ಪುತ್ತೂರು ಕ್ಷೇತ್ರ ಪ್ರತೀ ರಂಗದಲ್ಲೂ ಅಭಿವೃದ್ದಿ ಹೊಂದುತ್ತಿದೆ: ಕಾವು ಹೇಮನಾಥ ಶೆಟ್ಟಿ
ಪುತ್ತೂರು; ಅಶೋಕ್ ರೈಯವರು ಶಾಸಕರಾಗಿ ಆಯ್ಕೆಯಾದ ಬಳಿಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಲೇ ಇದ್ದು ಪ್ರತೀ ರಂಗದಲ್ಲೂ ಇದನ್ನು ಕಾಣಲು ಸಾಧ್ಯವಾಗಿದೆ ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿಯವರು ಹೇಳಿದರು.
ಅವರು ಪುತ್ತೂರು- ಕೌಡಿಚ್ಚಾರ್ ಸಿಟಿ ಬಸ್ ವ್ಯವಸ್ಥೆಗೆ ಕೌಡಿಚ್ಚಾರ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆ ಆಗಬೇಕು , ಇಲ್ಲಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕರಿಗೆ ತಿಳಿಸಿ ಸಿಟಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೆಲದಿನಗಳ ಹಿಂದೆ ಮನವಿ ಮಾಡಿದ್ದೆವು ಮನವಿಯನ್ನು ಪುರಸ್ಕರಿಸಿದ ಶಾಸಕರು ಕೆಲವೇ ದಿನಗಳಲ್ಲಿ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ ಇದಕ್ಕಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಪುತ್ತೂರು ಕ್ಷೇತ್ರಕ್ಕೆ ಈಗಾಗಲೇ ಶಾಸಕರು 1500 ಕೋಟಿ ರೂ ಅನುದಾನವನ್ನು ತಂದಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಶಾಸಕರು ಬಡವರ ಬಂಧುವಾಗಿ ಪ್ರಸಿದ್ದಿ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದ ಕೌಡಿಚ್ಚಾರ್‌ಗೆ ಸಿಟಿ ಬಸ್ ಬೇಕು ಎಂಬ ಬೇಡಿಕೆ ಇತ್ತು ಅದನ್ನು ಈಡೇರಿಸಲು ಯಾರಿದಂಲೂ ಸಾಧ್ಯವಾಗಿಲ್ಲ. ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ಉಧಾಹರಣೆಯಾಗಿದೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ಯಾರದೋ ಮಗುವಿಗೆ ಅಪ್ಪನಾಗಲು ಹೋಗಬೇಡಿ
ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆಯಾಗಲು ನಾವು ಕಾರಣ ಎಂದು ಕೆಲವರು ವ್ಯಾಟ್ಸಪ್‌ನಲ್ಲಿ ಹಾಕಿದ್ದನ್ನು ನಾನು ನೋಡಿದ್ದೇನೆ, ಯಾರೋ ಮಾಡಿದ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಲು ನಾಚಿಕೆಯಿಲ್ಲದ, ಮಾನ ಮರ್ಯಾದೆ ಇಲ್ಲದ ಕೆಲವರು ಈ ರೀತಿಯ ಪೋಸ್ಟ್‌ಗಳನ್ನು ಹಾಕಿದ್ದಾರೆ. ಯಾರದೋ ಮಗುವಿಗೆ ಅಪ್ಪನಾಗಲು ಹೋಗಬೇಡಿ. ಅರಿಯಡ್ಕ ಗ್ರಾಪಂ ನವರಿಗೆ ಸಿಟಿ ಬಸ್ ವ್ಯವಸ್ಥೆ ಮಾಡಲು ಈ ಹಿಂದೆ ಯಾಕೆ ಸಾಧ್ಯವಾಗಿಲ್ಲ, ಎಲ್ಲವೂ ನಿಮ್ಮದೇ ಕೈಯ್ಯಲ್ಲಿದ್ದಾಗ ಮಾಡಲು ಯಾಕೆ ಸಾಧ್ಯವಾಗಿಲ್ಲ, ಈಗ ಕಾಂಗ್ರೆಸ್ ಶಾಸಕರಿದ್ದಾರೆ, ಕಾಂಗ್ರೆಸ್ ಸರಕಾರ ಇದೆ ನಾವು ಮಾಡಿದ ಕೆಲಸವನ್ನು ಬೆಂಬಲಿಸಿ ಅದನ್ನು ಬಿಟ್ಟು ಜನರಿಗೆ ತಪ್ಪು ಮಾಹಿತಿ ನೀಡಿ ಮರ್ಯಾದೆ ಕಳೇದುಕೊಳ್ಳಬೇಡಿ ಎಂದು ಕಾವು ಹೇಮನಾಥ ಶೆಟ್ಟಿಯವರು ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದರು.
