲಿಡ್ವಿನ್ ಸೆರಾವೋ, ಎಲ್ಸಿಐಎಫ್ ಸಂಯೋಜಕ ನೋಯೆಲ್ ಸೆರಾವೋ, ಟ್ಯಾಮರ್ ರೋಶನ್ ಡಾಯಸ್, ಟೇಯ್ಲ್ ಟ್ವಿಸ್ಟರ್ ಐರಿನ್ ಡಿ’ಸೋಜ, ಫಂಡ್ ರೈಸ್ ಚೇರ್ಪರ್ಸನ್ ಲೀನಾ ರೇಗೊ, ಮಾಹಿತಿ ತಂತ್ರಜ್ಞಾನ ಅನಿತಾ ಜ್ಯೋತಿ ಡಿ’ಸೋಜ, ನಿರ್ದೇಶಕರುಗಳಾಗಿ ಪೀಟರ್ ಡಿ’ಸೋಜ, ವೆರೋನಿಕ ಮಸ್ಕರೇನ್ಹಸ್, ಚಂಚಲಾಕ್ಷಿ, ಶಾರದಾ ಅರಸ್, ಜೇಮ್ಸ್ ಸಿ.ಆರ್, ಐವನ್ ಫೆರ್ನಾಂಡೀಸ್ರವರು ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಲ್ಮಾ ಗೊನ್ಸಾಲ್ವಿಸ್ರವರು ಪುತ್ತೂರು ನಗರ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ಬನ್ನೂರು ಚರ್ಚ್ನ ಕಥೋಲಿಕ್ ಸಭಾದ ಪ್ರಸ್ತುತ ಎರಡನೇ ಅವಧಿಗೆ ಅಧ್ಯಕ್ಷರಾಗಿ, ಸಂತ ವಿನ್ಸೆಂಟ್ ದೇ ಪಾವ್ಲ್ ಸಭಾ, ಸ್ತ್ರೀ ಸಂಘಟನೆಯ ಮಾಜಿ ಅಧ್ಯಕ್ಷರಾಗಿ, ಚರ್ಚ್ ಪಾಲನಾ ಸಮಿತಿಯಲ್ಲಿ ಮೂರು ಬಾರಿ ಕಾರ್ಯದರ್ಶಿಯಾಗಿ, ಪಾಲನಾ ಸಮಿತಿ ಸದಸ್ಯರಾಗಿ, ವಾಳೆ ಗುರಿಕಾರರಾಗಿ, ವಾಳೆ ಪ್ರತಿನಿಧಿಯಾಗಿ, ಗಾಯನ ಮಂಡಳಿ ಸದಸ್ಯರಾಗಿ ಗುರುತಿಸಿಕೊಂಡಿದ್ದು ಪ್ರಸ್ತುತ ಅವರು ಪತಿ ಹಿಲಾರಿ ಗೊನ್ಸಾಲ್ವಿಸ್, ಪುತ್ರರಾದ ಹ್ಯಾಡ್ಲಿ, ಆನ್ಸಿ, ಹಿಮಾರವರೊಂದಿಗೆ ಪಡೀಲಿನಲ್ಲಿ ವಾಸ್ತವ್ಯ ಹೊಂದಿದ್ದಾರೆ.
ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಲೀನಾ ಮಚಾದೋರವರು ಬನ್ನೂರು ಚರ್ಚ್ನ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಅಲ್ಲದೆ ಹಲವಾರು ವರ್ಷ ದುಬೈ ಹಾಗೂ ಮಂಗಳೂರಿನಲ್ಲಿ ನೆಲೆಸಿ ಪ್ರಸ್ತುತ ಪತಿ ಆಲ್ವಿನ್ ಮಚಾದೋ, ಪುತ್ರ ಸಿಎ ವ್ಯಾಸಂಗ ಮಾಡುತ್ತಿರುವ ಆಶ್ಲಿರವರೊಂದಿಗೆ ಕೃಷ್ಣನಗರದಲ್ಲಿ ನೆಲೆಸಿರುತ್ತಾರೆ.
ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಕ್ಟರ್ ಶರೋನ್ ಡಿ’ಸೋಜರವರು ಡೊನ್ ಬೊಸ್ಕೊ ಕ್ಲಬ್ ಕೋಶಾಧಿಕಾರಿಯಾಗಿ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಪುತ್ತೂರು, ಮಂಗಳೂರು ಹಾಗೂ ಚಿಕ್ಕಮಗಳೂರು ವಿಭಾಗದ ಡಿವಿಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ನಲ್ಲಿ ಸ್ವಂತ ಉದ್ಯಮ ಕ್ಷೇತ್ರವಾದ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸ್ಥಾಪಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನೆಡೆಸುತ್ತಿದ್ದಾರೆ.
ಜೂ.14 ರಂದು ಪದ ಪ್ರದಾನ..
ನೂತನ ಕ್ಲಬ್ನ ಪದ ಪ್ರದಾನ ಸಮಾರಂಭವು ಜೂ.14 ರಂದು ಸಂಜೆ ಪಡೀಲು ಎಂಡಿಎಸ್ ಟ್ರಿನಿಟಿ ಸಭಾಭವನದಲ್ಲಿ ನೆರವೇರಲಿದ್ದು, 2023-24ರ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿ’ಸೋಜರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ನಿಕಟಪೂರ್ವ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ, ಪ್ರಥಮ ಉಪ ಜಿಲ್ಲಾ ಗವರ್ನರ್ ಬಿ.ಎಂ ಭಾರತಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಕುಡ್ಪಿ ಎ.ಶೆಣೈ, ಚೀಫ್ ಜಿಲ್ಲಾ ಜಿಇಟಿ ಕೋ-ಆರ್ಡಿನೇಟರ್ ಶಶಿಧರನ್ ಮಾರ್ಲರವರು ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ಎಕ್ಸ್ಟೆಂಶನ್ ಚೇರ್ಪರ್ಸನ್ಗಳಾಗಿ ಲ್ಯಾನ್ಸಿ ಮಸ್ಕರೇನ್ಹಸ್, ರೀಜನ್ 6, ವಲಯ 9ರ ವಲಯ ಚೇರ್ಪರ್ಸನ್ ಪಾವನ ರಾಮ, ಗೈಡಿಂಗ್ ಲಯನ್ಸ್ಗಳಾಗಿ ರೀಜನ್ 6, ವಲಯ ಒಂದರ ವಲಯ ಚೇರ್ಪರ್ಸನ್ ವಿನ್ನಿ ಮಸ್ಕರೇನ್ಹಸ್ ಉಪಸ್ಥಿತಲಿರುವರು ಎಂದು ಲಯನ್ಸ್ ಕ್ಲಬ್ ಮಾಣಿಯ ಅಧ್ಯಕ್ಷ ಪಿ.ಕೂಸಪ್ಪ ಪೂಜಾರಿ, ಕಾರ್ಯದರ್ಶಿ ವಿನ್ಸೆಂಟ್ ಲಸ್ರಾದೋ, ಕೋಶಾಧಿಕಾರಿ ಗಣೇಶ್ ಪೂಜಾರಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.