ನಿಡ್ಪಳ್ಳಿ; ಇಲ್ಲಿಯ ಕೂಟೇಲು ಎಂಬಲ್ಲಿ ತೋಡಿನ ಬದಿ ಧರೆ ಕುಸಿದು ಕೃಷಿಗೆ ಅಪಾರ ಹಾನಿ ಸಂಭವಿಸಿದ ಘಟನೆ ಜು.30 ರಂದು ನಡೆದಿದೆ.
ಕೂಟೇಲು ಬಾಬು ಪಾಟಾಳಿಯವರ ಜಾಗದ ತೋಡಿನ ಬದಿ ಎತ್ತರವಾದ ಧರೆ ಭಾರೀ ಸುರಿದ ಮಳೆಗೆ ಮಧ್ಯಾಹ್ನ ಕುಸಿದು ಬಿದ್ದಿದೆ.ಕುಸಿದು ಬಿದ್ದ ಬೃಹತ್ ಮಣ್ಣು ತೋಡಿಗೆ ಅಡ್ಡಲಾಗಿ ಬಿದ್ದ ಪರಿಣಾಮ ತೋಡಿನಲ್ಲಿ ವಿಪರೀತ ನೀರು ಹರಿಯುತ್ತಿದ್ದ ಕಾರಣ ನೀರು ಹರಿಯಲಾಗದೆ ಕಟ್ಟಪುಣಿ ಜರಿದು ನೀರು ಅಡಿಕೆ ತೋಟಕ್ಕೆ ನುಗ್ಗಿ ಇಡೀ ತೋಟ ಜಲಾವೃತಗೊಂಡಿದೆ.ಈ ನೀರು ನೆರೆಯ 3 ಜನರ ಅಡಿಕೆ ತೋಟಕ್ಕೆ ನುಗ್ಗಿದ್ದು ಕೃಷಿ ನಾಶವಾಗಿ ಅಪಾರ ನಷ್ಟ ಸಂಭವಿಸಿದೆ.ತೋಡಿನ ಬದಿ ಸಾರ್ವಜನಿಕ ಕಾಲುದಾರಿ ಇದ್ದು ಇದೀಗ ಕಾಲು ದಾರಿಯೆ ಇಲ್ಲದಾಗಿದ್ದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್, ಪಿಡಿಒ ಸಂಧ್ಯಾಲಕ್ಷ್ಮೀ, ಗ್ರಾಮ ಅಡಳಿತ ಅಧಿಕಾರಿ ಸುನೀತಾ ಕುಮಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.