ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

0

ಪುತ್ತೂರು:ಕೊಳ್ತಿಗೆ ಮಣಿಕ್ಕರ ಸರಕಾರಿ ಪ್ರೌಢಶಾಲೆಯ 2024-25 ನೇ ಸಾಲಿನ ಪೋಷಕರ ಸಭೆ ಜೂ.22ರಂದು ನಡೆಯಿತು. ಸೈಯ್ಯದ್ ಗಫೂರ್ ಸಾಹೇಬ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾ ಶಾಲೆಯ ಸಮಗ್ರ ಕಾರ್ಯ ಯೋಜನೆಯ ಮಾಹಿತಿ ನೀಡುವುದರೊಂದಿಗೆ , ಪೋಷಕರ ಜವಾಬ್ದಾರಿ ಮತ್ತು ಮಕ್ಕಳ ಬಗ್ಗೆ ಗಮನವಿರಿಸಬೇಕಾದ ಅಂಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ತೆರವಾದ ಸ್ಥಾನಕ್ಕೆ ಹೊಸದಾಗಿ ನೇಮಕಗೊಂಡ ಎಸ್.ಡಿ.ಎಂ.ಸಿ. ಸದಸ್ಯರಾದ ಮೆಹರುಬಿ ಮತ್ತು ಗೀತಾ ಇವರನ್ನು ಸ್ವಾಗತಿಸಲಾಯಿತು, ವಿವಿಧ ಸಮಿತಿಗಳನ್ನು ರಚನೆ ಮಾಡಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು .ಕಾರ್ಯಕ್ರಮದಲ್ಲಿ ಎಲ್ಲಾ ಪೋಷಕರು ಹಾಗೂ ಎಸ್. ಡಿ ಎಮ್ , ಸಿ, ಅಧ್ಯಾಪಕ ವೃಂದ ಉಪಸ್ಥಿತರಿದ್ದರು. ಮುಖ್ಯಗುರು ನಳಿನಿ ಎಲ್ಲರನ್ನು ಸ್ವಾಗತಿಸಿ, ಉಮಾವತಿಯವರು ವಂದಿಸಿದರು. ಕರುಣಾಕರ ,ಗೀತಾ, ಸುಗುಣ, ಉಷಾ, ವಸಂತಿ.ಕೆ, ಪವಿತ್ರ ಸಹಕರಿಸಿದರು.

LEAVE A REPLY

Please enter your comment!
Please enter your name here