ಸಾಲ್ಮರ ಪದೇ ಪದೇ ಅಂಗಡಿ ಜಲಾವೃತ – ನಗರಸಭೆ ಮೌನ !

0

ಪುತ್ತೂರು: ಸಾಲ್ಮರ ಕೊಟೇಚಾ ಹಾಲ್ ಸಮೀಪ ಸೋಮನಾಥ ಎಂಬವರ ಅಂಗಡಿಯೊಂದು ಮಳೆಯ ಸಂದರ್ಭ ಪದೇ ಪದೇ ಜಲಾವೃತಗೊಳ್ಳುತ್ತಿದ್ದರೂ ಇಲ್ಲಿನ ತನಕ ನಗರಸಭೆ ಸೂಕ್ತ ಕ್ರಮ ಕೈಗೊಳ್ಳದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವರ್ಷದ ಮಳೆಗೆ ಈಗಾಗಲೇ ಮೂರು ನಾಲ್ಕು ಬಾರಿ ಅಂಗಡಿ ಜಲಾವೃತಗೊಂಡಿದೆ. ಜೂ.26ರಂದು ಬೆಳಿಗ್ಗೆ ಅಂಗಡಿ ಜಲಾವೃತಗೊಂಡಿದೆ.


ಕಳೆದ ಒಂದು ವರ್ಷದಿಂದ ಮಳೆ ಅಬ್ಬರ ಜಾಸ್ತಿಯಾದಾಗ ಅಂಗಡಿ ಜಲಾವೃತಗೊಳ್ಳುತ್ತದೆ. ಅಂಗಡಿಯೊಳಗೆ ಮಳೆ ನೀರು ಹೋಗಿ ಸೊತ್ತುಗಳು ಹಾನಿಯಾಗುತ್ತದೆ. ಆದರೆ ಇಲ್ಲಿನ ತನಕ ನಗರಸಭೆ ಇದಕ್ಕೆ ಸೂಕ್ತ ಪರಿಹಾರ ಕಂಡು ಕೊಂಡಿಲ್ಲ. ಜಲಸಿರಿ ಯೋಜನೆಯ ಪೈಪ್ ಅಳವಡಿಸುವ ಸಂದರ್ಭ ನಗರಸಭೆಯ ರಸ್ತೆಯ ಮೋರಿಗೆ ಅಡ್ಡವಾಗಿ ಪೈಪ್ ಅಳವಡಿಸಿದ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ ಮಳೆ ನೀರಿನ ಒತ್ತಡದಿಂದ ಚರಂಡಿಯಲ್ಲಿ ನೀರು ತುಂಬಿ ಅಂಗಡಿ ಜಲಾವೃತ್ತಗೊಳ್ಳುತ್ತಿದೆ. ಇದಕ್ಕೆ ಸಂಬಂಧಿಸಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ನಗರಸಭೆಯಿಂದ ಎರಡು ಮೂರು ಬಾರಿ ಚರಂಡಿ ಬ್ಲಾಕ್ ತೆರವು ಮಾಡಿದ್ದಾರೆ. ಆದರೆ ಸೂಕ್ತ ಪರಿಹಾರ ಕ್ರಮಕೈಗೊಂಡಿಲ್ಲದ ಪರಿಣಾಮ ಪದೇ ಪದೇ ಅಂಗಡಿ ಜಲಾವೃತ್ತಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here