ಅಮ್ಚಿನಡ್ಕಕ್ಕೆ ಶೀಘ್ರವೇ ಸಿಟಿ ಬಸ್
ಅಮ್ಚಿಡನ್ಕದವರೆಗೂ ಶೀಘ್ರವೇ ಸಿಟಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ, ಈ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಶಾಸಕರಿದ್ದಲ್ಲಿ ಎಲ್ಲ ಕೆಲಸಗಳೂ ಆಗುತ್ತದೆ ಎಂಬ ನಂಬಿಕೆ ಜನ ಸಾಮಾನ್ಯರಲ್ಲಿ ಇದೆ. ನಾವು ಬಡವರ ಕಷ್ಟಗಳಿಗೆ ಸ್ಪಂಧಿಸುವ ಮನಸ್ಸುಳ್ಳವರು ನಾವು ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಜಾಯಾಮಾನದವರಲ್ಲ ನಾವು ಎಂದೆಂದೂ ಅಭಿವೃದ್ದಿ ಪರವಾಗಿಯೇ ಇರುವವರು ಎಂದು ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ಗ್ಯಾರಂಟಿ ಉಚಿತ,ಸಿಟಿಬಸ್ ಖಚಿತ
ಸಿಟಿ ಬಸ್ ಎರಡು ದಿನದಲ್ಲಿ ನಿಲ್ಲುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಮಾಡಿದ ಯೋಜನೆ ಯಾವುದೂ ನಿಲ್ಲುವುದಿಲ್ಲ, ಗ್ಯಾರಂಟಿ ಯೋಜನೆಯ ಬಗ್ಗೆಯೂ ಬಿಜೆಪಿ ನಿಲ್ಲುತ್ತದೆ ಎಂದು ಅಪಪ್ರಚಾರ ಮಾಡಿದ್ದರು ಅದು ನಿಲ್ಲಲಿಲ್ಲ. ಗ್ಯಾರಂಟಿ ಉಚಿತ ಸಿಟಿ ಬಸ್ ಇನ್ನು ಖಚಿತವಾಗಿಯೂ ಬಂದೇ ಬರುತ್ತದೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣವಿದೆ. ಆಧಾರ್ ಕಾರ್ಡು ಹಿಡಿದು ಎಲ್ಲರೂ ಪ್ರಯಾಣಿಸಬಹುದು. ಗ್ಯಾರಂಟಿ ಯೋಜನೆಯನ್ನು ಅಪಹಾಸ್ಯ ಮಾಡಿದವರೂ ಉಚಿತವಾಗಿ ಬಸ್ಸಲ್ಲಿ ಪ್ರಯಾಣ ಮಾಡಬಹುದು ಎಂದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಹೇಳಿದರು.
