ಪುತ್ತೂರು: ಕುರಿಯ ಗ್ರಾಮದ ಡಿಂಬ್ರಿಗುತ್ತು ದಿ.ವಿಠಲ ರೈಯವರ ಪತ್ನಿ ಸರಸ್ವತಿ ವಿ.ರೈ ಕುರ್ಲೆತ್ತಿಮಾರು(84 ವ) ರವರು ಜು. 24 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಕಬಕ ಶಾಂತಿ ಇಲೆಕ್ಟ್ರಿಕಲ್ಸ್ ಮಾಲಕ ಸತೀಶ್ ರೈ ಡಿಂಬ್ರಿಗುತ್ತು, ಪುತ್ರಿ ಶಶಿಪ್ರಭಾ ಶೆಟ್ಟಿ, ಸೊಸೆ ಪ್ರಮೋದ ಎಸ್.ರೈ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರುಗಳು ಭೇಟಿ ನೀಡಿ, ಸಂತಾಪ ಸೂಚಿಸಿದರು.