ಕೊಂಬೆಟ್ಟು: ಶಾಲಾ ಬಳಿ ಎರಡು ಕಡೆ ರಸ್ತೆಗೆ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿ

0

ಪುತ್ತೂರು: ಭಾರೀ ಮಳೆಗೆ ಜು.15 ರಂದು ಬೆಳಗ್ಗಿನ ಜಾವ ಕೊಂಬೆಟ್ಟು ಶಾಲಾ ಬಳಿ ಎರಡು ಕಡೆ ಮರಗಳು ರಸ್ತೆಗೆ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ತಾಲೂಕು ಕ್ರೀಡಾಂಗಣಕ್ಕೆ ಹೋಗುವ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಕೊಂಬೆಟ್ಟು ಶಾಲೆಗೆ ಹೋಗುವ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಕೊಂಬೆಟ್ಟು ವಿದ್ಯಾರ್ಥಿಗಳ ನಿಲಯದ ಆವರಣದಲ್ಲಿದ್ದ ಮರ ತಾಲೂಕು ಕ್ರೀಡಾಂಗಣಕ್ಕೆ ಹೋಗುವ ರಸ್ತೆಗೆ ಬಿದ್ದಿದೆ. ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದು ವಿದ್ಯುತ್ ತಂತಿಗಳು‌ ಕಡಿದು ಹೋಗಿದೆ.

ಕೊಂಬೆಟ್ಟು ರಸ್ತೆಯನ್ನು ಮತ್ತು ತಾಲೂಕು ಕ್ರೀಡಾಂಗಣವನ್ನು ಬಳಸಿಕೊಂಡು ಹಲವು ವಿದ್ಯಾರ್ಥಿಗಳು ಕೊಂಬೆಟ್ಟು ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಗೆ ಹೋಗುವ ಸಮಯದಲ್ಲೇ ರಸ್ತೆಯಲ್ಲಿ ಮರ  ಬಿದ್ದಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾದ್ದರಿಂದ ಅನಾಹುತವೊಂದನ್ನು ತಪ್ಪಿದೆ.

LEAVE A REPLY

Please enter your comment!
Please enter your name here