ಬಸ್ ಕೊಟ್ಟದ್ದು ಶಾಸಕ ಅಶೋಕ್ ರೈ
ಕೌಡಿಚ್ಚಾರ್‌ಗೆ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿದ್ದು ಶಾಸಕ ಅಶೋಕ್ ರೈಯವರು. ಕುಂಬ್ರದ ವರೆಗೆ ಇದ್ದ ಬಸ್ಸನ್ನು ಇಲ್ಲಿಯವರೆಗೆ ಬಂದು ಹೋಗುವಂತೆ ನಾನು ಮತ್ತು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿಯವರು ಮನವಿ ಮಾಡಿದ್ದರ ಪರಿಣಾಮ ಬಸ್ಸು ಬಂದಿದೆ ವಿನ ಯಾವುದೇ ನಿರ್ಣಯ ಮಾಡಿದ್ದರ ಪ್ರಭಾವ ಅಲ್ಲ. ಅರಿಯಡ್ಕ ಗ್ರಾಪಂ ನ ಕೆಲವು ಸದಸ್ಯರು ಸಿಟಿ ಬಸ್ ವ್ಯವಸ್ಥೆಯನ್ನು ಕಂಡು ಮರುಗಿದ್ದಾರೆ, ಅವರಿಗೆ ಇಷ್ಟು ದಿನ ಮಾಡ್ಲಿಕ್ಕೆ ಸಾಧ್ಯವಾಗಿಲ್ಲ ನಾವು ಮಾಡಿದ್ದನ್ನು ಸ್ವಾಗತಿಸಿ ಬಸ್ಸಲ್ಲಿ ಪ್ರಯಾಣಿಸಲಿ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ನಾವು ಮಾಡಿದ್ದನ್ನು ಉದ್ಘಾಟನೆ ಮಾಡಲು ನಮಗೆ ಗೊತ್ತಿದೆ: ಅಶೋಕ್ ಪೂಜಾರಿ
ಸಿಟಿ ಬಸ್ ಕಾಂಗ್ರೆಸ್ ಶಾಸಕರು ಮಾಡಿದ ವ್ಯವಸ್ಥೆ ಅದನ್ನು ಉದ್ಘಾಟನೆ ಮಾಡಲು ಕಾಂಗ್ರೆಸ್ಸಿಗರಾದ ನಮಗೆ ಗೊತ್ತಿದೆ. ನಮ್ಮ ಶಾಸಕರು ಮಾಡಿದ್ದನ್ನು ಯಾರೋ ಉದ್ಘಾಟನೆ ಮಾಡುವುದು ಬೇಡ ಮತ್ತು ಅದರ ಲಾಭವನ್ನು ಪಡೆದುಕೊಳ್ಳುವ ಯತ್ನ ಮಾಡುವುದು ಬೇಡ ಎಂದು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಹೇಳಿದರು. ಈ ಹಿಂದೆ ನಿಮ್ಮ ಸರಕಾರ ಇತ್ತು ನಿಮ್ಮ ಶಾಸರಕೇ ಇದ್ದರು ಆವಾಗ ಸಿಟಿ ಬಸ್ ವ್ಯವಸ್ಥೆ ಮಾಡ್ಲಿಕ್ಕೆ ನಿಮ್ಮಿಂದ ಸಾಧ್ಯವಾಗಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲೇ ಇರಲು ಲಾಯಕ್ಕು ಎಂದು ಹೇಳಿದರು.
