ಹಿರೇಬಂಡಾಡಿ:ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಹಿರೇಬಂಡಾಡಿ,ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ,ಯುವ ಒಕ್ಕಲಿಗ ಗೌಡ ಸೇವಾ ಸಂಘ,ಮಹಿಳಾ ಘಟಕ ಇವುಗಳ ಸಹಯೋಗದಲ್ಲಿ ಒಕ್ಕಲಿಗ ಗೌಡರ ಆಟಿ ಗೌಜಿ ಕಾರ್ಯಕ್ರಮ ಮರದಮೇಲು ಶಿವನಗರ ಮಂಜುಶ್ರೀ ಭಜನಾ ಮಂದಿರದಲ್ಲಿ ಜು 28 ರಂದು ನಡೆಯಿತು.
ಉದ್ಘಾಟನಾ ಕಾರ್ಯಕ್ರಮ
ಕಾರ್ಯಕ್ರಮವನ್ನು ಪುತ್ತೂರು ನಗರ ಠಾಣಾ ಎ ಎಸ್ ಐ ಮೋನಪ್ಪ ಗೌಡ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಹಿರೇಬಂಡಾಡಿ ಮಾಗಣೆ ಗೌಡ್ರು ಆಗಿರುವ ಯಾನಪ್ಪ ಗೌಡ ಬಂಡಾಡಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಿರೇಬಂಡಾಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ನಿತಿನ್ ತಾರಿತ್ತಡಿ,ಹೇಮಂತ್ ಮೈತಳಿಕೆ, ಹೇಮಾವತಿ ಪಟಾರ್ತಿ ಉಪಸ್ಥಿತರಿದ್ದರು.ಹಿರೇಬಂಡಾಡಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಹೆನ್ನಾಳ ಸ್ವಾಗತಿಸಿ, ಗಣೇಶ್ ಮಠಂದೂರು ವಂದಿಸಿದರು.
ಸಮಾರೋಪ ಕಾರ್ಯಕ್ರಮ
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಮುಖ್ಯ ಅತಿಥಿಗಳಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು , ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ ವಿ ಮನೋಹರ್ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು, ವೇದಿಕೆಯಲ್ಲಿ ಒಕ್ಕಲಿಗ ಸ್ವ ಸಹಾಯ ಸಂಘಗಳ ಉಪ್ಪಿನಂಗಡಿ ವಲಯ ಅಧ್ಯಕ್ಷ ಗಂಗಯ್ಯ ಗೌಡ ಕನ್ನಡಾರು, ಹಿರೇಬಂಡಾಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಧಾಕರ ಕಜೆ,ಒಕ್ಕಲಿಗ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ವಿನೋದ್ ಸಿಂಕ್ರು ಕೊಡಂಗೆ,ಯುವ ಘಟಕದ ಅಧ್ಯಕ್ಷ ಗುರುರಾಜ್ ಹೊಸಮನೆ,ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ಹೆನ್ನಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ ಗೌಡ ಕಜೆ ಸ್ವಾಗತಿಸಿ,ವಿನೋದ್ ಸಿಂಕ್ರುಕೊಡಂಗೆ ವಂದಿಸಿದರು.ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಮೇಲ್ವಿಚಾರಕಿ ಸುಮಲತಾ ಕಾರ್ಯಕ್ರಮ ನಿರ್ವಹಿಸಿದರು.
ಗೌರವಾರ್ಪಣೆ/ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಸರಕಾರಿ ಸೇವೆಯಲ್ಲಿ 2024 ಜ 1 ರ ನಂತರ ನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಸೀತಾರಾಮ ಗೌಡ ಬಿ, ನಿವೃತ್ತ ಶಿಕ್ಷಕಿ ದೇಜಮ್ಮ ಇವರುಗಳನ್ನು ಶಾಲು ಹಾರ ಸ್ಮರಣಿಕೆ ಹೂಗುಚ್ಛ ನೀಡಿ ಗೌರವಿಸಲಾಯಿತು.
2023 -2024 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ಕೃಪಾ ಕೆ,ಬಿಪಿನ್,ಮೈನಾಶ್ರಿ ಮತ್ತು ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾದ 2024 ನೇ ಸಾಲಿನ ಸಿ ಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಯಜ್ಞೇಶ್ ಕೆ, ರಾಷ್ಟ್ರಮಟ್ಟದ ಇನ್ಸ್ ಫೈರ್ ಅವಾರ್ಡ್ ಮಾನಕ್ ಗೆ ಆಯ್ಕೆಗೊಂಡ ವಚನ್ ಇವ ಸನ್ಮಾನಿಸಲಾಯಿತು.ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಪ್ರಯುಕ್ತ ನಡೆದ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಮತ್ತು ತೃತೀಯ ಬಹುಮಾನಕ್ಕೆ ಆಯ್ಕೆಗೊಂಡ ವರಲಕ್ಷ್ಮಿ ಮತ್ತು ಧನಲಕ್ಷ್ಮಿ ಒಕ್ಕಲಿಗ ಸ್ವ ಸಹಾಯ ಸಂಘಗಳಿಗೆ ಬಹುಮಾನದ ಚೆಕ್ ಮತ್ತು ಹಿರೇಬಂಡಾಡಿ ಒಕ್ಕೂಟದ ಅತ್ಯತ್ತಮ ಸಂಘ ಪ್ರಶಸ್ತಿ ಗೆ ಆಯ್ಕೆಗೊಂಡ ಆದಿಶಕ್ತಿ ಒಕ್ಕಲಿಗ ಸ್ವಸಹಾಯ ಸಂಘ ಪಿಲ್ಲೆಂಕಿ ಇದರ ಸದಸ್ಯರಗಳಿಗೆ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವಿವಿಧ ಆಟೋಟ ಸ್ಪರ್ಧೆ,ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ಮಕ್ಕಳಿಗೆ, ಮಹಿಳೆಯರಿಗೆ,ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ, ಸಮಾರೋಪ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಿತು.