ಭಾರಿ ಗಾಳಿ-ಮಳೆ: ಬಲ್ಯ ಹಿ.ಪ್ರಾ.ಶಾಲೆಯ ಕಟ್ಟಡದ ಛಾವಣಿಗೆ ಹಾನಿ-ಗಾಳಿಗೆ ಹಾರಿದ ಹಂಚುಗಳು – ತರಗತಿಯೊಳಗೆ ನೀರು

0

ಕಡಬ: ಇಂದು ಮಧ್ಯಾಹ್ನ ಬೀಸಿದ ಭಾರಿ ಗಾಳಿ-ಮಳೆಗೆ ಬಲ್ಯ ಹಿ.ಪ್ರಾ.ಶಾಲೆಯ ಕಟ್ಟಡದ ಛಾವಣಿಗೆ ಹಾನಿಯಾದ ಘಟನೆ ನಡೆದಿದೆ.
ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದು ಕಟ್ಟಡದ ಹಂಚುಗಳು ಗಾಳಿಗೆ ಹಾರಿ ಹೋಗಿದ್ದು, ತರಗತಿಗಳಿಗೆ ನೀರು ಸೋರಿಕೆಯಾಗಿದೆ. ಛಾವಣಿಯನ್ನು ದುರಸ್ತಿ ಮಾಡದಿದ್ದರೆ ತರಗತಿ ನಡೆಸಲು ಅಸಾಧ್ಯವಾಗಲಿದೆ.


ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಪಂಚಾಯತ್ ಸದಸ್ಯರಾದ ಮೀನಾಕ್ಷಿ ನೆಲ್ಲ, ಎಸ್ ಡಿ ಎಂ ಸಿ ಸದಸ್ಯರಾದ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ.ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು ಬಲ್ಯ ಮತ್ತಿತರರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here