ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ರೂ.2,07,75,280.83 ವ್ಯವಹಾರ 2,52 ಲಕ್ಷ ರೂ, ನಿವ್ವಳ ಲಾಭ 73 ಪೈಸೆ ಬೋನಸ್ ಶೇ.12 ಡಿವಿಡೆಂಡ್

ಸವಣೂರು: ಪಾಲ್ತಾಡಿ ಗ್ರಾಮದ ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಜು. 20ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರತಿ ದಿನ 600ಕ್ಕೂ ಹೆಚ್ಚು ಹಾಲು ಶೇಖರಣೆ ಆಗಲಿ- ಡಾ.ಸತೀಶ್ ರಾವ್
ದ.ಕ. ಸಹಕಾರಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಹೈನುಗಾರರು ಹಾಲು ಉತ್ವದನೆಯತ್ತ ಹೆಚ್ಚು ಗಮನಹರಿಸಬೇಕು, ಬಂಬಿಲ ಹಾಲು ಸೊಸೈಟಿಯಲ್ಲಿ ಹಾಲು ಜಾಸ್ತಿ ಆಗಿದೆ. ಇಲ್ಲಿ ಉತ್ತಮ ಆಡಳಿತ ಮಂಡಳಿ ಇದೆ, ಕಾರ್‍ಯದರ್ಶಿಯವರು ಅತ್ಯಂತ ಕ್ರೀಯಾಶೀಲರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ, ಸಂಘಕ್ಕೆ ಸಿಗಬೇಕಾದ ಸವಲತ್ತು ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬಂಬಿಲ ಹಾಲು ಸೊಸೈಟಿಗೆ ನೂತನ ಕಟ್ಟಡ ಆಗುತ್ತಿರುವ ವಿಚಾರ ತುಂಬಾ ಸಂತೋಷ ತಂದಿದೆ. ಎಲ್ಲ ರೀತಿಯಿಂದಲೂ ಬಂಬಿಲ ಹಾಲು ಉತ್ವಾದಕರ ಸಹಕಾರ ಮುಂಚೂಣಿಯಲ್ಲಿ ಇದೆ. ಮುಂದಿನ ದಿನಗಳಲ್ಲಿ ಪ್ರತಿ ದಿನ ಇಲ್ಲಿ ೬೦೦ಕ್ಕೂ ಹೆಚ್ಚು ಹಾಲು ಶೇಖರಣೆ ಆಗಲಿ ಎಂದು ಹೇಳಿದರು.

ಹನಿ ಹನಿ ಹಾಲು ಅಮೂಲ್ಯ- ಶ್ರೀದೇವಿ
ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀ ದೇವಿ ಎನ್‌ರವರು ಮಾತನಾಡಿ, ಹನಿ ಹನಿ ಹಾಲು ಅಮೂಲ್ಯವಾದದ್ದು, ರೈತರು ಹೆಚ್ಚು ಕ್ರಿಯಾಶೀಲರಾಗಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.

