ಸವಣೂರು ಕ್ಲಸ್ಟರ್ ಸಿ.ಆರ್.ಪಿಯಾಗಿ ಜಯಂತ್ ವೈ

0

ಕಾಣಿಯೂರು: ಕೊಂಡಾಡಿಕೊಪ್ಪ ಶಾಲಾ ಮುಖ್ಯೋಪಾಧ್ಯಾಯ ಜಯಂತ್ ವೈ ಯವರು ಸವಣೂರು ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ನೇಮಕಗೊಂಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ನಿರ್ದಿಷ್ಟ ಪಡಿಸಿದ ಹುದ್ದೆಗಳ ಅರ್ಹತಾ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಿ.ಆರ್.ಪಿಯಾಗಿ ಆಯ್ಕೆಯಾಗಿದ್ದರು.

ಈ ಹಿಂದೆ 2013 ರಿಂದ 2017 ರವರೆಗೆ ಕಾಣಿಯೂರು ಕ್ಲಸ್ಟರ್ ನ ಸಿ.ಆರ್.ಪಿಯಾಗಿದ್ದ ಇವರು ಹಲವಾರು ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಇವರ ಶೈಕ್ಷಣಿಕ ಕಾರ್ಯಗಳನ್ನು ಗುರುತಿಸಿ ಶಿಕ್ಷಣ ಇಲಾಖೆಯು 2019ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.ರಾಜ್ಯ ಯೋಗ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ 676 ಶಿಕ್ಷಕರಿಗೆ ಯೋಗ ತರಬೇತಿಯನ್ನು ನೀಡಿರುತ್ತಾರೆ.ಕ್ರಿಯಾಶೀಲ ಶಿಕ್ಷಕರಾಗಿ ರುವ ಇವರನ್ನು ಕೊರೋನಾ ಸಂದರ್ಭದಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ 2021 ರಲ್ಲಿ ಕಡಬ ತಾಲೂಕು ಆಡಳಿತ ವತಿಯಿಂದ ಗೌರವಿಸಲಾಯಿತು.ಮೈಸೂರು ಯೋಗ ಫೌಂಡೇಶನ್ ವತಿಯಿಂದ ಯೋಗ ಭೂಷಣ ಪ್ರಶಸ್ತಿ ಪುರಸ್ಕೃತ ರಾಗಿರುವ ಇವರು ರಜಾ ಅವಧಿಯಲ್ಲಿ ಶಾಲಾ ಮಕ್ಕಳಿಗೆ ಜಾನಪದ ನೃತ್ಯ, ಯಕ್ಷಗಾನ, ನೃತ್ಯ ತರಬೇತಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here