ನಾವು ಬಸ್ ಬಿಟ್ಟಿದ್ದೇವೆ
ಬಿಜೆಪಿಯವರು ರೈಲೇ ಬಿಟ್ಟದ್ದು
ನಾವು ವಿದ್ಯಾರ್ಥಿಗಳ, ಸಾರ್ವಜನಿಕರ ಸಂಕಷ್ಟವನ್ನು ಅರಿತು ಅವರಿಗೆ ಪ್ರಯೋಜನವಾಗಲೆಂದು ಸಿಟಿ ಬಸ್ ಬಿಟ್ಟಿದ್ದೇವೆ ಆದರೆ ಬಿಜೆಪಿಯವರು ಇಷ್ಟು ವರ್ಷ ಅದು ಮಾಡುತ್ತೇವೆ ಇದು ಮಾಡುತ್ತೇವೆ ಎಂದು ರೈಲೇ ಬಿಟ್ಟಿದ್ದು ವಿನ ಜನಪರ ಕೆಲಸ ಯಾವುದನ್ನೂ ಮಾಡಲಿಲ್ಲ. ಪಂಚಾಯತ್‌ನಲ್ಲೇ ಸರಿಯಗಿ ಆಡಳಿತ ನಡೆಸಲು ಸಾಧ್ಯವಾಗದ ಇವರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವುದು ಹೇಗೆ ಎಂದು ಅಶೋಕ್ ಪೂಜಾರಿ ಬೊಳ್ಳಾಡಿ ಪ್ರಶ್ನಿಸಿದರು.
ಪಟಾಕಿ ಸಿಡಿಸಿ ಸಂಭ್ರಮ
ಬಸ್ಸು ಕೌಡಿಚ್ಚಾರ್ ತಲುಪುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಬಸ್ಸಿಗೆ ಹೂವಿನ ಹಾರ ಹಾಕಿದರು. ತೆಂಗಿನ ಕಾಯಿ ಒಡೆಯುವ ಮೂಲಕ ಸ್ವಾಗತ ಮಾಡಿದರು. ಕೌಡಿಚ್ಚಾರ್‌ನಿಂದ ಶೇಕಮಲೆ ತನಕ ಬಸ್ಸಿನಲ್ಲಿ ಟಿಕೆಟ್ ನೀಡಿ ಪ್ರಯಾಣ ಮಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಗ್ರಾಪಂ ಸದಸ್ಯೆ ಜಯಂತಿ ಪಟ್ಟುಮೂಲೆ, ವಿನುತಾ, ಒಳಮೊಗ್ರು ಗ್ರಾಪಂ ಸದಸ್ಯರಾದ ಶೀನಪ್ಪ ನಾಯ್ಕ್, ಕಾಂಗ್ರೆಸ್ ಮುಖಂಡರುಗಳಾದ ರಾಜೀವ ರೈ ಕುತ್ಯಾಡಿ, ಶಿವರಾಮ ಮಣಿಯಾಣಿ, ಚಂಧ್ರಶೇಖರ ಮಣಿಯಾಣಿ ಕುರಿಂಜ, ಸುಂದರ ಮುಂಡಕೊಚ್ಚಿ, ರವಿಮುಡಂಕೊಚ್ಚಿ, ಶೀನಪ್ಪ ಮುಂಡಕೊಚ್ಚಿ, ಬಶೀರ್ ಕೌಡಿಚ್ಚಾರ್, ಮಹಮ್ಮದ್ ಬೊಳ್ಳಾಡಿ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ವಿಠಲ್ ನಾಯ್ಕ್ ಬಳ್ಳಿಕಾನ, ಗಂಗಾಧರ ಪಾಠಾಳಿ ಪಟ್ಟುಮೂಲೆ, ಅನ್ನಪೂರ್ಣಿಮಾ ರೈ ಕುತ್ಯಾಡಿ,ಹನೀಫ್ ಶೇಕಮಲೆ, ರಫೀಕ್ ದರ್ಖಾಸು, ಕೇಶವ ಶೇಕಮಲೆ,ರವಿ ಜಾರತ್ತಾರು, ಶಿವರಾಮ ಮಣಿಯಾಣಿ ಪೊನ್ನತ್ತಲಕ,ಇಸ್ಮಾಯಿಲ್ ಹೊಸಗದ್ದೆ, ಬದ್ರು ಪರ್ಪುಂಜ, ಜೀವನ್ ಕುರಿಂಜ, ಚಂದ್ರ ಮಣಿಯಾಣಿ ಕುಂಟಾಪು ಮೊದಲಾದವರು ಉಪಸ್ಥಿತರಿದ್ದರು.