ಸಂಘದ ಅಭಿವೃದ್ಧಿಗೆ ಸಹಕರಿಸಬೇಕು- ಜಯಪ್ರಕಾಶ್ ಎನ್.ಆರ್
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಯಪ್ರಕಾಶ್ ಎನ್.ಆರ್ ಅವರು ವರದಿ ಸಾಲಿನಲ್ಲಿ ಸಂಘವು ರೂ. 2,02,75,250.83 ವ್ಯವಹಾರ ಮಾಡಿದ್ದು, 2.52 ಲಕ್ಷ ರೂ ನಿವ್ವಳ ಲಾಭ ಗಳಿಸಿದೆ. ಲೀಟರ್‌ಗೆ 73 ಪೈಸೆ ಬೋನಸ್ ನೀಡಲಾಗುವುದು. ಶೇ.12ಡಿವಿಡೆಂಡ್ ನೀಡಲಾಗುವುದು. ಸಂಘದ ಬೆಳವಣಿಗೆಗಾಗಿ ಗುಣಮಟ್ಟದ ಹಾಲು ಪೂರೈಸಬೇಕು. ಹೆಚ್ಚು ಹಾಲು ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ವರ್ಷದೊಳಗೆ ಕಟ್ಟಡ ಪೂರ್ಣ- ಇಂದಿರಾ ಬಿ.ಕೆ.
ಸಂಘದ ನಿರ್ದೇಶಕಿ ಇಂದಿರಾ ಬಿ.ಕೆರವರು ಮಾತನಾಡಿ ಪರಣೆ ದಿ.ಬಾಳಪ್ಪ ಗೌಡ ಅವರ ಮಕ್ಕಳು ತಮ್ಮ ಅಧೀನದಲ್ಲಿ ಇದ್ದ ಜಾಗವನ್ನು ಸೊಸೈಟಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳದಾನವನ್ನು ಮಾಡಿರುತ್ತಾರೆ, ಈ ಪ್ರಕ್ರಿಯೆಯಲ್ಲಿ ಸಹಕಾರವನ್ನು ನೀಡಿದ ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಕುಂಜಾಡಿ ಸುಧೀರ್ ಕುಮಾರ್ ರೈ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಹಾಗೂ ಸವಣೂರು ಗ್ರಾ.ಪಂ, ಸದಸ್ಯ ಸತೀಶ್ ಅಂಗಡಿಮೂಲೆರವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಕೆಲಸವನ್ನು ಮಾಡುವಲ್ಲಿ ನಮಗೆ ಸಂಘದ ಅಧ್ಯಕ್ಷರು ಪೂರ್ಣರೀತಿಯ ಬೆಂಬಲವನ್ನು ನೀಡಿದ್ದರು ಎಂದು ಹೇಳಿ, ಸಂಘದ ನೂತನ ಕಟ್ಟಡ ವರ್ಷದೊಳಗೆ ಪೂರ್ಣಗೊಳಿಸಬೇಕೆಂಬ ಯೋಜನೆ ಇದ್ದು, ಇದಕ್ಕೆ ಎಲ್ಲರೂ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಹಾಲಿಗೆ ರೇಟು ಜಾಸ್ತಿ ಮಾಡುವಂತೆ ನಿರ್ದೇಶಕ ಅನ್ನಪೂರ್ಣ ಪ್ರಸಾಧ್ ರೈ ಒತ್ತಾಯಿಸಿದಾಗ, ಒಕ್ಕೂಟದ ಉಪವ್ಯವಸ್ಥಾಪಕ ಡಾ.ಸತೀಶ್ ರಾವ್ ರವರು ಮಾಶತನಾಡಿ ಇದು ರಾಜ್ಯ ಸರಕಾರದ ಮಟ್ಟದಲ್ಲಿ ಆಗುವ ಕೆಲಸವಾಗಿದ್ದು, ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಕಳಿಸೋಣ ಎಂದರು. ವಸಂತ ಗೌಡ ಪರಣೆ, ಸುರೇಶ್ ಬಂಬಿಲ ದೋಳರವರು ವಿವಿಧ ಸಲಹೆ ಸೂಚನೆಯನ್ನು ನೀಡಿದರು.

ಸಂಘಕ್ಕೆ ಹೆಚ್ಚು ಹಾಲು ಪೂರೈಸಿ ಪ್ರಥಮ ಸ್ಥಾನ ಪಡೆದ ಗಣೇಶ್ ಬಿ, ದ್ವಿತೀಯ ಉಷಾ ಬಿ.ಕೆ, ತೃತೀಯ ಜಯಪ್ರಕಾಶ್ ಎನ್.ಆರ್. ನಾಲ್ಕನೇ ಸ್ಥಾನವನ್ನು ಪ್ರಕಾಶ್ ಪೂಜಾರಿ ಹಗೂ ಐದನೇ ಸ್ತಾನವನ್ನು ಪಡೆದ ಸುರೇಶ್ ಬಿ ಇವರಿಗೆ ಬಹುಮಾನ ನೀಡಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಸ್ಟೀಲ್ ಪಾತ್ರೆ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕುಸುಮಾ ಎ., ಗಣೇಶ್ ನಾಯ್ಕ, ವಿಠಲ ಶೆಟ್ಟಿ, ಬಿ.ಜೆ. ಭಾಸ್ಕರ ರೈ ಕುಂಜಾಡಿ, ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೋಮಲ ಅವರು ವರದಿ ವಾಚಿಸಿದರು. ಹಾಲು ಪರೀಕ್ಷಕಿ ವಿಮಲ ಸಹಕರಿಸಿದರು.
ಸಮಾರಂಭದಲ್ಲಿ ಮುಕ್ಕೂರು ಹಾಲು ಉತ್ವಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ್ ಆಳ್ವ, ಬೆಳಂದೂರು ಗ್ರಾ.ಪಂ, ಸದಸ್ಯೆ ತೇಜಾಕ್ಷಿ ಕೊಡಂಗೆ, ಬಂಬಿಲ ಹಾಲು ಉತ್ವಾದಕರ ಸಹಕಾರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಸಂಘದ ನಿರ್ದೇಶಕಿ ಇಂದಿರಾ ಬಿ.ಕೆ ಪ್ರಾರ್ಥನೆಗೈದರು, ಉಪಾಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ವಂದಿಸಿದರು. ನಿರ್ದೇಶಕ ಅನ್ನಪೂರ್ಣ ಪ್ರಸಾದ್ ರೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here